Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊಕೊಕ್ಚಂಗ್ » ಹವಾಮಾನ

ಮೊಕೊಕ್ಚಂಗ್ ಹವಾಮಾನ

ಅಕ್ಟೋಬರ್-ಮಾರ್ಚ್ ಪ್ರವಾಸಕ್ಕೆ ಸೂಕ್ತ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆದಿವಾಸಿ ಪಂಗಡದವರು ಹೊಸ ವರ್ಷವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಈ ಸಮಯದಲ್ಲಿ ಕಾಣಬಹುದು.

ಬೇಸಿಗೆಗಾಲ

ಮೊಕೊಕ್ಚೊಂಗ್‌ನಲ್ಲಿ ಬೇಸಿಗೆ ತೀಕ್ಷ್ಣವಾಗಿರುವುದಿಲ್ಲ. ಮೊಕೊಕ್ಚೊಂಗ್ ಅಸ್ಸಾಂನ ಬಯಲು ಪ್ರದೇಶದಲ್ಲಿದ್ದರೂ ಕೂಡ ಇಲ್ಲಿ ಬೇಸಿಗೆ ತೀವ್ರವಾಗಿರುವುದಿಲ್ಲ. ರಾತ್ರಿಗಳು ಬೇಸಿಗೆಯಲ್ಲಿ ಕೂಡ ತಂಪಾಗಿರುತ್ತದೆ. ಬೇಸಿಗೆಯಲ್ಲಿ ಇಲ್ಲಿ ಗರಿಷ್ಠ ಉಷ್ಣಾಂಶವು 27 ಡಿಗ್ರಿಗಳಷ್ಟಿರುತ್ತದೆ.

ಮಳೆಗಾಲ

ಮೊಕೊಕ್ಚೊಂಗ್‌ನಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ ಮಳೆ ಬೀಳುತ್ತಿರುತ್ತದೆ. ಇಲ್ಲಿ ಸಾಮಾನ್ಯವಾಗಿ 9 ತಿಂಗಳು ಮಳೆಯಾಗುತ್ತದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಇಲ್ಲಿ ಸರಾಸರಿ 2500 ಮಿಮೀ ಮಳೆಯಾಗುತ್ತದೆ.

ಚಳಿಗಾಲ

ಮೊಕೊಕ್ಚೊಂಗ್‌ನಲ್ಲಿ ಜನವರಿ-ಫೆಬ್ರವರಿ ತೀವ್ರ ಚಳಿಗಾಲದ ತಿಂಗಳುಗಳು. ಈ ಸಮಯದಲ್ಲಿ ಉಷ್ಣಾಂಶವು 2 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಕೆಳಗೆ ಹೋಗಬಹುದು. ಒಟ್ಟಿನಲ್ಲಿ ಈ ಸಮಯದಲ್ಲಿ ಉಷ್ಣಾಂಶವು 11 ರಿಂದ 23 ಡಿಗ್ರಿ ಸೆಲ್ಸಿಯಸ್‌ಗಳಷ್ಟಿರುತ್ತದೆ.