Search
  • Follow NativePlanet
Share
ಮುಖಪುಟ » ಸ್ಥಳಗಳು» ಜುನೆಬೋತೋ

ಜುನೆಬೋತೋ : ಬೆಟ್ಟದ ಮೇಲಿರುವ ಪ್ರದೇಶ

5

ಜುನೆಬೋತೋ ನಾಗಾಲ್ಯಾಂಡ್ ಮಧ್ಯ ಭಾಗದಲ್ಲಿದ್ದು ಸಮುದ್ರ ಮಟ್ಟಕ್ಕಿಂತ 1800 ಮೀಟರ್ ಎತ್ತರದಲ್ಲಿದೆ. ಇದರ ಹತ್ತಿರದಲ್ಲಿರುವ ಜಿಲ್ಲೆಗಳೆಂದರೆ ಮೋಕೊಕ್ಚುಂಗ್ ಇದು ಪೂರ್ವ ಭಾಗದಲ್ಲಿದ್ದು ಮತ್ತು ವೋಖಾ ಪಶ್ಚಿಮ ಭಾಗದಲ್ಲಿದೆ.  ಜುನೆಬೋತೋ ಅನ್ನುವುದು ಈ ಜಿಲ್ಲೆಯ ಹೆಸರು ಕೂಡಾ. ವಾಸ್ತವವಾಗಿ ಜುನೆಬೋತೋವನ್ನು ಎರಡು ಭಾಗವಾಗಿ ಹೆಸರಿಸ ಬಹುದು. ಅದು ’ಜುನೆಬ” ಮತ್ತು ’ತು’ ಎಂದು. ಜುನೆಬೋ ಅನ್ನುವುದು ಹೂವಿನ ಪೊದೆಯ ಹೆಸರಾಗಿದ್ದು ’ತು’ ಅಂದರೆ ಬೆಟ್ಟದ ಮೇಲಿರುವ ಪ್ರದೇಶ ಎಂದು. ಜುನೆಬೋತೋ ಅನ್ನುವುದು ಸುಮಿ ಪಂಗಡದ ಸಮುದಾಯದ್ದಾಗಿದೆ.

ಜನರು ಮತ್ತು ಇಲ್ಲಿನ ಸಂಸ್ಕೃತಿ

ಜುನೆಬೋತೋದಲ್ಲಿ ಸುಮಿ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುತ್ತಾರೆ. ಸುಮಿ ಪಂಗಡದವರು ಯುದ್ದಕ್ಕೆ ಹೆಸರುವಾಸಿ ಮತ್ತು ಆಯುಧ ಪ್ರವೀಣರು. ಸುಮಿ ಜನಾಂಗದವರು ತಮ್ಮದೇ ಆದ ವಸ್ತ್ರ ವಿನ್ಯಾಸ, ನೃತ್ಯ, ವರ್ಣರಂಜಿತ ಪೋಷಾಕುಗಳನ್ನು ಹೊಂದಿದ್ದಾರೆ. ಅವರ ಸಂಪ್ರದಾಯಬದ್ದ ಯುದ್ದ ತೊಡುಗೆಗಳು ನೋಡಲು ಯೋಗ್ಯವಾಗಿದೆ. ತುಲಾನಿ ಎನ್ನುವುದು ಸುಮಿ ಜನಾಂಗದವರಿಗೆ ಪ್ರಮುಖ ಹಬ್ಬವಾಗಿದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ಮಧ್ಯ ಭಾಗದಲ್ಲಿ ಬರುತ್ತದೆ. ಅಹುನಾ ಎನ್ನುವುದು ಜುನೆಬೋತೋದ ಸುಮಿ ಜನಾಂಗದವರು ಆಚರಿಸುವ ಇನ್ನೊಂದು ಹಬ್ಬ.

ಜುನೆಬೋತೋದ ಆಕರ್ಷಣೀಯ ಸ್ಥಳಗಳು

ಜುನೆಬೋತೋ ಪ್ರಮುಖವಾಗಿ ಹೆಸರುವಾಸಿಯಾಗಿರುವುದು ಪಕ್ಷಿಧಾಮಕ್ಕೆ, ಇಲ್ಲಿನ ಹೆಚ್ಚಿನ ಭಾಗವು ಅರಣ್ಯದಿಂದ ಆವೃತವಾಗಿದೆ. ಇದಲ್ಲದೇ, ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಕ್ಯಾಂಪಸ್ ಕೂಡಾ ಜುನೆಬೋತೋದಲ್ಲಿದೆ. ಇದು ಅಕುಲ್ತೋ ಭಾಗದ ಲುಮಿನಿ ಎನ್ನುವ ಹಳ್ಳಿಯಲ್ಲಿದೆ. ಜುನೆಬೋತೋ, ಜಿಲ್ಲೆಯ ಏಕೈಕ ನಗರ ಪಟ್ಟಣವಾಗಿದ್ದು ಹೆಚ್ಚಿನ ಜನ ಹಳ್ಳಿಯಲ್ಲಿ ವಾಸವಾಗಿರುತ್ತಾರೆ. ವ್ಯವಸಾಯ ಇಲ್ಲಿನ ಭಾಗದ ಜನರ ಪ್ರಮುಖ ಜೀವನೋಪಾಯ.

ಜುನೆಬೋತೋದ ಸುತ್ತಮುತ್ತ ಮೂರು ನದಿಗಳು ಹರಿಯುತ್ತದೆ. ತಿಜು, ದೊಯಾಂಗ್ ಮತ್ತು ಸುತಾ ಈ ನದಿಗಳ ಹೆಸರು. ಜುನೆಬೋತೋ ನಾಗಾಲ್ಯಾಂಡಿನ ಆರನೇ ಗ್ರಾಮೀಣ ಕೇಂದ್ರವಾಗಿದೆ. ಇತರ ಐದು ಕೇಂದ್ರಗಳೆಂದರೆ ಧೀಮಾಪುರ, ಕೊಹಿಮಾ, ಮೋಕೊಕ್ಚುಂಗ್, ವೋಖಾ ಮತ್ತು ತುಯೆನ್ಸಾಂಗ್.

ಉತ್ತಮ ಸಮಯ

ಪ್ರವಾಸಿಗರು ಮಳೆಗಾಲದಲ್ಲಿ ಬರಲು ಅಪೇಕ್ಷಿಸದೇ ಇದ್ದಲ್ಲಿ ಜುನೆಬೋತೋಗೆ ಭೇಟಿ ನೀಡುವುದು ಚಳಿಗಾಲದಲ್ಲಿ ಸೂಕ್ತ. ಆದರೂ ಚಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ಮುಂಜಾಗೃತಾ ಕ್ರಮ ತೆಗೆದು ಕೊಂಡಿರಬೇಕು. ಆದರೂ, ಮಳೆಯನ್ನೂ ಲೆಕ್ಕಿಸದೇ ಅದರ ಮಜಾ ಪಡೆಯಲು ಬಯಸಿದ್ದಲ್ಲಿ  ಜುನೆಬೋತೋ ನಗರಕ್ಕೆ ಮಳೆಗಾಲದಲ್ಲೂ ಭೇಟಿ ನೀಡಬಹುದು.

ಜುನೆಬೋತೋ ಪ್ರಸಿದ್ಧವಾಗಿದೆ

ಜುನೆಬೋತೋ ಹವಾಮಾನ

ಉತ್ತಮ ಸಮಯ ಜುನೆಬೋತೋ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜುನೆಬೋತೋ

  • ರಸ್ತೆಯ ಮೂಲಕ
    ಜುನೆಬೋತೋ ನಗರವು ರಾಷ್ಟೀಯ ಹೆದ್ದಾರಿ 61 ರಲ್ಲಿದ್ದು ರಾಜ್ಯದ ಇತರ ಭಾಗಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಜುನೆಬೋತೋ ನಗರವು ಕೋಹಿಮಾದಿಂದ 152 ಕಿಲೋಮೀಟರ್ ದೂರದಲ್ಲಿದೆ ಮತ್ತು ಮೊಕೊಕ್ ಚುಂಗ್ ನಿಂದ 70 ಕಿಲೋಮೀಟರ್ ದೂರದಲ್ಲಿದೆ. ನಾಗಾಲ್ಯಾಂಡ್ ನಗರ ಸಾರಿಗೆ ಬಸ್ಸಿನ ಮೂಲಕ ಜುನೆಬೋತೋ ತಲುಪಬಹುದು. ಖಾಸಾಗಿ ಟ್ಯಾಕ್ಸಿಯನ್ನೂ ಬುಕ್ ಮಾಡಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಾಗಾಲ್ಯಾಂಡಿನ ರೈಲಿನ ಪ್ರಮುಖ ಸಂಪರ್ಕ ನಗರವೆಂದರೆ ಧೀಮಾಪುರ. ಜುನೆಬೋತೋಗೆ ರೈಲಿನ ಮೂಲಕ ತಲುಪ ಬಹುದೆಂದರೆ ಧೀಮಾಪುರ ರೈಲು ನಿಲ್ದಾಣಕ್ಕೆ ಬರಬೇಕು. ಅಲ್ಲಿಂದ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು. ಧೀಮಾಪುರ ದೇಶದ ಇತರ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಗುವಹಾಟಿ ಮತ್ತು ಇತರ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲು ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇತರ ಪಟ್ಟಣ ಮತ್ತು ಹಳ್ಳಿಗಳಂತೆ ಜುನೆಬೋತೋಗೆ ನೇರ ವಿಮಾನ ಸಂಪರ್ಕವಿಲ್ಲ. ಧೀಮಾಪುರ ಸ್ವಂತ ವಿಮಾನ ನಿಲ್ದಾಣವನ್ನು ಹೊಂದಿದೆ, ಇದು 80 ಕಿಲೋಮೀಟರ್ ದೂರದಲ್ಲಿದೆ. ಧೀಮಾಪುರ ವಿಮಾನ ನಿಲ್ದಾಣದಿಂದ ಗುವಹಾಟಿಗೆ ವಿಮಾನ ಸೌಲಭ್ಯವಿದೆ. ಗುವಹಾಟಿಯಿಂದ ದೇಶದ ಇತರ ಭಾಗಗಳಿಗೆ ವಿಮಾನ ಸಂಪರ್ಕ ಉತ್ತಮವಾಗಿದೆ. ಇಲ್ಲಿಗೆ ದೇಶದ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವಿರುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri