Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನೆಬೋತೋ » ಹವಾಮಾನ

ಜುನೆಬೋತೋ ಹವಾಮಾನ

ಪ್ರವಾಸಿಗರು ಮಳೆಗಾಲದಲ್ಲಿ ಬರಲು ಅಪೇಕ್ಷಿಸದೇ ಇದ್ದಲ್ಲಿ ಜುನೆಬೋತೋಗೆ ಭೇಟಿ ನೀಡುವುದು ಚಳಿಗಾಲದಲ್ಲಿ ಸೂಕ್ತ. ಆದರೂ ಚಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ಮುಂಜಾಗೃತಾ ಕ್ರಮ ತೆಗೆದು ಕೊಂಡಿರಬೇಕು. ಆದರೂ, ಮಳೆಯನ್ನೂ ಲೆಕ್ಕಿಸದೇ ಅದರ ಮಜಾ ಪಡೆಯಲು ಬಯಸಿದ್ದಲ್ಲಿ  ಜುನೆಬೋತೋ ನಗರಕ್ಕೆ ಮಳೆಗಾಲದಲ್ಲೂ ಭೇಟಿ ನೀಡಬಹುದು.

ಬೇಸಿಗೆಗಾಲ

ಜುನೆಬೋತೋದಲ್ಲಿ ಬೇಸಿಗೆ ಕಾಲ ಸಾಧಾರಣ ಬಿಸಿಯಿಂದ ಕೂಡಿರುತ್ತದೆ ಮತ್ತು ಅತಿ ಹೆಚ್ಚಿನ ಉಷ್ಣಾಂಸ 22 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ. ಬೇಸಿಗೆ ಕಾಲ ಇಲ್ಲಿ ಸುದೀರ್ಘವಾಗಿರುವುದಿಲ್ಲ ಮತ್ತು ಅತಿ ಹೆಚ್ಚಿನ ಸೆಖೆಯ ವಾತಾವರಣ ವರ್ಷದ ಕೆಲವೊಂದು ತಿಂಗಳಲ್ಲಿ ಮಾತ್ರ ಇರುತ್ತದೆ. ಆದರೂ ತೆಳ್ಳಗಿನ ಉಣ್ಣೆ ಬಟ್ಟೆಯನ್ನು ತೆಗೆದು ಕೊಂಡು ಹೋಗುವುದು ಸೂಕ್ತ.

ಮಳೆಗಾಲ

ಮಳೆಗಾಲ ಮತ್ತು ಜುನೆಬೋತೋ ನಡುವೆ ಉತ್ತಮ ಸಂಬಂಧವಿದ್ದಂತೆ ಇರುತ್ತದೆ. ಯಾಕೆಂದರೆ ಸತತ ಒಂಬತ್ತು ತಿಂಗಳು ಇಲ್ಲಿ ಎಡೆಬಿಡದೇ ಮಳೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರತಿ ವರ್ಷ ಸುಮಾರು 200 ಸೆಂಟಿಮೀಟರ್ ನಷ್ಟು ಮಳೆಯಾಗುತ್ತದೆ. ಅತ್ಯಂತ ಜೋರಾಗಿ ಮಳೆ ಬೀಳುವ ಸಮಯವೆಂದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ. ಮತ್ತು ಈ ಸಮಯದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಜುನೆಬೋತೋದಲ್ಲಿ ತೀವ್ರ ಚಳಿಯ ವಾತಾವರಣ ವಿರುತ್ತದೆ. ಈ ಸಮಯದಲ್ಲಿ ಉಷ್ಣಾಂಸ ಒಂದು ಡಿಗ್ರಿಯವರೆಗೆ ಕುಗ್ಗುತ್ತದೆ. ಡಿಸೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ ಇಲ್ಲಿ ಚಳಿಗಾಲವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಇಲ್ಲಿ ತೀವ್ರ ಚಳಿಯ ವಾತಾವರಣ ವಿರುತ್ತದೆ. ಈ ಸಮಯದಲ್ಲಿ ಜುನೆಬೋತೋಗೆ ಬರುವ  ಪ್ರವಾಸಿಗರು ಉಣ್ಣೆಯ ಸ್ವೆಟರ್ ಬಳಸುವುದು ಸೂಕ್ತ ಮತ್ತು ಹತ್ತಿರದ ಪ್ರದೇಶಗಳಿಗೆ ಚಳಿಗಾಲದಲ್ಲಿ ಭೇಟಿ ನೀಡುವಾಗ ಚಳಿ ತಡೆಯುವ ಬಟ್ಟೆ ಬರೆಗಳನ್ನು ತರುವುದು ಸೂಕ್ತ.