Search
 • Follow NativePlanet
Share

ವೊಖಾ : ಲೋಥಾಗಳ ನಾಡು

14

ವೊಖಾ ನಾಗಾಲ್ಯಾಂಡ್ ನ ದಕ್ಷಿಣ ಭಾಗದ ಓಂದು ಜಿಲ್ಲಾ ಕೇಂದ್ರ ಮತ್ತು ನಗರವಾಗಿದೆ. ಇಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗ ಲೋಥಾಗಳು ವಾಸವಾಗಿದ್ದಾರೆ. ನಾಗಾಲ್ಯಾಂಡ್ ನ ಇತರ ಭಾಗಗಳಂತೆ ಇದೂ ಹಲವು ವರ್ಷಗಳ ಕಾಲ ಹೊರಗಿನ ಪ್ರಪಂಚದಿಂದ ದೂರವೇ ಉಳಿದಿತ್ತು. 1876 ರಲ್ಲಿ ಬ್ರಿಟೀಷರು ಭಾರತಕ್ಕೆ ಬಂದ ಮೇಲಷ್ಟೇ ಇದನ್ನು ಅಸ್ಸಾಂ ಅಡಿಯಲ್ಲಿ ನಾಗಾ  ಬೆಟ್ಟಗಳ ಮುಖ್ಯ ಕೇಂದ್ರವನ್ನಾಗಿಸಿದರು. ವೊಖಾ ತನ್ನ ಸುತ್ತಲೂ ಬೆಟ್ಟಗಳಿಂದ ಕೂಡಿದೆ ಆದ್ದರಿಂದ ಇದೊಂದು ಪ್ರವಾಸಿ ಆಕರ್ಷಣೆ ಇರುವ  ತಾಣವಾಗಿದೆ. ಇದು ಉತ್ತರದಲ್ಲಿ ಮೊಕೊಕ್ ಚುಂಗ್ ಜಿಲ್ಲೆಯಿಂದ ಪೂರ್ವದಲ್ಲಿ ಜ಼ುನ್ ಹೆಬೆಟೊ ದಿಂದ ಹಾಗೂ ಪಶ್ಚಿಮದಲ್ಲಿ ಅಸ್ಸಾಂ ನಿಂದ ಸುತ್ತುವರೆದಿದೆ.

ವೊಖಾ ದಲ್ಲಿನ ಪ್ರವಾಸೋದ್ಯಮ

ಲೋಥಾ ಜನಾಂಗದವರು ಪ್ರವಾಸಿಗಳನ್ನು ಬಹಳ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಇಲ್ಲಿನ ಪ್ರಮುಖ ಉತ್ಸವಗಳೆಂದರೆ ತೋಖು, ಪಿಖುಚಕ್ ಮತ್ತು ಎಮೊಂಗ್ ಈ ಅವಧಿಗಳಲ್ಲಿ ಇಲ್ಲಿನ ಬುಡಕಟ್ಟು ನೃತ್ಯ ಮತ್ತು ಸಂಗೀತದ ಅತ್ಯಂತ ಉತ್ಕೃಷ್ಟ ಗುಣಮಟ್ಟವನ್ನು ನಾವು ಕಾಣಬಹುದು. ಈ ನಗರವು ಇಲ್ಲಿನ ಶಾಲುಗಳಿಗಾಗಿ ಪ್ರಸಿದ್ಧವಾಗಿದೆ ಈ ಶಾಲುಗಳನ್ನು ಇಲ್ಲಿನ ಜನರು ಕೈಯಿಂದಲೇ ನೈದು ಮಾಡುತ್ತಾರೆ ಹಾಗೂ ಇದು ಹಲವಾರು ಪೀಳಿಗೆಗಳಿಂದ ಬೆಳೆದು ಬಂದ ರೂಢಿಯಾಗಿದೆ. ವೊಖಾದಲ್ಲಿ ಮೌಂಟ್ ಟಿಯಿ, ತೋತ್ಸು ಬೆಟ್ಟ ಮತ್ತು ಡೊಯಾಂಗ್ ನದಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ.

ನಾಗಾಲ್ಯಾಂಡ್ ಅನ್ನು ತಲುಪಲು ಭಾರತದ ನಾಗರಿಕರು ಆಂತರಿಕ ಅನುಮತಿ ಪತ್ರವನ್ನು ಒಯ್ಯುವುದು ಕಡ್ಡಾಯವಾಗಿದೆ. ಇದೊಂದು ಸರಳವಾದ ಪ್ರಯಾಣ ಅನುಮತಿ ಪತ್ರವಾಗಿದ್ದು ಇದನ್ನು ದೆಹಲಿ, ಕೋಲ್ಕತ್ತಾ, ಗುವಾಹಟಿ ಅಥವಾ ಶಿಲ್ಲಾಂಗ್ ನಿಂದ ಪಡೆಯಬಹುದಾಗಿದೆ. ಇದನ್ನು ದಿಮಾಪುರ್, ಕೊಹಿಮಾ ಮತ್ತು ಮೊಕೊಕ್ ಚುಂಗ್ ನ ಉಪ ಆಯುಕ್ತರಿಗೆ ಪತ್ರ ಬರೆಯುವ ಮೂಲಕವೂ ಪಡೆಯಬಹುದಾಗಿದೆ.

ಭೇಟಿಗೆ ಅತ್ಯುತ್ತಮ ಋತುಮಾನ

ಬೇಸಿಗೆ ಕಾಲ ಇಲ್ಲಿಗೆ ಭೇಟಿ ನೀಡಲು ಇರುವ ಅತ್ಯುತ್ತಮವಾದ ಅವಧಿಯಾಗಿದೆ. ಈ ಅವಧಿಯಲ್ಲಿ ದಿನವಿಡೀ ಅತ್ಯಂತ ಆಹ್ಲಾದಕರವಾದ ವಾತಾವರಣ ಇರುತ್ತದೆ. ಹಾಗೂ ಸುತ್ತ ಮುತ್ತಲ ಸ್ಥಳಗಳನ್ನು ಸುತ್ತಾಡಲು ಇದು ಸರಿಯಾದ ಅವಧಿಯಾಗಿದೆ.

ವೊಖಾ ಪ್ರಸಿದ್ಧವಾಗಿದೆ

ವೊಖಾ ಹವಾಮಾನ

ವೊಖಾ
30oC / 85oF
 • Partly cloudy
 • Wind: SW 5 km/h

ಉತ್ತಮ ಸಮಯ ವೊಖಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವೊಖಾ

 • ರಸ್ತೆಯ ಮೂಲಕ
  ಇಲ್ಲಿಗೆ ಆಗಮಿಸಲು ಇರುವ ಪ್ರಮುಖ ಕೊಂಡಿಯಾದ ದಿಮಾಪುರ್ ಮತ್ತು ವೊಖಾದ ನಡುವೆ ರಾ.ಹೆ. 39 ಇರುವ ಕಾರಣ ರಸ್ತೆ ಸಾರಿಗೆ ಇಲ್ಲಿ ಸಮರ್ಪಕವಾಗಿದೆ. ಇಲ್ಲಿಗೆ ತಲುಪಲು ಇರುವ ಇನ್ನೊಂದು ದಾರಿಯೆಂದರೆ ರಾಜ್ಯದ ರಾಜಧಾನಿ ಕೊಹಿಮಾ ವನ್ನು ತಲುಪಿ ಅಲ್ಲಿಂದ ವೊಖಾವನ್ನು ತಲುಪುವುದು. ಕೊಹಿಮಾ ವೊಖಾದಿಂದ 75 ಕಿ.ಮೀ ದೂರದಲ್ಲಿದೆ. ನಾಗಾಲ್ಯಾಂಡ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳು ಇಲ್ಲಿ ಸಂಪರ್ಕ ಸಾಧಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ವೊಖಾದಲ್ಲಿ ರೈಲ್ವೆ ಹಳಿಗಳಿಲ್ಲ. ನೀವು ರೈಲಿನ ಮೂಲಕ ವೊಖಾ ತಲುಪುವ ಆಲೋಚನೆಯಲ್ಲಿದ್ದರೆ ದಿಮಾಪುರ್ ಸರಿಯಾದ ರೈಲ್ವೆ ನಿಲ್ದಾಣ. ಇದು ನಗರದಿಂದ 157 ಕಿ.ಮೀ ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ನವದೆಹಲಿ, ಗುವಾಹಟಿ, ಕೋಲ್ಕತ್ತಾ ಮತ್ತು ದೇಶದ ಇನ್ನಿತರ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ಪ್ರತಿ ದಿನ ಸಂಪರ್ಕ ಸಾಧಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ವೊಖಾ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ ಹಾಗೂ ದಿಮಾಪುರ್ ವಿಮಾನ ನಿಲ್ದಾಣ ಇಲ್ಲಿಗೆ ಸಾಗಲು ಇರುವ ವಾಯುಮಾರ್ಗವಾಗಿದೆ. ಇದು ವೊಖಾ ನಗರದಿಂದ 162 ಕಿ.ಮೀ ದೂರದಲ್ಲಿದ್ದರೂ ಟಾಕ್ಸಿ ಮತ್ತಿತರ ಸಾರಿಗೆ ಸಂಪರ್ಕದಿಂದ ಸುಲಭವಾಗಿ ಸಂಪರ್ಕಿಸಬಹುದಾದ ನಗರವಾಗಿದೆ. ದಿಮಾಪುರ್ ವಿಮಾನ ನಿಲ್ದಾಣಕ್ಕೆ ಕೋಲ್ಕತ್ತಾ ಮತ್ತು ಗುವಾಹಟಿಯಿಂದ ಪ್ರತಿ ದಿನ ವಿಮಾನಗಳಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Feb,Mon
Return On
25 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Feb,Mon
Check Out
25 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Feb,Mon
Return On
25 Feb,Tue
 • Today
  Wokha
  30 OC
  85 OF
  UV Index: 5
  Partly cloudy
 • Tomorrow
  Wokha
  13 OC
  56 OF
  UV Index: 5
  Moderate rain at times
 • Day After
  Wokha
  13 OC
  56 OF
  UV Index: 5
  Moderate or heavy rain shower