ನೀವು ವೊಖಾದಲ್ಲಿರುವ ಕ್ರಿಶ್ಚಿಯನ್ ಧರ್ಮದ ಮೂಲವನ್ನು ಕಾಣಬೇಕಾದರೆ ವೊಖಾದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ವಾನ್ ಖೊಸುಂಗ್ ಗೆ ಭೇಟಿ ನೀಡಬೇಕು. ಇದು ವೊಖಾದ ಉತ್ತರ ದಿಕ್ಕಿನಲ್ಲಿ ಹಾಗೂ ತಿಯಿ ಬೆಟ್ಟಗಳ ಬುಡದಲ್ಲಿ ಇದೆ. ಇಲ್ಲಿ ಕ್ಯೋನ್ ಬಾಪ್ಟಿಸ್ಟ್ ಎಖುಂಖೋ ಸಾನ್ರಾಯ್ಸ್ಟು ನ ಆವರಣವನ್ನು ಕಾಣಬಹುದಾಗಿದೆ. ಇದು ಅಮೇರಿಕಾದಿಂದ ಆರಂಭವಾದ ಮೊದಲ ಬಾಪ್ಟಿಸ್ಟ್ ಚಟುವಟಿಕೆಯಾಗಿದೆ ಹಾಗೂ ಇದು 1923 ರಲ್ಲಿ ಆರಂಭವಾಗಿತ್ತು. ಆದ್ದರಿಂದ ಇದು ವೊಖಾದ ಜನರಿಗೆ ಬಹಳ ಮಹತ್ವದ ಸ್ಥಳವಾಗಿದೆ.
ಕ್ಯೋನ್ ಬಾಪ್ಟಿಸ್ಟ್ ಎಖುಂಖೋ ಸಾನ್ರಾಯ್ಸ್ಟು ಶಿಕ್ಷಣ, ಆರೋಗ್ಯ ಮತ್ತಿತರ ಹಲವು ವಿಷಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇದರ ಜೊತೆಗೆ ಇಲ್ಲಿನ ಜನರಿಗಾಗಿ ಒಂದು ಕಾಲೇಜನ್ನು ತೆರೆಯುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ವಾಂಖೊಸುಂಗ್ ನಲ್ಲಿ ಶಿಖರಗಳು, ಕಣಿವೆಗಳು ಮತ್ತಿತರ ಆಕರ್ಷಕ ದೃಶ್ಯಾವಳಿಗಳು ಕಾಣುತ್ತವೆ. ಇಲ್ಲಿಗೆ ಭೇಟಿ ಕೊಟ್ಟು ಇಲ್ಲಿನ ಜನರ ಜೀವನ ವಿಧಾನವನ್ನು, ಅವರ ವಿಶಿಷ್ಟ ನಂಬಿಕೆ ಮತ್ತು ಆಚರಣೆಗಳನ್ನು ತಿಳಿಯಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.