Search
  • Follow NativePlanet
Share
ಮುಖಪುಟ » ಸ್ಥಳಗಳು » ವೊಖಾ » ಹವಾಮಾನ

ವೊಖಾ ಹವಾಮಾನ

ಬೇಸಿಗೆ ಕಾಲ ಇಲ್ಲಿಗೆ ಭೇಟಿ ನೀಡಲು ಇರುವ ಅತ್ಯುತ್ತಮವಾದ ಅವಧಿಯಾಗಿದೆ. ಈ ಅವಧಿಯಲ್ಲಿ ದಿನವಿಡೀ ಅತ್ಯಂತ ಆಹ್ಲಾದಕರವಾದ ವಾತಾವರಣ ಇರುತ್ತದೆ. ಹಾಗೂ ಸುತ್ತ ಮುತ್ತಲ ಸ್ಥಳಗಳನ್ನು ಸುತ್ತಾಡಲು ಇದು ಸರಿಯಾದ ಅವಧಿಯಾಗಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕ ಇಲ್ಲಿ ಬೇಸಿಗೆಯ ಕಾಲವಾಗಿದೆ. ಈ ಅವಧಿಯಲ್ಲಿ ಇಲ್ಲಿನ ಸಾಮಾನ್ಯ ತಾಪಮಾನ 20 ರಿಂದ 30 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಅವಧಿಯಲ್ಲಿ ವಿರಳವಾಗಿ ಮಳೆಯೂ ಬರುವ ಸಾಧ್ಯತೆಗಳಿವೆ. ಬೆಟ್ಟಗಳ ಮೇಲ್ಭಾಗ ಕೆಳಗಿನ ಭಾಗಕ್ಕಿಂತ ಹೆಚ್ಚು ತಂಪಾಗಿರುತ್ತವೆ.

ಮಳೆಗಾಲ

ನಾಗಾಲ್ಯಾಂಡ್ ನ ಹೆಚ್ಚಿನ ಭಾಗಗಳಲ್ಲಿ ಇದ್ದಂತೆ ವೊಖಾದಲ್ಲೂ ಮಳೆಗಾಲ ಜೋರಾಗಿರುತ್ತದೆ. ಇಲ್ಲಿ ಜೂನ್ ನಿಂದ ಅಕ್ಟೊಬರ್ ತನಕ ಧಾರಾಕಾರವಾಗಿ ಮಳೆಯಾಗುತ್ತದೆ. ಅಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಆಲಿಕಲ್ಲಿನ ಮಳೆ ಇಲ್ಲಿ ಸಾಮಾನ್ಯವಾಗಿದೆ. ಇದರಿಂದಾಗಿ ಕೆಳಮಟ್ಟದ ಪ್ರದೇಶಗಳಲ್ಲಿ ಪ್ರವಾಹದ ಸಂದರ್ಭಗಳು ಎದುರಾಗುವುದು ಸಾಮಾನ್ಯವಾಗಿದೆ.

ಚಳಿಗಾಲ

ಚಳಿಗಾಲದ ಅವಧಿಯಲ್ಲಿ ವೊಖಾದಲ್ಲಿ ಬಹಳ ಹೆಚ್ಚಿನ ಚಳಿ ಇರುತ್ತದೆ. ಚಳಿಗಾಲವು ನವೆಂಬರ್ ನಿಂದ ಜನವರಿಯ ತನಕ ಇರುತ್ತದೆ. ಡಿಸೆಂಬರ್ ಮತ್ತು ಜನವರಿ ಹೆಚ್ಚು ಚಳಿ ಇರುವ ತಿಂಗಳುಗಳಾಗಿವೆ. ಈ ತಿಂಗಳುಗಳಲ್ಲಿ ರಾತ್ರೆಯ ವೇಳೆ ಕನಿಷ್ಟ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ತನಕ ದಾಖಲಾಗುತ್ತದೆ. ಈ ಅವಧಿಯಲ್ಲಿ ಸೂರ್ಯಾಸ್ತದ ನಂತರ ಶೀತ ಮಾರುತಗಳೂ ಸಾಮಾನ್ಯವಾಗಿವೆ.