Search
 • Follow NativePlanet
Share
ಮುಖಪುಟ » ಸ್ಥಳಗಳು» ಉಖ್ರುಲ್

ಉಖ್ರುಲ್ - ವಿದೇಶಿಗಿಡ  ಶಿರುಯ್  ಲಿಲ್ಲಿ ಭೂಮಿ

19

ಹಸಿರು ನಿಮ್ಮನ್ನು ಆಕರ್ಷಿಸುತ್ತದೆ ಎಂದಾದಲ್ಲಿ ನೀವು ಉಖ್ರುಲ್ ನಗರಕ್ಕೊಮ್ಮೆ ಭೇಟಿ ನೀಡಲೇಬೇಕು. ಉಖ್ರುಲ್ ನ ಜಿಲ್ಲಾ ಕೇಂದ್ರವು ಮಣಿಪುರದಲ್ಲಿದೆ, ಉಖ್ರುಲ್ ಮೋಡಿ ಮಾಡುವ, ಸುಂದರವಾದ ಮತ್ತು ಸಮ್ಮೋಹನಗೊಳಿಸುವ ಪ್ರದೇಶವಾಗಿದೆ. ಜನಜಂಗುಳಿಯಿಂದ, ಕಾರುಗಳ ಹಾವಳಿಯಿಂದ, ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಂದ ದೂರವಿರಲು ಈ ಉಖ್ರುಲ್ ಒಂದು ಸಣ್ಣ ಸ್ವರ್ಗದಂತಿರುವ ಪಟ್ಟಣವಾಗಿದೆ.

ವಿದೇಶಿ ಗಿಡ ಲಿಲ್ಲಿ :

ವಿದೇಶಿ ಹೂವುಗಳಲ್ಲಿ ಒಂದಾದ ಶಿರಯ್ ಲಿಲ್ಲಿ ಯನ್ನು ಉಖ್ರುಲ್ ಜಿಲ್ಲೆಯಲ್ಲಿ ಮಾತ್ರ ಕಾಣಬಹುದಾಗಿದೆ. ಫ್ರಾಂಕ್ ಕಿಂಗ್ಡನ್ ವಾರ್ಡ್, ಇಂಗ್ಲೀಷ್ ಸಸ್ಯಶಾಸ್ತ್ರಜ್ಞ ಒಂದು ವಿಶಿಷ್ಟ ಗುಣಮಟ್ಟದ ಲಿಲ್ಲಿ  ಕಂಡುಹಿಡಿದ  ಮೊದಲ ವ್ಯಕ್ತಿ. ತನ್ನ ಹೆಂಡತಿಯ ಮರಣದ ನಂತರ ಇದನ್ನು ಲಿಲ್ಲಿಯಮ್ ಮೆಕ್ಲಿನಿಯ ಎಂದು ಹೆಸರಿಸಿದ. ಅಲ್ಲಿಯ ಜನರು ಇದನ್ನು ಶಿರೊಯ್ ಲಿಲ್ಲಿ ಎಂದು ಕರೆಯುತ್ತಾರೆ ಮತ್ತು ಇದು ಶಿರೊಯ್ ಶಿಖರದಲ್ಲಿ ದೊರೆಯುತ್ತದೆ.

ಉಖ್ರುಲ್ ನ ಪ್ರವಾಸಿ ಆಕರ್ಷಣೆಗಳು

ಉಖ್ರುಲ್ ಪ್ರವಾಸ ಒಂದು ಸುಂದರ ಅನುಭವವಾಗಲು ಉಖ್ರುಲ್ ನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಜನಪ್ರಿಯ ಉದ್ಯಾನವನಗಳು, ಶಿಖರಗಳು ಮತ್ತು ಜಲಪಾತಗಳು ಹತ್ತಿರದಲ್ಲಿವೆ. ಡಂಕನ್ ಪಾರ್ಕ್ ಮತ್ತು ಎಲ್ ಶದಾಯ್ ಉದ್ಯಾನವನಗಳು ಪ್ರವಾಸಿಗರಿಗೆ ಆದರ್ಶ ಪಿಕ್ನಿಕ್ ತಾಣಗಳಾಗಿವೆ. ಖಯಾಂಗ್ ಜಲಪಾತ ಮತ್ತು ಅಂಗೋ ಚಿಂಗ್ ಕಾಡು ಪ್ರವಾಸಿಗರಿಂದ ಮುತ್ತಿಕೊಂಡಿರುತ್ತದೆ.

ಲುಂಗರ್ ಸಿಹಿ ಫಂಗರ್ ಒಂದು ಗುಡ್ಡಗಾಡು ಸ್ಥಳ ಮತ್ತು ಕಚೌ ಪಂಗ್ ಲೇಕ್ ವಿರಾಮ ಕಾಲದಲ್ಲಿ ಅಡ್ಡಾಡಲು ಆಕರ್ಷಣೀಯ ಸ್ಥಳವಾಗಿದೆ.

ಜಲಪಾತ, ಗುಹೆಗಳು ಮತ್ತು ಶಿಖರಗಳು ಉಖ್ರುಲ್ ನ ಇನ್ನೊಂದು ಹೆಸರಾದ ಹಸಿರು ನಗರ ಎಂಬುದು ಸರಿ ಎಂದು ಬಿಂಬಿಸುತ್ತವೆ.

ಶಿರೊಯ್ ಕಾಶಂಗ್ ಶಿಖರ, ಖಯಂಗ್ ಶಿಖರ ಮತ್ತು ನಿಲೈ ಟೀ ಎಸ್ಟೇಟ್ ಗಳು ಹಸಿರಿನಿಂದ ಕೂಡಿವೆ. ಶಿರೊಯ್ ಕಾಶಂಗ್ ಶಿಖರವು ಮೇ ಮತ್ತು ಜೂನ್ ತಿಂಗಳಿನಲ್ಲಿ ಲಿಲ್ಲಿ ಹೂವುಗಳಿಂದ ತುಂಬಿರುತ್ತವೆ.

ಪುರಾತತ್ವ ಶಾಸ್ತ್ರದ ಬಗ್ಗೆ ಆಸಕ್ತಿ ಇದ್ದವರಿಗೆ ಖಂಕೊಯ್ ಮಂಗ್ಸೋರ್ ಗುಹೆ ಸೂಕ್ತವಾಗಿದೆ.

ಉಖ್ರುಲ್ ನ ಸ್ಥಳೀಯರು

ಯುದ್ಧ ಕಲೆಗಳನ್ನು ಹೊಂದಿದ ತಾಂಗ್ಕುಲ್ ನಾಗ ಬುಡಕಟ್ಟು ಜನಾಂಗದವರಿಂದ ಕುಡಿದ ಉಖ್ರುಲ್ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ.ಉಖ್ರುಲ್ ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಹೋದರೆ ಇದು ನೋಡಲೇಬೇಕಾದ ಹಬ್ಬ. ಈ ಜಿಲ್ಲೆ ಬೆಟ್ಟ ಮತ್ತು ಪರ್ವತಗಳಿಂದ ಕೂಡಿದ್ದು ಹಸಿರಿನಿಂದ ಕಂಗೊಳಿಸುವ ಇದನ್ನು ಕಣ್ಣಿಗೆ ಕಾಣುವಷ್ಟು ದೂರ ನೋಡಬಹುದು.

ತಾಂಗ್ಕುಲ್ ಜನಾಂಗದವರು ತಮ್ಮ ವಿಶೇಷವಾದ ವೇಷಭೂಷಣಗಳಿಗೆ ಹೆಸರುವಾಸಿಯಾಗಿದ್ದಾರೆ. ಮಹಿಳೆಯರು 'ಖಶನ್' ಅನ್ನು ತೊಟ್ಟರೆ ಪುರುಷರು ಶಾಲ್ ನ ರೀತಿಯ 'ಹೌರ'ಎಂಬ ಬಟ್ಟೆಯನ್ನು ತೊಡುತ್ತಾರೆ. ತಾಂಗ್ಕುಲ್ ಜನಾಂಗದವರು ಈ ರೀತಿ ವಸ್ತ್ರ ಧರಿಸಿ ರಸ್ತೆಗಳಲ್ಲಿ ನಿಲ್ಲುವುದನ್ನು ನೋಡಿದರೆ ಕೆಲವರಿಗೆ ಸಾಮಾನ್ಯವೆನಿಸಿದರೂ ಸಾಕಷ್ಟು ಪ್ರವಾಸಿಗರಿಗೆ ಆಶ್ಚರ್ಯವೆನಿಸುತ್ತದೆ.

ಇಲ್ಲಿ ಶೇಖಡ 90 ರಷ್ಟು ಜನರು ಅಕ್ಷರಸ್ಥರು ಎಂಬುದು ಗಮನಿಸ ಬೇಕಾದ ವಿಷಯ. ವಾಸ್ತವವಾಗಿ,  ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯ ಸೇರಿದ  ಈಶಾನ್ಯದ ಮೊದಲ ಬುಡಕಟ್ಟು ಪ್ರಾಧ್ಯಾಪಕ ಪ್ರೊ ಹೋರಂ, ಉಖ್ರುಲ್ ನವರಾಗಿದ್ದರು.

ಉಖ್ರುಲ್ ಅನ್ನು ಭೇಟಿ ಮಾಡಲು ಉತ್ತಮ ಕಾಲ:

ಬೇಸಿಗೆ ಉಖ್ರುಲ್ ಭೇಟಿ ನೀಡಲು ಸೂಕ್ತ ಕಾಲ

ಉಖ್ರುಲ್ ಪ್ರಸಿದ್ಧವಾಗಿದೆ

ಉಖ್ರುಲ್ ಹವಾಮಾನ

ಉತ್ತಮ ಸಮಯ ಉಖ್ರುಲ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಉಖ್ರುಲ್

 • ರಸ್ತೆಯ ಮೂಲಕ
  ಇಂಫಾಲ್ ನಿಂದ ಉಖ್ರುಲ್ ಗೆ ನೇರವಾಗಿ ರಸ್ತೆ ಮಾರ್ಗದಲ್ಲಿ ಹೋಗುವುದು ಸುಲಭ. ಮಣಿಪುರದ ಬೇರೆಬೇರೆ ನಗರಗಳಿಂದ ಬಸ್ಸಿನ ವ್ಯವಸ್ತೆ ಇದ್ದರೂ ಕೂಡ ರಾಜಧಾನಿಯಿಂದ ನೇರವಾಗಿ ಹೋಗುವುದೇ ಸರಿಯಾದ ದಾರಿ. ಖೊಹಿಮ ಮತ್ತು ಜೆಸ್ಸಾಮಿ ನಗರಗಳಿಗೆ ತಲುಪುವ ರಾಷ್ಟ್ರೀಯ ಹೆದ್ದಾರಿ 150 ಉಖ್ರುಲ್ ತಲುಪಲು ಇನ್ನೊಂದು ಮಾರ್ಗ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಣಿಪುರ ರಾಜ್ಯವಾದರೂ ಅಲ್ಲಿ ಯಾವುದೇ ರೀತಿಯ ರೈಲ್ವೆಕೇಂದ್ರಗಳಿಲ್ಲ. ಉಖ್ರುಲ್ ಗೆ ಹತ್ತಿರದ ರೇಲ್ವೆ ನಿಲ್ದಾಣ 210 ಕಿ ಮೀ ದೂರದಲ್ಲಿರುವ ದಿಮಾಪುರ್. 215 ಕಿ ಮೀ ಅಂತರದಲ್ಲಿರುವ ಜಿರಿಬಾಮ್ ಎಂಬಲ್ಲಿ ಕಿರಿದಾದ ರೈಲುದಾರಿ ಇದೆ. ದಿಮಾಪುರ್ ನಿಂದ ಟ್ಯಾಕ್ಸಿ ಮತ್ತು ಬಸ್ಸಿನ ವ್ಯವಸ್ತೆ ಇದ್ದರೂ ಕೂಡ ಇಂಫಾಲ್ ನಿಂದ ಬರುವುದು ಹೆಚ್ಚು ಸೂಕ್ತ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಉಖ್ರುಲ್ ನಲ್ಲಿ ಯಾವುದೇ ವಾಯುಮಾರ್ಗ ಇಲ್ಲದಿರುವುದರಿಂದ ಇಂಪಾಲ್ ಹತ್ತಿರದ ವಾಯು ಮಾರ್ಗವಾಗಿದೆ.ಇಂಪಾಲ್ 90 ಕಿ ಮೀ ದೂರದಲ್ಲಿದೆ ಮತ್ತು ರಸ್ತೆ ಮಾರ್ಗವಾಗಿ ಕೂಡ ಸಂಚರಿಸಬಹುದು. ಇಂಫಾಲ್ ಗೆ ಇತರ ಎಲ್ಲಾ ನಗರಗಳಿಂದ ಗೌಹಾತಿ ಮಾರ್ಗವಾಗಿ ಸಂಪರ್ಕ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 Jan,Thu
Return On
28 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jan,Thu
Check Out
28 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jan,Thu
Return On
28 Jan,Fri