Search
 • Follow NativePlanet
Share
ಮುಖಪುಟ » ಸ್ಥಳಗಳು» ದಿಮಾಪುರ್

ದಿಮಾಪುರ್ : ಶ್ರೇಷ್ಠ ನದಿಯಿಂದಾದ ನಗರ

31

ಭಾರತದ ಈಶಾನ್ಯ ಭಾಗದಲ್ಲಿ ಭಾರೀ ಬೆಳವಣಿಗೆಯನ್ನು ಕಾಣುತ್ತಿರುವ ನಗರ ದಿಮಾಪುರ್. ಇದು ನಾಗಾಲ್ಯಾಂಡ್‍ನ ಹೆಬ್ಬಾಗಿಲು ಎಂದು ಸಹ ಕರೆಯಲ್ಪಡುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ನಗರವು ಇಂದು ತನ್ನ ಮೂಲ ಸೌಲಭ್ಯ ಮತ್ತು ಸೌಕರ್ಯಗಳ ವಿಚಾರದಲ್ಲಿ ಯಾವುದೇ ರಾಜಧಾನಿ ನಗರಗಳಿಗಿಂತ ತಾನೇನು ಕಡಿಮೆಯಿಲ್ಲ ಎಂದು ಸಾರಿ ಹೇಳುತ್ತಿದೆ. ದಿಮಾಪುರ್ ಎಂಬ ಹೆಸರು ಡಿಮಸ ಎಂಬ ಪದದಿಂದ ಹುಟ್ಟಿದೆ. ’ಡಿ’ ಎಂದರೆ ನೀರು, ’ಮ’ ಎಂದರೆ ದೊಡ್ಡ ಅಥವಾ ಶ್ರೇಷ್ಠ ಎಂಬುದನ್ನು ಸೂಚಿಸುತ್ತದೆ ಹಾಗು ’ಪುರ್’ ಎಂದರೆ ನಗರ ಎಂದರ್ಥ. ಒಟ್ಟಾರೆಯಾಗಿ ದಿಮಾಪುರ್ ಎಂಬುದು ಶ್ರೇಷ್ಠ ನದಿಯಿಂದಾದ ನಗರ ಎಂದಾಗುತ್ತದೆ. ಈ ನಗರದ ಸಮೀಪದಲ್ಲಿ ಧನ್‍ಸಿರಿ ನದಿ ಹರಿಯುತ್ತಿರುವುದನ್ನು ನಾವು ಕಾಣಬಹುದು.

ಇತಿಹಾಸ

ಒಂದಾನೊಂದು ಕಾಲದಲ್ಲಿ ಡಿಮಸಸ್ ಸಾಮ್ರಾಜ್ಯದ ಕಚರಿ ಎಂಬ ದೊರೆಯ ಕಾಲದಲ್ಲಿ ದಿಮಾಪುರ್ ಆತನ ರಾಜಧಾನಿ ನಗರವಾಗಿತ್ತು. ದಿಮಾಪುರ್ ಸಮೀಪದಲ್ಲಿ ನಡೆಸಲಾದ ಉತ್ಖನನದಿಂದ ದೊರೆತ ಸಾಕ್ಷ್ಯಾಧಾರಗಳಿಂದ ಈ ನಗರವು ಆ ಕಾಲದಲ್ಲಿ ಅತ್ಯುತ್ತಮ ರಕ್ಷಣೆಯನ್ನು ಪಡೆದಿತ್ತು ಎಂದು ತಿಳಿದುಬಂದಿದೆ. ಈ ಡಿಮಸ ಸಾಮ್ರಾಜ್ಯವು ನಾಗಾಲ್ಯಾಂಡಿನ ಭೂಭಾಗದಿಂದ ಹಿಡಿದು, ಇಂದು ನಾವು  ಕಾಣುವ ಅಸ್ಸಾಂಮಿನ ಮೇಲ್ಭಾಗದವರೆಗು ವಿಸ್ತರಿಸಿತ್ತು. ಈ ರಾಜ್ಯವು ಹಿಂದೆ ನೆಲೆಗೊಂಡಿದ್ದ ಸ್ಥಳಗಳಲ್ಲಿ ಪುರಾತನ ದೇವಾಲಯಗಳ ಅವಶೇಷಗಳು, ದೋಣಿಗಳು ಮತ್ತು ಒಡ್ಡುಗಳು ಇತ್ಯಾದಿಗಳು ಕಂಡು ಬಂದಿವೆ. ಈ ಐತಿಹಾಸಿಕ ತಾಣಗಳು ಡಿಮಸಸ್‍ನಲ್ಲಿ ಹಿಂದೂ ಧರ್ಮ ಚಾಲ್ತಿಯಲ್ಲಿತ್ತು ಎಂಬುದನ್ನು ಸಾರಿ ಹೇಳುತ್ತವೆ. ಆದಾಗಿಯೂ ಡಿಮಸಸ್ ಎಂಬುದು ಒಂದು ಆರ್ಯೇತರರಾದ ಪುರಾತನ ಬುಡಕಟ್ಟು ಸಮುದಾಯದವರಿಂದ ಆಳಲ್ಪಡುತ್ತಿದ್ದ ರಾಜ್ಯವಾಗಿತ್ತು ಎಂದು ಹೇಳಬಹುದು.

ಆಧುನಿಕ ಇತಿಹಾಸದಲ್ಲಿ ಸಹ ದಿಮಾಪುರ್ ದ್ವಿತೀಯ ಮಹಾಯುದ್ಧದಲ್ಲಿ ಬ್ರಿಟೀಷ್ ಇಂಡಿಯಾ ಹಾಗು ಜಪಾನ್ ಚಕ್ರಾಧಿಪತ್ಯದ ಪಡೆಗಳ ನಡುವೆ ನಡೆದ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿತ್ತು. ಕೊಹಿಮಾವನ್ನು ಆಕ್ರಮಣ ಮಾಡಲು ಜಪಾನ್ ಪಡೆಗಳು ದಿಮಾಪುರ್ ಮೂಲಕ ಹಾದು ಹೋದವು. ಹೀಗೆ ದಿಮಾಪುರ್ ದ್ವಿತೀಯ ಮಹಾಯುದ್ದದಲ್ಲಿ ಒಂದು ಪ್ರಮುಖ ಯುದ್ಧಕ್ಕೆ ಸಾಕ್ಷಿಯಾಯಿತು.

ಹೀಗಾಗಿ ಹಲವಾರು ಇತಿಹಾಸಕಾರರು ಡಿಮಪುರವನ್ನು " ಬ್ರಿಕ್ ಸಿಟಿ" ಎಂದು ಕರೆದಿದ್ದಾರೆ.

ಪ್ರವಾಸಿಗರಿಗಾಗಿ ಕೆಲವು ಭೌಗೋಳಿಕ ಮಾಹಿತಿಗಳು

ಪ್ರಸ್ತುತ ದಿಮಾಪುರ್ ನಾಗಾಲ್ಯಾಂಡಿನ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿದೆ. ಇದು ಈಶಾನ್ಯ ಭಾಗದಲ್ಲಿ ಕೊಹಿಮಾ ಜಿಲ್ಲೆಯಿಂದ, ಪಶ್ಚಿಮದಲ್ಲಿ ಕರ್ಬಿ ಅಂಗ್‍ಲಾಂಗ್ ಜಿಲ್ಲೆಯಿಂದ (ಅಸ್ಸಾಂ) ಮತ್ತು ಉತ್ತರ ಭಾಗದಲ್ಲಿ ಗೋಲಘಾಟ್ ಜಿಲ್ಲೆ ( ಅಸ್ಸಾಂ)ಗಳಿಂದ ಆವೃತಗೊಂಡಿದೆ. ದಿಮಾಪುರ್ ನಗರವು ಈ ರಾಜ್ಯದಲ್ಲಿ ರೈಲು ಮತ್ತು ವಿಮಾನ ಸಂಪರ್ಕವನ್ನು ಹೊಂದಿರುವ ಏಕೈಕ ನಗರವಾಗಿದೆ.

ನಾಗಾಲ್ಯಾಂಡ್ ಮತ್ತು ಮಣಿಪುರ್ ರಾಜ್ಯಗಳ ಜೀವನಾಡಿಯಾಗಿರುವ ದಿಮಾಪುರ್ ಖಡಾ ಖಂಡಿತವಾಗಿ ಭಾರತದ ಈಶಾನ್ಯ ಭಾಗದ ಪ್ರಮುಖ ಕೇಂದ್ರವಾಗಿದೆ. ರಾಷ್ಟ್ರೀಯ ಹೆದ್ದಾರಿ 39 ಕೊಹಿಮಾ, ಇಂಪಾಲ್ ಮತ್ತು ದೇಶದ ಇತರ ಭಾಗಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಬರ್ಮಾ ದೇಶದ ಗಡಿಯಾದ ಮೊರೆಹ್ ಗಡಿಯು ದಿಮಾಪುರ್ ಮೂಲಕ ಹಾದು ಹೋಗುತ್ತದೆ.

ಪ್ರವಾಸಿಗರ ಕುತೂಹಲ ಕೆರಳಿಸುವ ಕಲೆ ಮತ್ತು ಸಂಸ್ಕೃತಿಯ ಅಂಶಗಳು

ನಾಗಾ ಕೈಮಗ್ಗದ ಉತ್ಪನ್ನಗಳು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿದೆ. ದಿಮಾಪುರ್ ನಾಗಾ ಕೈಮಗ್ಗದ ಉತ್ಪನ್ನಗಳ ಉತ್ಪಾದನೆಗೆ ಮತ್ತು ಕಲೆಗೆ ಖ್ಯಾತಿಯನ್ನು ಪಡೆದಿದೆ. ಇಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಸರ್ಕಾರವು ಇಲ್ಲಿ ಈಶಾನ್ಯ ವಿಭಾಗ ಸಾಂಸ್ಕೃತಿಕ ಕೇಂದ್ರವನ್ನು ತೆರೆದಿದೆ. ಇದರಲ್ಲಿ ನಿಯಮಿತವಾಗಿ ನಾಗಾಲ್ಯಾಂಡಿನ ಸಾಂಸ್ಕೃತಿಕ ಉತ್ಸವಗಳನ್ನು ಸಂಘಟಿಸಲಾಗುತ್ತದೆ. ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು, ಅದರಲ್ಲಿ ನಾಗಾಲ್ಯಾಂಡಿನ ಕಲಾವಸ್ತುಗಳನ್ನು ಅತ್ಯಂತ ಜತನದಿಂದ ಕಾಪಾಡಲಾಗುತ್ತಿದೆ.

ಆಂತರಿಕ ಗಡಿ ರಹದಾರಿ ( ಇನ್ನರ್ ಲೈನ್ ಪರ್ಮಿಟ್)

ನಾಗಾಲ್ಯಾಂಡಿನ ಬಹುತೇಕ ಭಾಗವು ಸಂರಕ್ಷಿತ ಪ್ರದೇಶದ ಕಾಯ್ದೆಯಡಿಯಲ್ಲಿ ಬರುತ್ತವೆ. ಆದರೆ ಡಿಮಪುರ ಈ ಕಾಯ್ದೆಯಿಂದ ಹೊರಗೆ ಇದೆ. ಹಾಗಾಗಿ ಪ್ರವಾಸಿಗರಿಗೆ ಇನ್ನರ್ ಲೈನ್ ಪರ್ಮಿಟ್ ಪಡೆಯಬೇಕಾದ ಪ್ರಮೇಯ ಎದುರಾಗುವುದಿಲ್ಲ. ಆದರೆ ನಗರದಿಂದ ಹೊರಗೆ ಸಂಚರಿಸ ಬೇಕಾದರೆ ಕಡ್ಡಾಯವಾಗಿ ಅವರಿಗೆ ಇನ್ನರ್ ಲೈನ್ ಪರ್ಮಿಟ್ ಬೇಕೆ ಬೇಕು. ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿಯನ್ನು ಪಡೆಯುವುದು ತುಂಬ ಸರಳ. ಜಿಲ್ಲಾಧಿಕಾರಿಗಳ ಕಚೇರಿಗೆ ಹೋದರೆ ನಿಮಗೆ ಅಗತ್ಯವಾದ ದಾಖಲೆಗಳು ಲಭ್ಯವಾಗುತ್ತವೆ. ಜೊತೆಗೆ ಈ ಕೆಳಕಂಡ ಕಚೇರಿಗಳಲ್ಲಿ ಸಹ ಈ ಅನುಮತಿಯನ್ನು ನಿಮಗೆ ನೀಡಲಾಗುತ್ತದೆ.

ಡೆಪ್ಯೂಟಿ ರೆಸಿಡೆಂಟ್ ಕಮಿಷನರ್, ನಾಗಾಲ್ಯಾಂಡ್ ಹೌಸ್, ನವದೆಹಲಿಡೆಪ್ಯೂಟಿ ರೆಸಿಡೆಂಟ್ ಕಮಿಷನರ್, ನಾಗಾಲ್ಯಾಂಡ್ ಹೌಸ್, ಕೊಲ್ಕಟಅಸಿಸ್ಟೆಂಟ್ ರೆಸಿಡೆಂಟ್ ಕಮಿಷನರ್, ಗುವಹಾಟಿ ಮತ್ತು ಶಿಲ್ಲಾಂಗ್ಡೆಪ್ಯೂಟಿ ಕಮಿಷನರ್ ಆಫ್ ದಿಮಾಪುರ್, ಕೊಹಿಮಾ ಮತ್ತು ಮೊಕೊಕ್‍ಚುಂಗ್

ದಿಮಾಪುರದಲ್ಲಿನ ಪ್ರವಾಸಿ ಆಕರ್ಷಣೆಗಳು

ಈಶಾನ್ಯ ಭಾರತದ ಅತ್ಯಂತ ಶ್ರೀಮಂತ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ದಿಮಾಪುರವು ಹಲವಾರು ಆಸಕ್ತಿಕರವಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.

ಡಿಯೆಝೆಫೆ ಕುಶಲ ಕರ್ಮಿಗಳ ಗ್ರಾಮ; ದಿಮಾಪುರದಿಂದ 13 ಕಿ.ಮೀ ದೂರದಲ್ಲಿರುವ ಡಿಯೆಝೆಫೆ ಕುಶಲ ಕರ್ಮಿಗಳ ಗ್ರಾಮವು ನಾಗಾಲ್ಯಾಂಡ್ ಕೈಮಗ್ಗ ಮತು ಕರಕುಶಲ ಅಭಿವೃದ್ಧಿ ನಿಗಮ ಮೇಲ್ವಿಚಾರಣೆಗೆ ಒಳಪಟ್ಟಿದೆ. ಈ ಗ್ರಾಮವನ್ನು ಇಲ್ಲಿ ಕರಕುಶಲ ಕಲೆ, ಕೈಮಗ್ಗ, ಕಲೆಗಳ ಅಭಿವೃದ್ಧಿಯ ಸಲುವಾಗಿ ಸ್ಥಾಪಿಸಲಾಯಿತು. ಅಪರೂಪದ ಬಿದಿರಿನ ಕುಶಲ ವಸ್ತುಗಳನ್ನು ನಾವಿಲ್ಲಿ ನೋಡಬಹುದು. ರಂಗಪಹರ್ ವನ್ಯಧಾಮ ; ರಂಗಪಹರ್ ವನ್ಯಧಾಮವು ಅಪರೂಪವಾದ ಪಕ್ಷಿ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯವನ್ನು ಒದಗಿಸಿದೆ. ಇದು ಸಹ ದಿಮಾಪುರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಚುಮುಕೆಡಿಮ; ಅಸ್ಸಾಂಮಿನ ನಾಗಾ ಬೆಟ್ಟಗಳ ಪ್ರಥಮ ಆಡಳಿತ ಕೇಂದ್ರವಾದ ಚುಮುಕೆಡಿಮವು ಇಲ್ಲಿನ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದು ದಿಮಾಪುರ್ ಮತ್ತು ಕರ್ಬಿ- ಅಂಗ್‍ಲಾಂಗ್ ಜಿಲ್ಲೆಯ ಗುಂಟ ಕಂಡು ಬರುತ್ತದೆ. ಅಲ್ಲದೆ ಇದು ಡಿಮಪುರದಿಂದ ಕೇವಲ 14 ಕಿ.ಮೀ ದೂರದಲ್ಲಿದೆ.

ರುಝಫೆಮ; ನಿಮ್ಮ ಕುಟುಂಬ ಸದಸ್ಯರ ಜೊತೆಗೆ ವಿಹಾರ ಮಾಡಲು ಹೇಳಿ ಮಾಡಿಸಿದ ತಾಣವಿದು. ತನ್ನಲ್ಲಿರುವ ವರ್ಣರಂಜಿತ ಬಜಾರುಗಳಿಂದಾಗಿ ರುಝಫೆಮವು ಪ್ರಸಿದ್ಧಿಯನ್ನು ಗಳಿಸಿದೆ. ಇಲ್ಲಿ ಸ್ಥಳೀಯ ಕರಕುಶಲ ವಸ್ತುಗಳು ದೊರೆಯುತ್ತವೆ. ಇಲ್ಲಿ ಪ್ರವಾಸಿಗರು ಸುಲಭವಾಗಿ ಸ್ಥಳೀಯರ ಜೊತೆಗೆ ಬೆರೆಯಲು ಅವಕಾಶವಿದೆ.

ತ್ರಿವಳಿ (ಟ್ರಿಪಲ್) ಜಲಪಾತಗಳು; ದಿಮಾಪುರಕ್ಕೆ ಭೇಟಿ ನೀಡಿದಾಗ ಟ್ರಿಪಲ್ ಫಾಲ್ಸಿಗೆ ಭೇಟಿ ನೀಡಲೆ ಬೇಕು. ಹೆಸರೇ ಸೂಚಿಸುವಂತೆ ಇಲ್ಲಿ ಮೂರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ.

ದಿಮಾಪುರ್ ಪ್ರಸಿದ್ಧವಾಗಿದೆ

ದಿಮಾಪುರ್ ಹವಾಮಾನ

ದಿಮಾಪುರ್
21oC / 69oF
 • Partly cloudy
 • Wind: NNE 6 km/h

ಉತ್ತಮ ಸಮಯ ದಿಮಾಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ದಿಮಾಪುರ್

 • ರಸ್ತೆಯ ಮೂಲಕ
  ದಿಮಾಪುರದ ಮೂಲಕ ರಾಷ್ಟ್ರೀಯ ಹೆದ್ದಾರಿ 39 ಹಾದು ಹೋಗುತ್ತದೆ. ಇದು ಕೊಹಿಮಾ, ಇಂಫಾಲ್ ಮತ್ತು ಡಿಮಪುರವನ್ನು ದೇಶದ ಇತರ ಭಾಗದೊಂದಿಗೆ ಸಂಪರ್ಕಿಸುತ್ತದೆ. ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ 36 ಅಸ್ಸಾಂಮಿನ ನಾಗಾಂವ್ ಮತ್ತು ಡಿಮಪುರವನ್ನು ಸಂಪರ್ಕಿಸುತ್ತದೆ. ಈ ಹೆದ್ದಾರಿಗಳ ಮೂಲಕ ಪ್ರತಿನಿತ್ಯ ಸಂಚರಿಸುವ ಬಸ್ಸುಗಳ ಮೂಲಕ ಪ್ರವಾಸಿಗರು ಕೊಹಿಮಾವನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಾಗಾಲ್ಯಂಡ್ ರಾಜ್ಯದಲ್ಲಿನ ಏಕೈಕ ರೈಲು ನಿಲ್ದಾಣವನ್ನು ಹೊಂದಿರುವ ದಿಮಾಪುರ್, ಈ ರಾಜ್ಯವನ್ನು ದೇಶದ ಇತರ ಭಾಗಗಳ ಜೊತೆಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಗುವಹಾಟಿ, ಕೊಲ್ಕಟಾ, ನವ ದೆಹಲಿ ಮತ್ತು ದೇಶದ ಇನ್ನಿತರ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲುಗಳು ಬಂದು ಹೋಗುತ್ತಿರುತ್ತವೆ. ಇದರ ಜೊತೆಗೆ ಕೆಲವು ಸರಕು ಸಾಗಾಣಿಕೆ ರೈಲುಗಳು ಸಹ ಇಲ್ಲಿಗೆ ಜೀವನಾವಶ್ಯಕ ವಸ್ತುಗಳನ್ನು ತಂದು ಒದಗಿಸುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಿಮಾಪುರ್ ನಾಗಾಲ್ಯಾಂಡಿನಲ್ಲಿ ವಿಮಾನ ನಿಲ್ದಾಣವನ್ನು ಹೊಂದಿರುವ ಏಕೈಕ ನಗರವಾಗಿದೆ. ಹೀಗಾಗಿ ಇದು ಈ ರಾಜ್ಯದ ಪ್ರಮುಖ ನಗರವಾಗಿದೆ. ಪ್ರವಾಸಿಗರು ಗುವಹಾಟಿ, ಕೊಲ್ಕೊಟಾ ಮತ್ತು ದೆಹಲಿಗಳಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದು. ಏರ್ ಇಂಡಿಯಾ, ಏರ್ ಇಂಡಿಯಾ ರಿಜಿನಲ್, ಜೆಟ್ ಏರ್ ವೇಸ್ ಮತ್ತು ಜೆಟ್ ಕನೆಕ್ಟ್ ವಿಮಾನಗಳು ದೇಶದ ಇತರ ಭಾಗಗಳಿಂದ ದಿಮಾಪುರಕ್ಕೆ ಪ್ರತಿದಿನವು ಬಂದು ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Feb,Tue
Return On
20 Feb,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Feb,Tue
Check Out
20 Feb,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Feb,Tue
Return On
20 Feb,Wed
 • Today
  Dimapur
  21 OC
  69 OF
  UV Index: 8
  Partly cloudy
 • Tomorrow
  Dimapur
  11 OC
  51 OF
  UV Index: 9
  Partly cloudy
 • Day After
  Dimapur
  16 OC
  61 OF
  UV Index: 9
  Partly cloudy