Search
 • Follow NativePlanet
Share
ಮುಖಪುಟ » ಸ್ಥಳಗಳು» ಇಂಫಾಲ್

ಇಂಫಾಲ್ - ನಗರದ ಕಾವಲುಗಾರ - ಸಮೃದ್ಧ ಹಸಿರು  ಬೆಟ್ಟಗಳು

44

ಪ್ರಕೃತಿ ಸೌಂದರ್ಯ, ಎರಡನೇ ಮಹಾಯುದ್ಧದ ಸ್ಮಾರಕ, ವನ್ಯಜೀವಿ ಮತ್ತು ಸ್ಥಳೀಯ ಕರಕುಶಲತೆಗೆ ಹೆಸರುವಾಸಿಯಾಗಿದೆ ಇಂಫಾಲ್. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆಯಾಗಲಿ ಅಥವಾ ವಿಶ್ವವನ್ನೇ ನಡುಗಿಸಿದ ಎರಡನೇ ಮಹಾಯುದ್ಧದ ಸಂದರ್ಭಾನ್ನಾಗಲೀ ಯಾರೂ ಮರೆಯಲು ಸಾಧ್ಯವಿಲ್ಲ. ಅವುಗಳ ಒಳಹೊರಹುಗಳನ್ನು ತಿಳಿಯಲು ಇಂದಿಗೂ ಹಲವಾರು ಜನರು ಆಸಕ್ತರಾಗಿದ್ದಾರೆ. ಇಂತಹ ಐತಿಹಾಸಿಕ ವಿಷಯಗಳಲ್ಲಿ ನೀವು ಆಸಕ್ತಿಯುಳ್ಳವರಾಗಿದ್ದರೆ ನಿಮಗೊಂದು ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಅವಕಾಶ! ಇದೇ ಮಣಿಪುರದ ಇಂಫಾಲ್. 

ಯುದ್ಧದಲ್ಲಿ ಹೋರಾಡಿ ಮಡಿದ ವೀರರಿಗಾಗಿ ನಿರ್ಮಿಸಲಾದ ಇಲ್ಲಿನ ಸ್ಮಾರಕಗಳು ಯುದ್ಧದ ಪ್ರತಿಯೊಂದು ಘಟನೆಯ ಕಥೆಗಳನ್ನು ಹೇಳುತ್ತವೆ. ಈ ಸ್ಥಳದ ಬಗ್ಗೆ ನಿಮಗೆ ಉಪಯುಕ್ತವಾಗುವಂತಹ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ. ಮಣಿಪುರದ ರಾಜಧಾನಿ ಇಂಫಾಲ್,  ಈಶಾನ್ಯ ಭಾರತದಲ್ಲಿ ಕೂಡಿಸಿದ-ವಿದೇಶ ಸಣ್ಣ ಪಟ್ಟಣವಾಗಿದೆ. ಇಂಫಾಲ್ ಪ್ರದೇಶ, ಜಪಾನಿನವರು  ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತ ಪ್ರವೇಶ ಮಾಡಿ ಈ ಪ್ರದೇಶದಲ್ಲಿ ಯುದ್ಧ ನಡೆಸಿದ್ದರ ಪರಿಣಾಮವಾಗಿ ದ್ವಿತೀಯ ವಿಶ್ವ ಸಮರದನಂತರ ಪ್ರವರ್ಧಮಾನಕ್ಕೆ ಬಂತು. ಈ ಯುದ್ಧದಲ್ಲಿ ಜಪಾನಿನ ಸೈನ್ಯ ಏಷ್ಯನ್ ಮಣ್ಣಿನನಲ್ಲಿ ಹೀನಾಯವಾಗಿ ಸೋಲಿಸಲ್ಪಟ್ಟರು. ಹಾಗೂ ಮೊದಲ ಬಾರಿಗೆ ಇಂಫಾಲ್ ಮತ್ತು ಕೊಹಿಮಾ ಕದನ ಗಮನಾರ್ಹವಾಗಿ ಎರಡನೇ ವಿಶ್ವ ಯುದ್ಧದ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅನೇಕರು, ಈ ಯುದ್ಧವುಇಂಫಾಲ್ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿದೆ ಎಂದು ತಿಳಿದಿದ್ದಾರೆ. ಆದರೆ ಆಶ್ಚರ್ಯಕರ ವಿಷಯವೆಂದರೆ, ಇಂಫಾಲ್ ನಗರ ಯುದ್ಧದ ನಂತರ ಹೊಸ ಚಟುವಟಿಕೆಯಿಂದ ಕೂಡಿ ಸ್ವತಃ ಮರುನಿರ್ಮಾಣವಾಯಿತು.

ಬ್ರಿಟೀಷರು ಇಂಫಾಲ್ ನಲ್ಲಿ ನೆಲೆಗೊಳ್ಳಲು ಆರಂಭ ಮಾಡಿದ ನಂತರ ಅವರು ಅತಿ ಪ್ರಮುಖ ಸ್ಥಳಗಳ ಮೌಲ್ಯವನ್ನು ತಿಳಿಯಲಾರಂಭಿಸಿದರು. ಹಾಗೂ ಬ್ರಿಟೀಷ್ ಆಳ್ವಿಕೆಯಾದ್ಯಂತ ಆ ಸ್ಥಳಗಳಿಗೆ ಸೂಕ್ತ ಬೆಲೆ ನೀಡಿದರು. ಜಪಾನ್ ಇಂಫಾಲ್ ನ ಮೇಲೆ ಆಕ್ರಮಣ ಮಾಡಿದಾಗ ಬ್ರಿಟೀಷರು ಇಂಫಾಲ್ ನಲ್ಲಿ ಯುದ್ಧದ ಸೂಕ್ತ ತಯಾರಿ ನಡೆಸಿದ್ದ ಕಾರಣದಿಂದಲೇ ಅವರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು.

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಪ್ರಸಿದ್ಧಿಯನ್ನು ಪಡೆಯುವ ಮೊದಲು, ಇಂಫಾಲ್ 1826 ರಿಂದ ಮಣಿಪುರದ ರಾಜಧಾನಿಯಾಗಿತ್ತು. ಆದರೆ ಇದು 1891 ರಲ್ಲಿ ಆಂಗ್ಲೋ ಮಣಿಪುರಿ ಯುದ್ದಕ್ಕಿಂತ ಮೊದಲು ಅಷ್ಟೇನೂ ಗಮನಕ್ಕೆ ಬಂದ್ರದ ಇಂಫಾಲ್ ಯುದ್ಧದ ನಂತರ ಬ್ರಿಟಿಷ್ ಗಮನ ಸೆಳೆಯಿತು. ಬ್ರಿಟಿಷ್ ರು ಸ್ಥಳೀಯ ರಾಜರನ್ನು ಸೋಲಿಸಿ 1947 ರಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಮಯದವರೆಗೂ ಇಂಗ್ಲೀಷ್ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರು ಇಂಫಾಲ್ ನಗರದಲ್ಲಿ ನೆಲೆಸಲು ಪ್ರಾರಂಭಿಸಿದನಂತರ, ಅವರು ನಗರದ ಆಯಕಟ್ಟಿನ ಸ್ಥಳದ ಮೌಲ್ಯಮಾಪನ ಪ್ರಾರಂಭಿಸಿದರು ಮತ್ತು ಸಮರ್ಪಕವಾಗಿ ಬ್ರಿಟಿಷ್ ಆಡಳಿತದ ಉದ್ದಕ್ಕೂ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದರು. ಜಪಾನಿಗಳು ಇಂಫಾಲ್ ಮೇಲೆ ದಾಳಿ ಮಾಡಿದಾಗ ಅವರ ಮೇಲೆ ದಾಳಿ ನಡೆಸಲು ಬ್ರಿಟಿಷ್ ಭಾರತೀಯ ಸೇನೆ ಯುದ್ಧದ ಕಾರ್ಯಾಚರಣೆಗಳಿಗೆ ನಗರವನ್ನು ಸಜ್ಜುಗೊಳಿಸಿದ್ದರ ಪರಿಣಾಮ, ಜಪಾನ್ ಯುದ್ಧದಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು.

ಇಂಫಾಲ್ ಹೆಸರು, 'ಅನೇಕ ಹಳ್ಳಿಗಳ ಭೂಮಿ' ಎಂದು ಅರ್ಥ ಕೊಡುವ ಯುಂಫಾಲ್ ನಿಂದ ಹುಟ್ಟಿಕೊಂಡಿದೆ.  ನಾಲ್ಕೂ ಕಡೆ ಕೊನೆಯೆ ಇಲ್ಲದಂತೆ ಕಾಣುವ ದಿಕ್ಕುಗಳು ಇಲ್ಲಿಯ ಆಕರ್ಷಣೆಯ ಮತ್ತೊಂದು ಕೇಂದ್ರವಾಗಿದೆ. ಇಲ್ಲಿನ ಸಸ್ಯರಾಶಿಯ ಸೌಂದರ್ಯ ಎಂಥವರನ್ನೂ ಆಕರ್ಷಿಸದೇ ಇರದು.  ಇದು, ಇಂದು ಇಂಫಾಲ್ ಇಷ್ಟು ಸುಂದರ ಹೇಗೆ ಎಂಬುದನ್ನು ತೋರಿಸುತ್ತದೆ. ಇಂಫಾಲ್ ನಗರ, ಕೋಟೆಯಂತೆ ಕಾವಲುಕಾಯುತ್ತಿರುವ ಸೊಂಪಾದ ಹಸಿರು ಬೆಟ್ಟಗಳಿಂದ ಸುತ್ತುವರೆದಿದೆ. ಇಂಫಾಲ,ಸೆಕಮೈ, ಇರಿಲ್, ತೌಬಾಲ್ ಮತ್ತು  ಖುಗಾ ಮೊದಲಾದ ಅನೇಕ ನದಿಗಳು ರಾಜಧಾನಿ ಇಂಫಾಲ್ ನ ಸುತ್ತಮುತ್ತಲಿನ ಬೆಟ್ಟಗಳ ದಾಟಿ ಹರಿಯುತ್ತವೆ. ಹಲಸಿನಹಣ್ಣು ಮರಗಳು ಮತ್ತು ಪೈನ್ ಮರಗಳು ನಗರದ ಬಹುದ್ವಾರಿ ಸೌಂದರ್ಯವನ್ನು ಹೆಚ್ಚಿಸುವನಗರ ಆಕರ್ಷಣೆಯ ನೋಟವಾಗಿವೆ. ಕೇವಲ ಇಷ್ಟೇ ಅಲ್ಲದೇ ಇಂಫಾಲ್, ತನ್ನ ಸಿಲ್ವನ್ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇಂಫಾಲ್, ಪ್ರಾಚೀನ ಸ್ಮಾರಕಗಳು, ದೇವಾಲಯಗಳು,  ಪ್ರವಾಸಿಗರು ಮತ್ತು ಇತಿಹಾಸಕಾರರನ್ನು ಸಮಾನವಾಗಿ ಆಕರ್ಷಿಸುವ ಸ್ಮಾರಕಗಳಿಂದ ತುಂಬಿದೆ. ಯುದ್ಧ ಸ್ಮಾರಕಗಳು ಇಂಫಾಲ್ ನಗರದ ಒಂದು ಪ್ರಮುಖ ಆಕರ್ಷಣೆಯಾಗಿವೆ.

ಮೈತೆಯಿಗಳು ಇಂಫಾಲ್ ಕಣಿವೆಯ ಪ್ರಮುಖ ನಿವಾಸಿಗಳು. ಹಲವಾರು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ಇಂತಹ ಹಲವಾರು ಇತರ ಬುಡಕಟ್ಟು ಗುಂಪುಗಳನ್ನು ಇಲ್ಲಿ ಕಾಣಬಹುದು. ಬಾಮೊನ್ಸ್ ಅಥವಾ ಮಣಿಪುರಿ ಬ್ರಾಹ್ಮಣರು, ಪಂಗನ್ಸ್, ಮಣಿಪುರಿ ಮುಸ್ಲಿಮರು ಕೂಡಾ ನಗರದಪ್ರಮುಖ ನಿವಾಸಿಗಳು. ಕಬೈಸ್ (ಕಬುಯೀಸ್), ತಂಗ್ ಖುಲ್ಸ್(ತಂಗ್ಖುಲ್ಸ್)  ಮತ್ತು ಪೈಟಿ ಮೊದಲಾದ ಬೆಟ್ಟದ ಬುಡಕಟ್ಟುಗಳು ಇಲ್ಲಿ ಕಾಣ ಸಿಗುತ್ತವೆ. ದೇಶದ ಇತರ ಭಾಗಗಳಿಂದ ದೊಡ್ಡ ಪ್ರಮಾಣದ ವಲಸೆಯ ಕಾರಣದಿಂದಾಗಿ, ಇಂಫಾಲ್ ಗಮನಾರ್ಹವಾಗಿ ಮಾರ್ವಾಡಿ, ಪಂಜಾಬಿ, ಬಿಹಾರಿ ಮತ್ತು ಬಂಗಾಳಿ ಜನಸಂಖ್ಯೆಯನ್ನು ಹೊಂದಿದೆ. ಮೈತೆಯಿಲಾನ್ ಅಥವಾ ಮಣಿಪುರಿ, ಇಂಫಾಲ್ ಸ್ಥಳದ ಪ್ರಾಥಮಿಕ ಭಾಷೆಯಾಗಿದೆ. ಆದರೆ ಇಂಗ್ಲೀಷ್, ಹಿಂದಿ, ಟಿಬೆಟ್ ಮತ್ತು ಬರ್ಮೀಸ್ ಕೂಡಮಾತನಾಡುವವರಿದ್ದಾರೆ.

ಇಂಫಾಲ್ ನಲ್ಲಿ ಭೇಟಿ ಮಾಡಬಹುದಾದಂತಹ ಅನೇಕ ಸ್ಥಳಗಳಿವೆ. ಇಂಫಾಲ್ ನ ಅತ್ಯಂತ ಭೇಟಿ ಮಾಡಲೇ ಬೇಕಾದ  ತಾಣಗಳಲ್ಲಿ ಒಂದು ಕಾಂಗ್ಲಾ ಕೋಟೆ. ಇದು ಭಾರತದ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಔಪಚಾರಿಕವಾಗಿ ರಾಜ್ಯಸರ್ಕಾರಕ್ಕೆ ಈ ಸ್ಥಳವನ್ನು 2004 ರಲ್ಲಿ ಹಸ್ತಾಂತರಿಸಿದರು. ಅಲ್ಲಿಯವರೆಗೂ ಈ ಸ್ಥಳ ಅಸ್ಸಾಂ ರೈಫಲ್ಸ್ ನ ನಿಯಂತ್ರಣದ ಅಡಿಯಲ್ಲಿತ್ತು. ’ಕಾಂಗ್ಲಾ’,  ಮೈತೆಯಿ ಪದವಾಗಿದ್ದು ಇದರ ಅರ್ಥ 'ಒಣ ಭೂಮಿ ಮತ್ತು ಇಂಫಾಲ್ ನದಿಯ ದಂಡೆಯ ಮೇಲಿರುವ ಸ್ಥಳ’ ಎಂದರ್ಥ.

ಇಂಫಾಲ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರವಾಸಿಗರು ಖ್ವೈರಾಂಬಾದ್ ಬಜಾರ್ ಗೆ ಭೇಟಿ ನೀಡಲೇಬೇಕು. 'ಇಮಾ ಕೈಥೆಲ್' ಅನನ್ಯ ಬಜಾರ್ ಸಂಪೂರ್ಣವಾಗಿ ಮಹಿಳೆಯರಿಂದ ನಡೆಸಲ್ಪಡುವ ಬಜಾರ್! 'ಇಮಾ ಕೈಥೆಲ್' ಅಕ್ಷರಶಃ ಅನುವಾದ ’ಮಾತೃ ಮಾರುಕಟ್ಟೆ’ ಎಂಬುದು.

ಇಂಫಾಲ್ ನಲ್ಲಿ ಭೇಟಿ ಮಾಡಬಹುದಾದ ಇನ್ನೊಂದು ಪ್ರಮುಖ ಸ್ಥಳ ಪೊಲೆ ಮೈದಾನ. ಇದು ವಿಶ್ವದ ಅತ್ಯಂತ ಹಳೆಯದಾಗಿದ್ದು ಇಂಫಾಲ್ ನಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಪೊಲೊ ಮೈದಾನವಾಗಿದೆ. ಮಣಿಪುರಿ ಭಾಗಗಳು ಮತ್ತು ಇತಿಹಾಸದಲ್ಲಿ ಆಸಕ್ತಿಇರುವವರಿಗೆ, ಮಣಿಪುರ ರಾಜ್ಯ ಮ್ಯೂಸಿಯಂ, ರಾಜ್ಯದ  ಸಂಪೂರ್ಣ ಮಾಹಿತಿಯನ್ನು ನೀಡುವ ಉಗ್ರಾಣವಾಗಿದೆ.

ಇಂಫಾಲ ಹೊರವಲಯದಲ್ಲಿ ಭೇಟಿ ಮಾಡಬಹುದಾದ ಇತರ ಸ್ಥಳಗಳೆಂದರೆ,  ಕೈಬುಲ್ ಲಂಜಾವೋ ರಾಷ್ಟ್ರೀಯ ಉದ್ಯಾನ, ಮೊಯಿರಕಾಂಗ್, ಆಂಡ್ರೊ ಸೇಕ್ತಾ ಮೊದಲಾದವು.

ಇಂಫಾಲ್ ಪ್ರಸಿದ್ಧವಾಗಿದೆ

ಇಂಫಾಲ್ ಹವಾಮಾನ

ಇಂಫಾಲ್
25oC / 78oF
 • Patchy rain possible
 • Wind: WNW 9 km/h

ಉತ್ತಮ ಸಮಯ ಇಂಫಾಲ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಇಂಫಾಲ್

 • ರಸ್ತೆಯ ಮೂಲಕ
  ನೀವು, ಎಲ್ಲಾ ಪ್ರಮುಖ ಉತ್ತರ ಈಶಾನ್ಯ ನಗರಗಳು ಮತ್ತು ಪಟ್ಟಣಗಳಿಂದ ರಸ್ತೆ ಮಾರ್ಗದ ಮೂಲಕ ಇಂಫಾಲ್ ನಗರವನ್ನು ತಲುಪಬಹುದು. ಎನ್. ಹೆಚ್ 39 ಮತ್ತು ಎನ್.ಹೆಚ್ 150 ಮೂಲಕ ಗೌಹಾತಿಯಿಂದ 479 ಕಿಲೋ ಮೀಟರುಗಳವರೆಗೆ ಸಂಪರ್ಕ ಹೊಂದಿದೆ. ನೀವು 208 ಕಿಲೋಮೀಟರುಗಳ ದೂರದಲ್ಲಿರುವ ದಿಮಾಪುರ್ ಮೂಲಕವೂ ನಗರವನ್ನು ತಲುಪಬಹುದು. ನೀವು ಈ ದಾರಿಯಲ್ಲಿ ಅತ್ಯಂತ ಸಾಹಸ ರಸ್ತೆ ಪ್ರಯಾಣದ ಅನುಭವವನ್ನು ಪಡೆಯಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಂಫಾಲ್ ನಗರದ ಒಳಗೆ ಹಾಗೂ ಸುತ್ತಮುತ್ತ ರೈಲ್ವೆ ನಿಲ್ದಾಣಗಳಿಲ್ಲ. ಇಂಫಾಲ್ ಪಟ್ಟಣದಿಂದ 208 ಕಿಲೋಮೀಟರ್ ದೂರದಲ್ಲಿರುವ ದಿಮಾಪುರ್ ಹತ್ತಿರದ ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ದೆಹಲಿ, ಗೌಹಾತಿ, ಕೋಲ್ಕತಾ ಮತ್ತು ದೇಶದ ಇತರ ಅನೇಕಸ್ಥಳಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುತ್ತದೆ. ಇಂಫಾಲ್ ನಗರವನ್ನು ತಲುಪಲು ದಿಮಾಪುರ್ ರೈಲ್ವೆ ನಿಲ್ದಾಣದಿಂದ ಕ್ಯಾಬ್ ಗಳು ಸುಲಭವಾಗಿ ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಂಫಾಲ್ ವಿಮಾನ ನಿಲ್ದಾಣ, ನಗರದಿಂದ 8 ಕಿಲೋಮೀಟರ್ ದೂರದಲ್ಲಿದೆ ಮತ್ತು ಶಟಲ್ ಕ್ಯಾಬ್ ಗಳು ಮತ್ತು ಬೇರೆ ರೀತಿಯ ಉತ್ತಮ ಸಾರ್ವಜನಿಕ ಸಾರಿಗೆ ಸಂಪರ್ಕವೂ ಇದೆ. ದೆಹಲಿ, ಕೋಲ್ಕತಾ, ಗೌಹಾತಿ, ಐಜ್ವಾಲ, ಬೆಂಗಳೂರು ಮತ್ತು ಸಿಲ್ಚಾರ್ನಗರಗಳಿಂದ ನೇರ ವಿಮಾನಗಳು ಲಭ್ಯವಿವೆ. ಏರ್ ಇಂಡಿಯಾ ರೀಜನಲ್, ಜೆಟ್ ಕೊನೆಕ್ಟ್ ಮತ್ತು ಇಂಡಿಗೊ ವಿಮಾನಗಳು ಲಭ್ಯ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Feb,Tue
Return On
26 Feb,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Feb,Tue
Check Out
26 Feb,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Feb,Tue
Return On
26 Feb,Wed
 • Today
  Imphal
  25 OC
  78 OF
  UV Index: 6
  Patchy rain possible
 • Tomorrow
  Imphal
  20 OC
  67 OF
  UV Index: 6
  Moderate rain at times
 • Day After
  Imphal
  20 OC
  69 OF
  UV Index: 6
  Patchy rain possible