Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಫಿರೆ » ಹವಾಮಾನ

ಕಿಫಿರೆ ಹವಾಮಾನ

ಕಿಫಿರೆಯನ್ನು ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಭೇಟಿಮಾಡಲು  ಅತ್ಯುತ್ತಮ ಸಮಯ. ಈ ಸಮಯದಲ್ಲಿ ಮುಂಗಾರುಮಳೆಯು ಕೊನೆಗೊಳ್ಳುತ್ತಿದ್ದು ಚಳಿಗಾಲವು ಆರಂಭವಾಗುತ್ತದೆ. ತಾಪಮಾನವು ಈ ತಿಂಗಳುಗಳಲ್ಲಿ ಗಣನೀಯವಾಗಿ ಇಳಿದರೂ ಇಲ್ಲಿ ಸುತ್ತಾಡಲು ಅತ್ಯಂತ ಆರಾಮದಾಯಕವಾಗಿರುವುದು.  ಒಣ ಹವೆಯ ಹವಾಮಾನವಿರುತ್ತದೆ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಂಡಿದ್ದರೆ ಅಹ್ಲಾದಕರ ಅನುಭವ ಆಗುತ್ತದೆ.

ಬೇಸಿಗೆಗಾಲ

ಕಿಫಿರೆಯಲ್ಲಿ ಬೇಸಿಗೆ ಕಾಲವು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇತರ ಪ್ರದೇಶಗಳಿಗೆ ಹೋಲಿಸಿದರೆ ಅಲ್ಪಾವಧಿಯಾಗಿರುತ್ತದೆ. ಬಿಸಿ ಮತ್ತು ತೇವಪೂರಿತ ಹವಾಮಾನವು ಎರಡು ತಿಂಗಳುಗಳಿರುತ್ತವೆ ಹಾಗೂ ಆ ಸಮಯದಲ್ಲಿ ಸೆಖೆಯನ್ನು ತಡೆದುಕೊಳ್ಳಲು ಅತ್ಯಂತ ಅನಾನುಕೂಲವಾಗುವ ಸಂಭವವಿರುತ್ತದೆ. ಈ ಸಮಯದಲ್ಲಿ ತಾಪಮಾನವು ಸರಾಸರಿ 30-35 ಡಿಗ್ರಿಗಳಷ್ಟುಇರುತ್ತದೆ.  ಇದುವರೆಗೂ ಗರಿಷ್ಠ ತಾಪಮಾನವು 37 ಡಿಗ್ರಿ ವರೆಗೂ ಹೋಗಿದೆ.

ಮಳೆಗಾಲ

ಮಳೆಗಾಲವು ಕಿಫಿರೆಯಲ್ಲಿ ಜೂನ್ ತಿಂಗಳಲ್ಲಿ ಆರಂಭವಾಗಿ ಅಕ್ಟೋಬರ್ ವರೆಗೂ ವಿಸ್ತರಿಸುತ್ತದೆ.  ಆದರೆ ಅನೇಕಬಾರಿ ಸೆಪ್ಟೆಂಬರ್ ತಿಂಗಳಲ್ಲಿ ನಿಲ್ಲುತ್ತದೆ. ಸಾಮಾನ್ಯವಾಗಿ ಕಫಿರೆಯಲ್ಲಿ 75 ಮಿ.ಮೀ. ಮಳೆಯು ದಾಖಲಾಗಿದೆ.  ಹವಾಮಾನವು ಈ ಸಮಯದಲ್ಲಿ ಹಿತಕರವಾಗಿರುತ್ತದೆ ಮತ್ತು ಕಿಫಿರೆಗೆ ಭೇಟಿ ಕೊಡಲು ಇದು ಸೂಕ್ತ ಸಮಯವೂ ಆಗಿದೆ. 

ಚಳಿಗಾಲ

ಬೇಸಿಗೆಯಲ್ಲಿ ತೇವಪೂರಿತ ಹವಾಮಾನದಿಂದ ಅನಾನುಕುಲವಾಗಿರುವಂತೆಯೇ ಕಫಿರೆಯಲ್ಲಿ ಚಳಿಗಾಲದಲ್ಲಿ ಸಾಕಷ್ಟು ಚಳಿಯಿರುತ್ತದೆ.  ಇಲ್ಲಿ ಕನಿಷ್ಠ ತಾಪಮಾನ 2.7 ಡಿಗ್ರಿ ದಾಖಲಾಗಿದೆ.  ಚಳಿಗಾಲದಲ್ಲಿ ಬರುವ ಪ್ರವಾಸಿಗಳು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಬರುವುದು ಒಳ್ಳೆಯದು.  ಚಳಿಗಾಲವು ಡಿಸೆಂಬರ್‌ನಲ್ಲಿ ಆರಂಭವಾಗಿ ಫೆಬ್ರುವರಿ ವರೆಗೆ ಇರುತ್ತದೆ.