ನಾಗಾಲ್ಯಾಂಡಿನ ಪ್ರದೇಶದಲ್ಲಿ ಪ್ರವಾಸಮಾಡುವಾಗ ಕಿಫರೆ ಪಟ್ಟಣದ ಹೊರವಲಯದಲ್ಲಿರುವ ಕಿಸಾಟೊಂಗ್ ಹಳ್ಳಿಯನ್ನು ನೀವು ಭೇಟಿ ಮಾಡಲೇ ಬೇಕು. ಈ ಹಳ್ಳಿಯಲ್ಲಿ ಸಾಂಗ್ಟಾಂ ಜನಾಂಗದವರು ನೆಲೆಸಿರುವ ಸ್ಥಳ. ಈ ಸ್ಥಳವು ಒಂದು ಅತ್ಯಂತ ಎತ್ತರದ ಬೆಟ್ಟದ ತುದಿಯಲ್ಲಿದ್ದು ಕೆಳಗೆ ಒಂದು ಸಮ್ಮೋಹನಗೊಳಿಸುವ ದೃಶ್ಯವನ್ನು ಕಾಣಬಹುದು. ನೀವು ಪ್ರಕೃತಿ ತಾಯಿಯ ತೊಡೆಯಮೇಲೆ ಮಲಗಿರುವ ಹಾಗೆ ಸ್ವರ್ಗಲೋಕದ ಅನುಭವವಾಗುತ್ತದೆ. ನಾಗಾಲ್ಯಾಂಡಿನಲ್ಲಿ ನೀವು ಚಳಿಗಾಲದ ಮುಬ್ಬಿನ ಬೆಳಿಗ್ಗೆ ಪ್ರವಾಸಮಾಡುತ್ತಿದ್ದರೆ ಈ ಸ್ಥಳದಲ್ಲಿ ಇರಲೇಬೇಕು.
ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಮಧ್ಯ ಏಶ್ಯಾ ಪ್ರದೇಶದ ಕಠಿಣ ಶೀತ ತಪ್ಪಿಸಿಕೊಳ್ಳಲು ವಲಸೆ ಪಕ್ಷಿಗಳು ಹಿಂಡು ಹಿಂಡಾಗಿ ಇಲ್ಲಿಗೆ ಬರುವ ದೃಶ್ಯ. ಸೈಬೀರಿಯನಿಂದ ಆಫ್ರಿಕಾಗೆ ವಾಯುಮಾರ್ಗದಲ್ಲಿ ಹೋಗುವ ದಾರಿಯಲ್ಲಿ ವಿವಿಧ ಜಾತಿಗಳ ಪಕ್ಷಿಗಳಲ್ಲಿ ಒಂದಾದ ಆಮುರ್ ಫಾಲ್ಕನ್ ಪಕ್ಷಿಗಳು ಇಲ್ಲಿಗೆ ಬರುವುದನ್ನು ನೋಡುವುದು ಎಂತಹ ಪಕ್ಷಿಪ್ರೇಮಿಗೂ ಸಹ ಇದೊಂದು ಸ್ವರ್ಗದಂತೆ ಅನುಭವವಾಗುತ್ತದೆ.