ಪಾಖ್ ಕೋಯಿ ಎಂದೂ ಕರೆಯಲಾಗುವ ವೇದ ಶಿಖರ ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯ ಅತ್ಯಂತ ಎತ್ತರವಾದ ಶಿಖರವಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಈ ಸ್ಥಳವು ನಿಮಗೆ ಮನೋಹರವಾದ ದೃಶ್ಯಾವಳಿಗಳನ್ನು ಕಟ್ಟಿ ಕೊಡುವುದರಲ್ಲಿ ಸಂಶಯವಿಲ್ಲ. ಇಲ್ಲಿಂದ ಕಾಣುವ ಬೆಟ್ಟಗಳು ಮತ್ತು ನದಿಗಳು ನಿಮ್ಮನ್ನು ಬೆರಗಾಗಿಸುವುದರಲ್ಲಿ ಸಂಶಯವಿಲ್ಲ. ಇಲ್ಲಿಂದ ನೀವು ಬ್ರಹ್ಮಪುತ್ರಾ ಮತ್ತು ಚಿಂಡ್ವಿನ್ ನದಿಗಳನ್ನು ಕಾಣಬಹುದಾಗಿದೆ.
ಈ ಶಿಖರದ ಸಮೀಪವೇ ಒಂದು ಬೃಹತ್ತಾದ ಜಲಪಾತವೂ ಇದೆ. ಈ ಜಲಪಾತದ ಸುತ್ತಲ ಪರಿಸರವು ಕೋನ್ಯಾಕ್ ಪರಿಸರಗಳಲ್ಲೇ ಅತ್ಯಂತ ಮನೋಹರವಾದ ಪರಿಸರವಾಗಿದೆ ಎಂದು ಹೇಳಲಾಗುತ್ತದೆ. ವೇದ ಶಿಖರಕ್ಕೆ ಐತಿಹಾಸಿಕ ಮಹತ್ವವೂ ಇದೆ. ಬ್ರಿಟಿಷರು ಮೊದಲ ಬಾರಿಗೆ ಇಲ್ಲಿಯೇ ತಮ್ಮ ಕ್ಯಾಂಪ್ ಅನ್ನು ಸ್ಥಾಪಿಸಿದ್ದರು. ಇದೇ ಶಿಖರದ ಮೇಲೆ ಮೊದಲ ಬಾರಿಗೆ ಬ್ರಿಟೀಷರು ಅಫೀಮು ಗಿಡಗಳನ್ನು ಬೆಳೆಸಿದ್ದರು. ಈ ಪರಿಸರ ಸೌಂದರ್ಯ, ತುಂಬಿಕ್ಕಿ ಹರಿಯುವ ಬ್ರಹ್ಮಪುತ್ರಾ ನದಿ ಮತ್ತು ಪ್ರಶಾಂತವಾದ ವಾತಾವರಣ ನೀವು ಜೀವಮಾನದಲ್ಲಿ ಒಂದು ಬಾರಿ ಮಾತ್ರ ಅನುಭವಿಸುವ ಅನುಭವವನ್ನು ನೀಡುತ್ತದೆ.