ಶಾಂಗ್ನ್ಯು ಗ್ರಾಮ ಮೋನ್ ನ ಅತ್ಯಂತ ಸಾಂಪ್ರದಾಯಿಕ ಗ್ರಾಮವಾಗಿದೆ. ಇಲ್ಲಿಯೂ ಮುಖ್ಯಸ್ಥ ಆಂಘ್ ಆಗಿದ್ದಾನೆ. ಇಲ್ಲಿನ ಮುಖ್ಯಸ್ಥನ ಮನೆ ಗ್ರಾಮದ ಪ್ರಮುಖ ಆಕರ್ಷಣೆ ಆಗಿದೆ. ಈ ಮನೆಯ ಸುತ್ತಲೂ ಮರದಲ್ಲಿ ಕೆತ್ತಲಾದ ಕೆತ್ತನೆಗಳಿವೆ ಹಾಗೂ ಮನೆಯ ದ್ವಾರವೂ ಮರದಿಂದ ಮಾಡಲಾಗಿದ್ದು ಬಹಳ ಆಕರ್ಷಕವಾಗಿದೆ. ಈ ಮನೆಯನ್ನು ದೇವತೆಯರು ಬಂದು ಕಟ್ಟಿ ಹೋಗಿದ್ದಾರೆ ಎಂದು ಇಲ್ಲಿನ ಜನರು ನಂಬುತ್ತಾರೆ. ಇದು ಎಂಟು ಅಡಿ ಎತ್ತರ ಹಾಗೂ ಹನ್ನೆರಡು ಅಡಿ ಅಗಲವಾಗಿದೆ. ಈ ಮನೆಯನ್ನು ಶಿಲಾಯುಗದ ಸಮಯದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ.
ಇದರ ಪ್ರಕಾರ ಈ ಮನೆಯು ಸುಮಾರು 500-600 ವರ್ಷ ಹಳೆಯದಾಗಿದೆ. ಈ ಮನೆಯು ಮಾನವರ ಮತ್ತು ಇತರ ಪ್ರಾಣಿಗಳ ಕುರಿತಾದ ಕೆತ್ತನೆಗಳನ್ನು ಹೊಂದಿದೆ. ಆಂಘ್ ನ ಮನೆಯ ಹೊರಭಾದಗಲ್ಲಿ ಒಂದು ಸ್ಮಾರಕ ಕಲ್ಲು ಕೂಡ ಇದೆ. ಇಂದಿನ ಅಸ್ಸಾಂ ನ ಅಂದಿನ ರಾಜಮನೆತನವಾದ ಆಹೋಮ ರ ಕಾಲದಲ್ಲಿ ಶಾಂಗ್ನ್ಯೂ ಗ್ರಾಮದ ಆಂಘ್ ಇದ್ದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿನ ಗ್ರಾಮದ ಜನಾಂಗ ಕೂಡ ಕೋನ್ಯಾಕ್ ಜನಾಂಗವೇ ಆಗಿದೆ.