Search
 • Follow NativePlanet
Share
ಮುಖಪುಟ » ಸ್ಥಳಗಳು» ಮಿಯಾವೋ

ಮಿಯಾವೋ : ಪ್ರಶಾಂತತೆಯನ್ನು ಪ್ರತಿಬಿಂಬಿಸುವ ಪ್ರದೇಶ

9

ಮಿಯಾವೋ – ಇದು ಚಾಂಗಲಾಂಗ ಜಿಲ್ಲೆಯ ಒಂದು ಉಪ ವಿಭಾಗವಾಗಿದೆ. ಇದು ಆಸ್ಸಾಂ ಗಡಿಯಿಂದ ಸುಮಾರು 25 ಕೀಲೊ ಮೀಟರ ದೂರದಲ್ಲಿದೆ. ಇದು ಉತ್ತರ ಪೂರ್ವ ಭಾರತದ ಪ್ರದೇಶವಾದ್ದರಿಂದ ಇಲ್ಲಿ ನೀವು ಭಾರಿ ಪ್ರಮಾಣದ ಮಳೆಯನ್ನು ಕಾಣಬಹುದು. ಮಿಯಾವೋ ಪ್ರದೇಶವನ್ನು ಅರುಣಾಚಲ ಪ್ರದೇಶ ರಾಜ್ಯದ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಮಿಯಾವೋ ನಗರದ ಮೂಲಕ ಹರಿಯುವ ಪ್ರಮುಖ ನದಿಗಳಲ್ಲಿ ನಾವೋ-ದಿಹಿಂಗ ನದಿಗೆ ಪ್ರಮುಖ ಸ್ಥಾನವಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 213 ಮೀಟರ ಎತ್ತರದಲ್ಲಿದೆ.  ಮಿಯಾವೋ ದಲ್ಲಿ ಪಟಕಾಯ ಎಂಬ ಕರೆಯಲ್ಪಡುವ ಪರ್ವತ ಶ್ರೇಣಿಗಳ ಸಾಲು ಇದೆ. ಇದು ಹಿಮಾಲಯದ ಪರ್ವತ ಶ್ರೇಣಿಗಳ ಪೂರ್ವ ವಿಸ್ತರಣೆಯಾಗಿದೆ.

ಮಿಯಾವೋ : ಒಂದು ಸಂಕ್ಷಿಪ್ತ ಅವಲೋಕನ

ಎತ್ತರವಾದ ಅರಣ್ಯಗಳು ಮತ್ತು ತಂಪಾದ ವಾತಾವರಣ ಇವುಗಳು ಮಿಯಾವೋ ನಗರವನ್ನು ಅರುಣಾಚಲ ಪ್ರದೇಶ ರಾಜ್ಯದಲ್ಲಿಯೇ ಒಂದು ಆಕರ್ಷಕ ಮತ್ತು ಜನಪ್ರಿಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಿವೆ. ದಿಯುನ ಮತ್ತು ಚೌಕಹಾಮ್ ಈ ಎರಡು ಪಟ್ಟಣಗಳು ಮಿಯಾವೋ  ಪ್ರದೇಶದ ಅಡಿಯಲ್ಲಿ ಬರುತ್ತವೆ. ಚೌಕಹಾಮ ನಗರವು ಪೀಠೊಪಕರಣಗಳ ವ್ಯಾಪಾರದ ಮೂಲಕ ಸಾಕಷ್ಟು ಆದಾಯವನ್ನು ಸೃಷ್ಠಿಸಿದೆ. ಮತ್ತು  ಈ ನಗರವು ಹಿಂದಿನ ಕಾಲದಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿಗಳಲ್ಲಿ ಒಂದು ಎಂದು ಪ್ರಸಿದ್ಧಿಯನ್ನು ಪಡೆದಿತ್ತು. ಇದು ಚಿಕ್ಕ ನಗರವಾದರೂ ಸಹ  ಮಿಯಾವೋ ಉತ್ತಮ ಸಾರಿಗೆ ಮತ್ತು ಸಂಪರ್ಕಗಳನ್ನು ಒಳಗೊಂಡಿದೆ. ಇಲ್ಲಿ ಅನುಕೂಲಕರವಾದ ಸಾರಿಗೆ ನಿಲ್ದಾಣವಾಗಿದ್ದು  ಇಲ್ಲಿ ಪ್ರತಿ ದಿನ ಸಾಕಷ್ಟು ಬಸ್ಸುಗಳು ಓಡಾಡುತ್ತವೆ.

ಮಿಯಾವೋ ಒಂದು ಸುಂದರ ಪ್ರಶಾಂತ ನಗರವಾಗಿದೆ. ಇದರ ಹೊರತಾಗಿಯೂ ಮಿಯಾವೋ ನಗರವು ಅನೇಕ ಪ್ರವಾಸಿ ಆಕರ್ಷಕ ಸ್ಥಳಗಳನ್ನು ಒಳಗೊಂಡಿದೆ. ಇಲ್ಲಿರುವ  ನಮ್ದಫಾ ಟೈಗರ ಪ್ರೊಜೆಕ್ಟ, ಕಿರು ಮೃಗಾಲಯ, ವಸ್ತು ಸಂಗ್ರಹಾಲಯ ಮತ್ತು ಇನ್ನು ಅನೇಕ ಸುಂದರ ಸ್ಥಳಗಳು ಪ್ರವಾಸಿಗರ ಆಸಕ್ತಿಯನ್ನು ಕೆರಳಿಸುತ್ತವೆ. ಮಿಯಾವೋ ದಲ್ಲಿ ಅನೇಕ ಹಿಂದು ದೇವಸ್ಥಾನಗಳು ಮತ್ತು ಚರ್ಚಗಳಿವೆ. ರಿವೈವಲ್ ಚರ್ಚು, ಕ್ರಿಸ್ತ ಚರ್ಚು ಮತ್ತು ಕ್ಯಾಥೋಲಿಕ ಚರ್ಚು – ಇಂತಹ ಚುರ್ಚುಗಳು ಮಿಯಾವೋ ನಗರದಲ್ಲಿ ಕಂಡು  ಬರುತ್ತವೆ. ಹೆಚ್ಚುವರಿಯಾಗಿ ಮಿಯಾವೋ ನಗರವು ಸರಕಾರವು ನಿರ್ವಹಿಸಲ್ಪಡುವ ಶಾಲೆ ಮತ್ತು ಸರಕಾರಿ ಕಚೇರಿಗಳಲ್ಲಿ ನ್ಯಾಯಯುತವಾದ ಪಾಲನ್ನು ಹೊಂದಿದೆ. ಮಿಯಾವೋ ಇದು ಒಂದು ಸ್ವಂತದ ವಾರ ಪತ್ರಿಕೆಯನ್ನು ಹೊಂದಿದ್ದು, ಅದರಲ್ಲಿ ಸ್ಥಳೀಯ ಮಾಹಿತಿ, ವಿಷಯ, ವರದಿಯನ್ನು ಪ್ರಕಟಿಸುತ್ತದೆ. ಇದನ್ನು ಪಿಸಿ ಝೌಂಗ ಎಂಬುವವರು ಪ್ರಕಟಿಸುತ್ತಾರೆ. ಈ ಪತ್ರಿಕೆಯ ಹೆಸರು “ದಿ ಮಿಯಾವೋ ಟೈಮ್ಸ”.

ಹಾಗೆಯೇ ಮಿಯಾವೋ ನಗರದಲ್ಲಿ ವಾಸವಾಗಿರುವ ಸ್ಥಳೀಯರಲ್ಲಿ ಬಹುತೇಕ ವ್ಯಕ್ತಿಗಳು ಸರಕಾರಿ ಕೆಲಸವನ್ನು ಮಾಡುತ್ತಾರೆ, ಮತ್ತು ಹಳ್ಳಿಯ ಜನರು ಮತ್ತು ಹಳ್ಳಿಯ ಹತ್ತಿರದಲ್ಲಿ ವಾಸವಾಗಿರುವ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಮಿಯಾವೋ ದಲ್ಲಿ ವ್ಯವಸಾಯ ಮತ್ತು ಚಹಾ ತೋಟಗಾರಿಕೆ ತುಂಬ ಜನಪ್ರಿಯವಾಗಿದೆ. ಈ ನಗರದ ಪ್ರಮುಖ ಬುಡಕಟ್ಟು ಜನಾಂಗ ಎಂದರೆ ತಾಂಗ್ಸಾ, ಸಿಂಗಫು ಮತ್ತು ಲೀಸು. ಈ ಬುಡಕಟ್ಟುಗಳ ಹೊರತಾಗಿಯೂ ಇಲ್ಲಿ ಟಿಬೇಟಿಯನ್ ನಿರಾಶ್ರಿತರು ಮತ್ತು ಚಕ್ಮಾ ಬುಡಕಟ್ಟು ಜನಾಂಗದವರು ಇಲ್ಲಿ ನೆಲೆಸಿದ್ದಾರೆ. ಮಿಯಾವೋ ಪ್ರದೇಶಾದ ಚೌಕಹಾಮ್ ನಗರದ ಉತ್ತರದ ಭಾಗದಲ್ಲಿ ಮಿಸಮಿಸ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ.

ಈ ಪ್ರದೇಶವು ಶುಷ್ಕ ಪರ್ವತ ಭೂ ಪ್ರದೇಶವಾಗಿದ್ದು ಆಫೀಮು ಬೆಳೆಗೆ ಸೂಕ್ತವಾಗಿದೆ. ಇದು ಅಫಿಮು ವ್ಯವಸಾಯಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿ ಸಾಮಾನ್ಯವಾಗಿ ಮಾತನಾಡುವ ಭಾಷೆಗಳೆಂದರೆ ತಾಂಗ್ಸ, ಸಿಂಗಪೂ, ಆಸಾಮಿ, ಹಿಂದಿ ಮತ್ತು ಇಂಗ್ಲೀಷ.

ಮಿಯಾವೋದಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಮಿಯಾವೋ ಒಂದು ಸುಂದರ ಪ್ರಶಾಂತ ನಗರವಾಗಿದೆ. ಇದರ ಹೊರತಾಗಿಯೂ ಮಿಯಾವೋ ನಗರವು ಅನೇಕ ಪ್ರವಾಸಿ ಆಕರ್ಷಕ ಸ್ಥಳಗಳನ್ನು ಒಳಗೊಂಡಿದೆ. ಇವುಗಳಿಗೆ ಪ್ರವಾಸಿಗರು ಅವಶ್ಯಕವಾಗಿ ಭೇಟಿ ಕೊಡಬೇಕು. ಇದರಲ್ಲಿ ಪ್ರಮುಖವಾದವುಗಳು ಎಂದರೆ ಬೊರದುಮ್ಸ,ನಂಮ್ಸಿ, ನಾಮಪಾಂಗ, ಮತ್ತು ಜೈರಾಮಪುರ.

ಮಿಯಾವೋ ಹವಾಮಾನ

ನೀವು ಮಿಯಾವೋ ನಗರವನ್ನು ಬೇಸಿಗೆ ಕಾಲದಲ್ಲಿ ಭೇಟಿ ಕೊಡಲು ಇಚ್ಛಿಸಿದರೆ, ನೀವು ನಿಮ್ಮೊಂದಿಗೆ ಹತ್ತಿ ಉಡುಪುಗಳನ್ನು ಕೊಂಡೊಯ್ಯಲು ಮರೆಯಬೇಡಿ. ಅದೇ ಚಳಿಗಾಲವಾದರೆ ನೀವು ನಿಮ್ಮೊಂದಿಗೆ ವೂಲನ ಉಡುಪುಗಳನ್ನು ಕೊಂಡೊಯ್ಯಲು ಮರೆಯಬೇಡಿ.

ಮಿಯಾವೋ ನಗರವನ್ನು ತಲುಪುವುದು ಹೇಗೆ?

ಮಿಯಾವೋ ತನ್ನ ಸುತ್ತಲಿರುವ ಎಲ್ಲ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕಗಳನ್ನು ಹೊಂದಿದೆ. ಪ್ರವಾಸಿಗರು ಮಿಯಾವೋ ನಗರವನ್ನು ವಿಮಾನ, ರೇಲ್ವೇ ಮತ್ತು ರಸ್ತೆ ಸಾರಿಗೆಯ ಮೂಲಕ ತಲುಪಬಹುದು.

ಮಿಯಾವೋ ಪ್ರಸಿದ್ಧವಾಗಿದೆ

ಮಿಯಾವೋ ಹವಾಮಾನ

ಉತ್ತಮ ಸಮಯ ಮಿಯಾವೋ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮಿಯಾವೋ

 • ರಸ್ತೆಯ ಮೂಲಕ
  ಮಿಯಾವೋವನ್ನು ಆಸ್ಸಾಮ ರಾಜ್ಯ ಸಾರಿಗೆಯ ಮೂಲಕ ತಲುಪಬಹುದು. ಮತ್ತು ಅರುಣಾಚಲ ಪ್ರದೇಶ ರಾಜ್ಯ ಸಾರಿಗೆ ನಿಗಮದ ಬಸ್ಸುಗಳು ಪ್ರತಿ ದಿನ ದಿಬ್ರುಘರದಿಂದ ಮಿಯಾವೋ ಪ್ರದೇಶಕ್ಕೆ ತಿನಸುಕಿಯ, ಮಾರ್ಘೆರಿತಾ,ಲೆಡೊ,ಜಗುನ ಮತ್ತು ಖಾರಸಂಗ ಮಾರ್ಗವಾಗಿ ಚಲಿಸುತ್ತವೆ. ಪ್ರವಾಸಿಗರು ಈ ಬಸ್ಸುಗಳನ್ನು ಸಹ ಬಳಸಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಿಯಾವೋ ಇದು ತಿನಸುಕಿಯ ರೇಲ್ವೆ ನಿಲ್ದಾಣದಿಂದ 115 ಕೀಲೊ ಮೀಟರ ದೂರದಲ್ಲಿದೆ. ಮತ್ತು ಆಸ್ಸಾಂ ಮಾರ್ಘೇರಿತಾ ರೇಲ್ವೆ ನಿಲ್ದಾಣದಿಂದ ಸುಮಾರು 65 ಕೀಲೊ ಮೀಟರ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಿಬ್ರುಘರ್ ವಿಮಾನ ನಿಲ್ದಾಣ ಮತ್ತು ತಿನಸುಕಿಯ ರೇಲ್ವೆ ನಿಲ್ದಾಣವು ಮಿಯಾವೋ ಪ್ರದೇಶಕ್ಕೆ ಹತ್ತಿರದಲ್ಲಿರುವ ನಿಲ್ದಾಣಗಳಾಗಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Jan,Mon
Return On
25 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jan,Mon
Check Out
25 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jan,Mon
Return On
25 Jan,Tue