Search
 • Follow NativePlanet
Share
ಮುಖಪುಟ » ಸ್ಥಳಗಳು » ಮಿಯಾವೋ » ಆಕರ್ಷಣೆಗಳು » ನಾಮಪೊಂಗ್

ನಾಮಪೊಂಗ್, ಮಿಯಾವೋ

1

ಅರುಣಾಚಲ ಪ್ರದೇಶ ರಾಜ್ಯದ ಮತ್ತೊಂದು ಆಕರ್ಷಕ ಪಟ್ಟಣ ಎಂದರೆ ನಾಮಪಾಂಗ. ಈ ನಗರವು ಚಾಂಗಲಾಂಗ ಜಿಲ್ಲೆಯಲ್ಲಿ ನೆಲೆಗೊಂಡಿದೆ ಮತ್ತು ಪಾಂಗಸೌ ಪಾಸಗೆ ಹತ್ತಿರದಲ್ಲಿದೆ. ಇದು 308 ಮೀಟರ ಎತ್ತರದಲ್ಲಿದೆ. ನಾಮಪಾಂಗವು ಹಿಂದಿನ ದಿನಗಳಲ್ಲಿ ಕುಖ್ಯಾತವಾದ ಲೇಡೊ ರಸ್ತೆಯಲ್ಲಿ ನೆಲೆಸಿತ್ತು. ಇದು ಸ್ಟಿಲವೆಲ್ ರಸ್ತೆ ಎಂದು ಹೆಸರುವಾಸಿ ಆಗಿತ್ತು. ಜನರಲ್ ಜೋಸೆಫ ಸ್ಟಿಲವೆಲ್‍ರ ನೆನೆಪಿಗಾಗಿ ಈ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ಪದೇ ಪದೇ ಸಂಭವಿಸುವ ಭೂಕುಸಿತ ಮತ್ತು ಇಲ್ಲಿನ ಕಠಿಣ ದುಡಿಮೆ ಪರಿಸ್ಥಿತಿಗಳು ಈ ಪ್ರದೇಶಕ್ಕೆ  “ಹೆಲ್ ಪಾಸ್” ಎಂಬ ಅನ್ವರ್ಥಕ ನಾಮವನ್ನು ನೀಡಿವೆ.

ನಾಮಪಾಂಗ ನಗರವು ಭಾರತದ ಪೂರ್ವ ಭಾಗದ ಕೊನೆಯ ಪಟ್ಟಣ ಎಂದು ಹೆಸರುವಾಸಿಯಾಗಿದೆ. ಇದು ಮಯನ್ಮಾರ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಪ್ರತಿ ತಿಂಗಳು ಪಾಂಗಸೌ ಪಾಸ್ ಮೂಲಕ ಜನರು ಮಯನ್ಮಾರ ದೇಶಕ್ಕೆ ಹೋಗುತ್ತಾರೆ. ನಾಮಪಾಂಗದ ಪ್ರಮುಖ ಬುಡಕಟ್ಟು ಎಂದರೆ ತಾಂಗಸಾಸ. ಈ ಬುಡಕಟ್ಟುವಿನಲ್ಲಿ ಇನ್ನು ಅನೇಕ ಉಪ ಬುಡಕಟ್ಟುಗಳಿವೆ. ಉದಾಹರಣೆಗೆ ತಿಖಾಕ್, ಹಾವಿ, ಲಾಂಗಚಾಂಗ್, ಮೊಸ್ಸಾಂಗ, ಜುಗ್ಲಿ, ಕಿಮಸಿಂಗ, ಪೊಂಥೈ, ಸಂಗ್ವಾಲ್ ಇತ್ಯಾದಿ. ಇಲ್ಲಿನ ಬಹುತೇಕ ಬುಡಕಟ್ಟುಗಳು ಮಂಗೋಲಿಯನ ಮೂಲದವುಗಳಾಗಿವೆ ಎಂದು ಹೇಳಲಾಗುತ್ತದೆ. ದಂತ ಕಥೆಗಳ ಪ್ರಕಾರ ತಾಂಗ್ಸಾ ಬುಡಕಟ್ಟು ಮಯನ್ಮಾರದ ಮಸೋಯಿ ಸಿನಾರಪುರಮ ಎಂಬ ಗುಡ್ಡಗಾಡು ಪ್ರದೇಶದಲ್ಲಿ ಮೊದಲು ಹುಟ್ಟಿತು. ನಂತರ ಈ ಬುಡಕಟ್ಟು 18 ನೇ ಶತಮಾನದ ಆರಂಭದಲ್ಲಿ ಈಗಿರುವ ಸ್ಥಳಕ್ಕೆ ಬಂದು ನೆಲೆಸಿತು.

ಆರಂಭದಲ್ಲಿ ಇವರು ಬೋನ ಫೇಥರ ಅನುಯಾಯಿಗಳಾಗಿದ್ದರು. ಇದು ಪ್ರಾಣಿಗಳ ವಿದ್ಯುಕ್ತ ವಧೆಯನ್ನು ಒಳಗೊಂಡಿರುತ್ತದೆ.  ಆದರೆ ಕಾಲಾಂತರದಲ್ಲಿ ತಾಂಗ್ಸಾ ಬುಡಕಟ್ಟಿನವರು ಬುದ್ಧ ಮತ್ತು ಕ್ರಿಶ್ಚಿಯನ ಧರ್ಮಕ್ಕೆ ಮತಾಂತರಗೊಂಡರು. ತಾಂಗ್ಸ ಬುಡಕಟ್ಟಿನ ಜನರು ಪ್ರಮುಖವಾಗಿ  ಕೃಷಿಕರು. ಇದು ಸಾಮರಸ್ಯ ಮತ್ತು ಶ್ರಮಿಕ ಸಮುದಾಯವಾಗಿದೆ. ಇದರ ಹೊರತಾಗಿಯೂ ತಾಂಗ್ಸ ಬುಡಕಟ್ಟಿನ ಜನರು ಕರಕುಶಲ ಕಲೆಗಳು ಮತ್ತು ಪೀಠೋಪಕರಣ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದಿದ್ದಾರೆ. ಇವರು ಅತಿಥಿ ಸತ್ಕಾರಕ್ಕೂ ಸಹ ಹೆಸರುವಾಸಿಯಾಗಿದ್ದಾರೆ. ನಾಮಪಾಂಗದ ಪ್ರಮುಖ ಆಕರ್ಷಣೆ ಎಂದರೆ ಪಾಂಗಸೌ ಪಾಸ ಚಳಿಗಾಲ ಉತ್ಸವ. ಇದನ್ನು ಪ್ರತಿವರ್ಷ ಜನೇವರಿ ತಿಂಗಳ 20,21,22 ನೇ ದಿನಾಂಕದಂದು ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
17 Jan,Mon
Return On
18 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jan,Mon
Check Out
18 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jan,Mon
Return On
18 Jan,Tue