Search
 • Follow NativePlanet
Share
ಮುಖಪುಟ » ಸ್ಥಳಗಳು » ಮಿಯಾವೋ » ಆಕರ್ಷಣೆಗಳು » ಜೈರಾಮಪುರ

ಜೈರಾಮಪುರ, ಮಿಯಾವೋ

1

ಅರುಣಾಚಲ ಪ್ರದೇಶ ರಾಜ್ಯದ ಚಾಂಗಲಾಂಗ್ ಜಿಲ್ಲೆಯಲ್ಲಿ ಜೈರಾಮಪುರ ಎಂಬ ನಗರವಿದೆ.ಈ ನಗರವು ಚಾಂಗಲಾಂಗ ಜಿಲ್ಲೆಯ ಎಡಿಸಿ ಮುಖ್ಯ ಕಚೇರಿಯನ್ನು ಹೊಂದಿದೆ. ಇದು ಇಂಡೋ ಮಯನ್ಮಾರ ಗಡಿ ಮತ್ತು ನಾಮಚಿಕ್ ಜಲಾನಯನ ಪ್ರದೇಶದ ಉದ್ದಕ್ಕೂ  ನೆಲೆಗೊಂಡಿದೆ. ಜೈ ರಾಮಪುರನಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣದ ಮಳೆ ಕಾಡುಗಳು ವ್ಯಾಪಕವಾಗಿ ಕಂಡು ಬರುತ್ತವೆ.

ಜೈರಾಮಪುರ ಗುಡ್ಡಗಾಡು ಪಟ್ಟಣಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ನೈಜ ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸಬಹುದು. ಇಲ್ಲಿ ನೀವು ಹೊಲ್ಲಾಕ್ ಗಿಬ್ಸನ್ ಅನ್ನು ನೆನೆಪಿಸಿಕೊಳ್ಳಬಹುದು. ನಿಮ್ಮ ಕಣ್ಣಿಗೆ ಇಲ್ಲಿ ಹಸಿರು ಸಮೃದ್ಧಿಯ ಹಬ್ಬ ಕಾಣ ಸಿಗುತ್ತದೆ. ಜೈ ರಾಮಪುರ ನಗರದಲ್ಲಿ ಅಪಾರವಾದ ನೈಸರ್ಗಿಕ ಸಂಪನ್ಮೂಲವಿದೆ. ಮತ್ತು ಇಲ್ಲಿನ ಜನರು ತುಂಬಾ ಅತಿಥಿ ಸತ್ಕಾರ ಮನೋಭಾವ ಉಳ್ಳವರು. ಈ ಪುಟ್ಟ ನಗರದ ವಾತಾವರಣವು ತುಂಬಾ ಪ್ರಶಾಂತವಾಗಿದ್ದು, ಇಲ್ಲಿ ಪ್ರವಾಸಿಗರು ಕೆಲಹೊತ್ತು ವಿರಮಿಸಬಹುದು.

2001 ರ ಭಾರತ ಜನಸಂಖ್ಯೆ ಗಣತಿಯ ಪ್ರಕಾರ ಜೈ ರಾಮಪುರದ ಜನಸಂಖ್ಯೆಯು 5918. ಈ ನಗರದ ಸಾಕ್ಷರತೆಯ ಪ್ರಮಾಣವು 71%, ಇದು ರಾಷ್ಟ್ರೀಯ ಸರಾಸರಿ ಪ್ರಮಾಣ 59.9 % ಕ್ಕಿಂತ ಹೆಚ್ಚಾಗಿದೆ. ಜೈರಾಮಪುರದ ಪ್ರಮುಖ ಬುಡಕಟ್ಟು ಜನಾಂಗ ಎಂದರೆ ತಾಂಗಸಾ. ಈ ಬುಡಕಟ್ಟು ಇನ್ನು ಅನೇಕ ಉಪ ಬುಡಕಟ್ಟುಗಳನ್ನು ಒಳಗೊಂಡಿದೆ. ಈ ಜನರು ಕಷ್ಟಪಟ್ಟು ದುಡಿಯುವರಾಗಿದ್ದು, ಮೃದು ಸ್ವಭಾವದವರಾಗಿದ್ದಾರೆ. ಜೈರಾಮಪುರದ ತಾಂಗಸ ಬುಡಕಟ್ಟಿಗೆ ಸೇರಿದ  ಬಹುತೇಕ ಜನರು ಕಾಲಾಂತರದಲ್ಲಿ ಬುದ್ಧ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇವರ ಪ್ರಮುಖ ಉದ್ಯೋಗ ಕೃಷಿಯಾಗಿದೆ.

One Way
Return
From (Departure City)
To (Destination City)
Depart On
03 Dec,Fri
Return On
04 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Fri
Check Out
04 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Fri
Return On
04 Dec,Sat