Search
  • Follow NativePlanet
Share

ತೇಜು ಪ್ರವಾಸೋದ್ಯಮ : ಸುಂದರ ಕಣಿವೆಗಳ ಮತ್ತು ನದಿಗಳ ಪ್ರದೇಶ

8

ತೇಜು ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿರುವ ಸಣ್ಣ ಪಟ್ಟಣ. ಈ ಪಟ್ಟಣವು ಸುಂದರ ಕಣಿವೆಗಳು ಮತ್ತು ನದಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮೂಲನಿವಾಸಿಗಳು ಮಿಶ್ಮಿ ಪಂಗಡದವರು. ಇವರು ಮಹಾಭಾರತದ ಕಾಲದಿಂದ ಇರುವರೆಂದು ಹೇಳಲಾಗುತ್ತದೆ. ಕೃಷ್ಣನ ಮೊದಲ ರಾಣಿ ರುಕ್ಮಿಣಿ ಮಿಶ್ಮಿ ದಮ್ಸೆಲ್‌ಗೆ ಸೇರಿದವಳೆಂದು ಹೇಳಲಾಗುತ್ತದೆ. ಇವರು ತಮ್‌ಲಾಡು ಪೂಜ ಎನ್ನುವ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಪ್ರತಿ ವರ್ಷ 15ನೇ ಫೆಬ್ರವರಿಯಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಲ್ಲ ಪಂಗಡಗಳ ಜನರನ್ನು ಇದರಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತದೆ.

ತೇಜು ಪಟ್ಟಣದಲ್ಲಿ ಕೆಲವು ಮುಖ್ಯ ಪ್ರವಾಸಿ ಆಕರ್ಷಣೆಗಳಿವೆ. ಇವುಗಳಲ್ಲಿ ಮುಖ್ಯವಾದುದು ಪರಶುರಾಮ ಕುಂಡ. ಇದು ದೇಶ ವಿದೇಶಗಳಿಂದ ಸಾವಿರಾರು ಹಿಂದೂ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಪ್ರವಾಸಿಗರು ಈ ಪವಿತ್ರ ನೀರಿನಲ್ಲಿ ಮುಳುಗೇಳುವುದರಿಂದ ತಮ್ಮ ಪಾಪಗಳನ್ನು ಪರಿಹರಿಸಿಕೊಳ್ಳಬಹುದೆಂದು ನಂಬುತ್ತಾರೆ. ಇಲ್ಲಿ ಪ್ರತಿ ವರ್ಷ ಜನವರಿಯಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಗ್ಲೋ ಸರೋವರ, ಹವಾ ಕ್ಯಾಂಪ್ ಮತ್ತು ಬಿಸಿ ನೀರಿನ ಬುಗ್ಗೆ.

ತೇಜುವಿನಲ್ಲಿನ ಜನ

ತೇಜುವಿನಲ್ಲಿ ಮುಖ್ಯವಾಗಿ ಟಿಬೇಟಿಯನ್ನರು ಕಾಣಬಹುದು. ಅವರಲ್ಲಿ ಸುಮಾರು 2000 ಮಂದಿ ಲಾಮಾ ಕ್ಯಾಂಪಿನಲ್ಲಿ ವಾಸವಾಗಿದ್ದಾರೆ. ಇದು ತೇಜು ಮಾರುಕಟ್ಟೆಯಿಂದ 6 ಕಿಮೀ ದೂರದಲ್ಲಿರುವ ಟಿನ್ಡೊಲಾಂಗ್ ಎನ್ನುವಲ್ಲಿ ಇದೆ. ಇಲ್ಲಿ 5 ಕ್ಯಾಂಪುಗಳಿದ್ದು ಪ್ರತಿ ಕ್ಯಾಂಪು ವಿವಿಧ ಟಿಬೇಟ್ ಪ್ರದೇಶಗಳನ್ನು ಪ್ರತಿನಿಧಿಸುತ್ತದೆ. ಇದು ಖಾಮ್ ಕೊನ್ಗ್‌ಪೋ ಮತ್ತು ಪೆಮಾಕೋ ಎಂದು ಹೆಸರಾಗಿದೆ. ಇವರುಗಳು ಇಲ್ಲಿ ತಮ್ಮ ಮೂಲಸ್ಥಾನದಿಂದ ಚೀನಿಯರಿಂದ ಆಕ್ರಮಣಕ್ಕೊಳಗಾಗಿ ಹೊರದೋಡಿಸಿದ ನಂತರ 1960 ರಿಂದ ವಾಸವಾಗಿದ್ದಾರೆ. ಇವರು ಇಲ್ಲಿ ಬೌದ್ಧ ಧಾರ್ಮಿಕ ಕೇಂದ್ರಗಳನ್ನು, ಆರೋಗ್ಯ ಕೇಂದ್ರಗಳನ್ನು, ಶುಶ್ರುಷಾ ಕೇಂದ್ರಗಳನ್ನು ಮತ್ತು ಶಾಲೆಗಳನ್ನು ಸರ್ಕಾರ ಮತ್ತಿತರ ಮೂಲಗಳಿಂದ ಪಡೆದ ಧನಸಹಾಯದಿಂದ ನಿರ್ಮಿಸಿದ್ದಾರೆ.

ತಲುಪುವುದು ಹೇಗೆ?

ತೇಜುವಿಗೆ ರಸ್ತೆ, ರೈಲು ಮತ್ತು ವಾಯು ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿಗೆ ಸಮೀಪದ ರೈಲು ನಿಲ್ದಾಣ ತಿನ್ಸುಕಿಯಾದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಮತ್ತು ಬಸ್ಸುಗಳು ತೇಜುವಿಗೆ ತಲುಪಲು ಲಭ್ಯವಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ಡಿಸಂಬರ್-ಫೆಬ್ರವರಿ ಚಳಿಗಾಲ. ಇದು ತೇಜು ಪ್ರವಾಸಕ್ಕೆ ಸೂಕ್ತ ಸಮಯ.

ತೇಜು ಪ್ರಸಿದ್ಧವಾಗಿದೆ

ತೇಜು ಹವಾಮಾನ

ಉತ್ತಮ ಸಮಯ ತೇಜು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತೇಜು

  • ರಸ್ತೆಯ ಮೂಲಕ
    ತೇಜು ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಟ್ಯಾಕ್ಸಿ ಮತ್ತು ಬಸ್ಸುಗಳು ಇಲ್ಲಿನ ಮುಖ್ಯ ಸಾರಿಗೆ ಸಂಪರ್ಕ ಸಾಧನಗಳು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇಲ್ಲಿಗೆ ಸಮೀಪದ ರೈಲು ನಿಲ್ದಾಣ ತಿನ್ಸುಕಿಯಾದಲ್ಲಿದೆ. ರೈಲಿನಲ್ಲಿ ತೇಜುವಿಗೆ ಪ್ರಯಾಣಿಸುವುದು ಉತ್ತಮ ಆಯ್ಕೆ. ಈ ನಿಲ್ದಾಣವು ಭಾರತದ ಎಲ್ಲ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತೇಜುವಿನಲ್ಲಿ ಸಣ್ಣ ವಿಮಾನನಿಲ್ದಾಣವಿದೆ. ಇಲ್ಲಿಗೆ ಸಮೀಪದ ವಾಣಿಜ್ಯ ಉಪಯೋಗಿ ವಿಮಾನನಿಲ್ದಾಣವು ಮೊಹಬಾರಿಯಲ್ಲಿದೆ. ಇದು ದಿಬ್ರುಗರ್‌ನಲ್ಲಿದೆ. ಇಲ್ಲಿಂದ ಕೊಲ್ಕತ್ತಾ, ಗುವಹಾಟಿ, ಇತ್ನಾಗರ್ ಮತ್ತು ದೆಹಲಿಗಳಿಗೆ ನಿಯಮಿತ ವಿಮಾನ ಸಂಚಾರ ಸೌಲಭ್ಯವಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ತೇಜು ತಲುಪಬಹುದು. ಪ್ರತಿ ಕಿಮೀಗೆ 7 ರೂಗಳನ್ನು ಬಾಡಿಗೆಯಾಗಿ ಪಡೆಯಲಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat