ತೇಜುವಿನಲ್ಲಿ ಸಣ್ಣ ವಿಮಾನನಿಲ್ದಾಣವಿದೆ. ಇಲ್ಲಿಗೆ ಸಮೀಪದ ವಾಣಿಜ್ಯ ಉಪಯೋಗಿ ವಿಮಾನನಿಲ್ದಾಣವು ಮೊಹಬಾರಿಯಲ್ಲಿದೆ. ಇದು ದಿಬ್ರುಗರ್‌ನಲ್ಲಿದೆ. ಇಲ್ಲಿಂದ ಕೊಲ್ಕತ್ತಾ, ಗುವಹಾಟಿ, ಇತ್ನಾಗರ್ ಮತ್ತು ದೆಹಲಿಗಳಿಗೆ ನಿಯಮಿತ ವಿಮಾನ ಸಂಚಾರ ಸೌಲಭ್ಯವಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ತೇಜು ತಲುಪಬಹುದು. ಪ್ರತಿ ಕಿಮೀಗೆ 7 ರೂಗಳನ್ನು ಬಾಡಿಗೆಯಾಗಿ ಪಡೆಯಲಾಗುತ್ತದೆ.