Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಹವಾಮಾನ

ಜೋರ್ಹತ್ ಹವಾಮಾನ

ಜೋರ್ಹತ್ ಗೆ ಚಳಿಗಾಲದಲ್ಲಿ ಭೇಟಿ ನೀಡುವುದು ಉತ್ತಮ. ಈ ವೇಳೆ ಮಳೆ ನಿಂತು ತೇವಾಂಶ ಕಡಿಮೆಯಾಗುತ್ತದೆ ಮತ್ತು ತಾಪಮಾನ ತುಂಬಾ ಹಿತಕರವಾಗಿರುತ್ತದೆ. ಸುತ್ತಮುತ್ತಲಿನ ಕೆಲವು ಪ್ರದೇಶ ಮತ್ತು ಮಜುಲಿಗೆ ಭೇಟಿ ನೀಡಲು ಇದು ಒಳ್ಳೆಯ ಸಮಯ. ಈ ಋತುವಿಗೆ ತೆಳು ಉಣ್ಣೆ ಬಟ್ಟೆಗಳು ಸಾಕು.

ಬೇಸಿಗೆಗಾಲ

ಜೋರ್ಹತ್ ನಲ್ಲಿ ಬೇಸಿಗೆ ತುಂಬಾ ಉಷ್ಣತೆಯಿಂದ ಕೂಡಿರುತ್ತದೆ. ಎಪ್ರಿಲ್ ನಲ್ಲಿ ಆರಂಭವಾಗುವ ಬೇಸಿಗೆ ಕಾಲ ಜೂನ್-ಜುಲೈ ತನಕ ಮುಂದುವರಿಯುತ್ತದೆ. ಮೇ ಮತ್ತು ಜೂನ್ ಋತುವಿನ ಅತ್ಯಂತ ಉಷ್ಣತೆಯ ತಿಂಗಳಾಗಿರುತ್ತದೆ. ಸರಾರಿ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ನಿಂದ 35 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಬೇಸಿಗೆ ಮುಗಿಯುತ್ತಿರುವಂತೆ ಮಾನ್ಸೂನ್ ಆರಂಭವಾಗುತ್ತದೆ.

ಮಳೆಗಾಲ

ಜುಲೈನಲ್ಲಿ ಆರಂಭವಾಗಲಿರುವ ಮಾನ್ಸೂನ್ ವಿಶ್ವದ ಈ ಭಾಗದಲ್ಲಿ ಭಾರೀ ಮಳೆಯನ್ನುಂಟುಮಾಡುತ್ತದೆ. ಮುಂದಿನ ಕೆಲವು ತಿಂಗಳ ಕಾಲ ಮುಂದುವರಿಯುವ ಮಳೆಯು ಸಪ್ಟೆಂಬರ್ ಮತ್ತು ಅಕ್ಟೋಬರ್ ಬಳಿಕ ಸ್ವಲ್ಪ ಕಡಿಮೆಯಾಗುತ್ತದೆ. ಭಾರೀ ಮಳೆಯಿಂದಾಗಿ ಕೆಲವೊಮ್ಮೆ ನಗರದಲ್ಲಿ ಪ್ರವಾಹ ಉಂಟಾಗುತ್ತದೆ. ಈ ಸಮಯದಲ್ಲಿ ಜೋರ್ಹತ್ ಗೆ ಭೇಟಿ ನೀಡುವುದು ಯೋಗ್ಯವಲ್ಲ. ನೈಋತ್ಯ ಮಾನ್ಸೂನ್ ಜೋರ್ಹತ್ ಗೆ ಮಾನ್ಸೂನ್ ನ್ನು ತರುತ್ತದೆ.

ಚಳಿಗಾಲ

ಜೋರ್ಹತ್ ನಲ್ಲಿ ನವಂಬರ್ ನಿಂದ ಫೆಬ್ರವರಿ ತನಕ ಹಿತಕರವಾದ ಚಳಿಗಾಲವಿರುತ್ತದೆ. ತಾಪಮಾನ ಕಡಿಮೆಯಾದರೂ ಇದು ಅಸಹನೀಯ ಮಟ್ಟ ತಲುಪುವುದಿಲ್ಲ. ಜೋರ್ಹತ್ ನಲ್ಲಿ ಚಳಿಗಾಲಕ್ಕೆ ತೆಳು ಉಣ್ಣೆ ಬಟ್ಟೆ ಸಾಕು. ತಾಪಮಾನ 10 ಡಿಗ್ರಿ ಸೆಲ್ಸಿಯಸ್ ನಿಂದ ಗರಿಷ್ಠ 22 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ.