Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ಹವಾಮಾನ

ದಿಗ್ಬೋಯ್ ಹವಾಮಾನ

ದಿಗ್ಬೋಯ್ ಗೆ ಯಾವ ಸಮಯದಲ್ಲಾದರೂ ಹೋಗಬಹುದು. ಮಳೆಗಾಲದಲ್ಲಿ ಹೋದರೆ ಹಸಿರು ತುಂಬಿದ ವಾತಾವರಣವನ್ನು ಕಾಣಬಹುದು. ಚಳಿಗಾಲದಲ್ಲಿ ಹೋದರೆ ಮಂಜು ಮುಸುಕಿದ ಮುಂಜಾನೆಗಳು ಮತ್ತು ತಣ್ಣನೆಯ ರಾತ್ರಿಗಳ ಅನುಭವ ಪಡೆಯಬಹುದು. ಈ ಸಮಯಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

ಮಾರ್ಚ್-ಜೂನ್ ಬೇಸಿಗೆ ಕಾಲ. ಈ ದಿನಗಳಲ್ಲಿ ಉಷ್ಣತೆಯು ಅಧಿಕವಾಗಿದ್ದು ಹೆಚ್ಚು ಧಗೆಯಿರುತ್ತದೆ. ಉಷ್ಣಾಂಶವು 22 ಡಿಗ್ರಿ ಸೆಲ್ಸಿಯಸ್ನಿಂದ 38 ಡಿಗ್ರಿ ಸೆಲ್ಸಿಯಸ್ವರೆಗೆ ಇರಬಹುದು. ಈ ಸಮಯದಲ್ಲಿ ದಿಗ್ಬೋಯ್ಗೆ ಹೋಗುವುದಾದರೆ ಅಗತ್ಯ ಸುರಕ್ಷತ ಕ್ರಮಗಳನ್ನು ಕೈಗೊಳ್ಳುವುದು ಒಳಿತು.

ಮಳೆಗಾಲ

ಜೂನ್ ನಿಂದ ಕೆಲ ತಿಂಗಳವರೆಗೆ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ಸರಿಸುಮಾರು 120 ಇಂಚು ಮಳೆಯಾಗುತ್ತದೆ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿನ ಉಷ್ಣಾಂಶವು 7 ಡಿಗ್ರಿಗಳಿಂದ 20 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಮಂಜು ಮುಸುಕಿದ ಮುಂಜಾನೆಗಳು ಮತ್ತು ಹಿಮವಾವರಿಸಿದ ಮಧ್ಯಹ್ನಾಗಳನ್ನು ಇಲ್ಲಿ ಕಾಣಬಹುದು.