ಅಸ್ಸಾಂ ನ ಇತಿಹಾಸದ ಬಗ್ಗೆ ಆಸಕ್ತಿ ಇಟ್ಟುಕೊಂಡು ಅಸ್ಸಾಂ ನ ಗತ ಕಾಲದ ಬಗ್ಗೆ ತಿಳಿಯಬೇಕಾದರೆ ನೀವು ಅಹೋಮರ ಇತಿಹಾಸವನ್ನು ತಿಳಿಯಬೇಕು ಇದಕ್ಕಾಗಿ ನೀವು ತಾಯಿ ಅಹೋಮ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು. ನಗರದ ಹೃದಯಭಾಗದಲ್ಲಿರುವ ಈ ವಸ್ತು ಸಂಗ್ರಹಾಲಯ ಅಸ್ಸಾಂ ನ ಗತಕಾಲದ ಇತಿಹಾಸವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಇದನ್ನು 1972 ರಲ್ಲಿ ನಿರ್ಮಿಸಲಾಯಿತು. ಇಲ್ಲಿ ಕಲೆ, ವಾಸ್ತು ಶಿಲ್ಪ ಮತ್ತು ಆಭರಣಗಳ ಭಂಡಾರವೇ ಇದೆ. 13 ರಿಂದ 18 ನೆಯ ಶತಮಾನದ ತನಕ ಆಳ್ವಿಕೆ ನಡೆಸಿದ ಅಹೋಮರ ಗತಕಾಲದ ವೈಭವ ಇಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ವಸ್ತು ಸಂಗ್ರಹಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಹಳೆಯ ಕಾಲದ ಹಸ್ತಪ್ರತಿಗಳು, ಬಟ್ಟೆಗಳು ಮತ್ತು ಮರದ ಕಲಾಕೃತಿಗಳು, ಲೋಹಗಳು, ಖಡ್ಗ, ಬಟ್ಟಲುಗಳು, ಬಿದಿರಿನ ಸಲಕರಣೆಗಳು ಪ್ರಮುಖವಾಗಿವೆ. ತಾಯಿ ಅಹೋಮ್ ವಸ್ತು ಸಂಗ್ರಹಾಲಯವನ್ನು ಅಸ್ಸಾಂ ನ ರಾಜ್ಯ ಸರ್ಕಾರ ನೊಡಿಕೊಳ್ಳುತ್ತಿದೆ. ಇದನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ನಿರ್ವಹಿಸಿರುವ ಪಾತ್ರ ಮಹತ್ತರವಾದದ್ದು.