Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಬ್ಸಾಗರ್ » ಹವಾಮಾನ

ಸಿಬ್ಸಾಗರ್ ಹವಾಮಾನ

ಮಳೆಯನ್ನು ಇಷ್ಟಪಡುವ ಮತ್ತು ಧಾರಾಕಾರ ಮಳೆಯನ್ನು ನೋಡಬಯಸುವ ಪ್ರವಾಸಿಗಳು ಮಳೆಗಾಲದ ಅವಧಿಯಲ್ಲಿ ಸಿಬ್ಸಾಗರ್ ಗೆ ಭೇಟಿ ನೀಡಬಹುದಾಗಿದೆ. ಉಳಿದಂತೆ ಉತ್ತರ ಅಸ್ಸಾಂ ನ ಈ ಪ್ರದೇಶಕ್ಕೆ ಭೇಟಿ ನೀಡಲು ಚಳಿಗಾಲದ ಅವಧಿ ಸೂಕ್ತವಾಗಿದೆ. ಈ ಅವಧಿಯಲ್ಲಿ ತಾಪಮಾನ ಕಡಿಮೆಯಾಗಿದ್ದು ವಾತಾವರಣ ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ಸಿಬ್ಸಾಗರ್ ನಲ್ಲಿ ಬೇಸಿಗೆ ಕಾಲವಿರುತ್ತದೆ. ಈ ಅವಧಿಯಲ್ಲಿ ಶುಷ್ಕ ವಾಯುಗುಣಕ್ಕೆ ನಗರವು ಹೆಸರುವಾಸಿಯಾಗಿದೆ. ಹಾಗೂ ನಿಮಗೆ ಈ ಅವಧಿಯ ಪ್ರವಾಸ ತ್ರಾಸದಾಯಕವಾಗಿರಬಹುದು. ಹೀಗಿದ್ದರೂ ಈ ಅವಧಿಯ ಮಳೆ ವಾಯುಗುಣವನ್ನು ತಂಪಾಗಿರಿಸುತ್ತದೆ. ಇಲ್ಲಿನ ಸಾಮಾನ್ಯ ತಾಪಮಾನ 15 ರಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.

ಮಳೆಗಾಲ

ಇಲ್ಲಿ ಧಾರಾಕಾರ ಮಳೆಯಾಗುತ್ತದೆ. ಜುಲೈ ನಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್ ತನಕ ಮುಂದುವರಿಯುತ್ತದೆ. ಇಲ್ಲಿನ ಮಳೆಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹಚ್ಚ ಹಸಿರು ಪ್ರವಾಸಿಗಳಿಗೆ ಇಷ್ಟವಾಗುತ್ತದೆ. ಸಿಬ್ಸಾಗರ್ ಧಾರಾಕಾರ ಮಳೆಯನ್ನು ಕಂಡರೂ ಶುಷ್ಕ ವಾತಾವರಣ ಇರುತ್ತದೆ.

ಚಳಿಗಾಲ

ಡಿಸೆಂಬರ್ ನಲ್ಲಿ ಆರಂಭವಾಗುವ ಮಳೆಗಾಲ ಫೆಬ್ರವರಿಯ ತನಕ ಮುಂದುವರಿಯುತ್ತದೆ. ಈ ಅವಧಿಯ ಸಾಮಾನ್ಯ ತಾಪಮಾನ 7 ರಿಂದ 18 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಅತೀ ಹೆಚ್ಚು ತಂಪಾದ ತಿಂಗಳು ಜನವರಿಯಾಗಿದೆ. ಇಲ್ಲಿ ಚಳಿಗಾಲ ಬಹಳ ತೀವ್ರವಾಗಿರುವುದಿಲ್ಲ ಹಾಗಾಗಿ ಈ ಅವಧಿಯ ಪ್ರವಾಸ ಚೆನ್ನಾಗಿರುತ್ತದೆ.