Search
 • Follow NativePlanet
Share
ಮುಖಪುಟ » ಸ್ಥಳಗಳು» ಮಾಯಾಪುರ್

ಮಾಯಾಪುರ್ - ಆಧ್ಯಾತ್ಮ ನಗರಿ

8

ಮಾಯಾಪುರ ನಗರವು ಗಂಗಾ ನದಿಯು ಜಲಂಗಿ ನದಿಯನ್ನು ಸಂಧಿಸುವಲ್ಲಿ ನೆಲೆಯಾಗಿದೆ. ಇದು, ಶ್ರೀ ಕೃಷ್ಣ ಪರಮಾತ್ಮನ ಅವತಾರವೆಂದು ಪರಿಗಣಿಸಲ್ಪಡುವ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನವೆಂದು ಖ್ಯಾತವಾಗಿದೆ.

ಮಾಯಾಪುರ್ ಅನ್ನು ರಾಜ್ಯದ ಆಧ್ಯಾತ್ಮ ರಾಜಧಾನಿ ಎಂದು ಹೆಸರಿಸಲಾಗಿದೆ. ಈ ಹೆಸರು ಎಲ್ಲಾ ಅರ್ಥದಲ್ಲೂ ಈ ನಗರಕ್ಕೆ ಸರಿಯಾಗಿ ಒಪ್ಪುತ್ತದೆ. ಮಾಯಾಪುರ್ ನಲ್ಲಿರುವ ಇಸ್ಕಾನ್ ದೇವಸ್ಥಾನವು ಹಲವಾರು ವರ್ಷಗಳಿಂದ ಪ್ರಪಂಚದೆಲ್ಲೆಡೆಯಿಂದ ಯಾತ್ರಿಗಳನ್ನು ತನ್ನೆಡೆಗೆ ಸೆಳೆಯುತ್ತಿದೆ.

ಆಧ್ಯಾತ್ಮದಲ್ಲಿ ಆಸಕ್ತಿ ಇರುವ ವ್ಯಕ್ತಿಗಳ ಒಂದು ಒಗ್ಗೂಡಿಕೆಯೇ ಈ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ದಿ ಕೃಷ್ಣ ಕಾನ್ಸಿಯಸ್ (ಇಸ್ಕಾನ್). ಇವರು, ನಗರಗಲ್ಲಿ ಆಚರಿಸುವ ವಿವಿಧ ಹಬ್ಬಗಳಾದ ದುರ್ಗಾ ಪೂಜೆ, ದೀಪಾವಳಿಯಿಂದ ತೊಡಗಿ  ದಸರಾ ಹಾಗೂ ಕಾಳಿ ಪೂಜಾ ವರೆಗಿನ ಸಂದರ್ಭಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಹಬ್ಬಗಳ ಆಚರಣೆಗೆ ಸಹಾಯ ಮಾಡುತ್ತಾ, ಸಕ್ರಿಯವಾಗಿ ಭಾಗವಹಿಸುತ್ತಾರೆ.

ಇಲ್ಲಿ ನಡೆಯುವ ಕಾರ್ಯಕ್ರಮಗಳು ಹಾಗೂ ಇಲ್ಲಿಗೆ ಭೇಟಿ ನೀಡುವ ತೀರ್ಥಯಾತ್ರಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡರೆ, ಇಸ್ಕಾನ್ ಅವರು ಮಾಯಾಪುರ್ ದ ಶಾಖೆಯನ್ನು ತಮ್ಮ ಪ್ರಧಾನ ಕಾರ್ಯಾಲಯವಾಗಿ ಆಯ್ಕೆಮಾಡಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ವಿವಿಧತೆಯಲ್ಲಿ ಏಕತೆ - ಮಾಯಾಪುರದ ಸುತ್ತಲಿನ ಆಕರ್ಷಣೆಗಳು

ಹಿಂದೂ ಹಾಗೂ ಮುಸ್ಲೀಮರ ನಡುವೆ ಇದ್ದಂತಹ ಒಂದು ಕುತೂಹಲಕರ ಆದರೆ ಈಗ ತಣ್ಣಗಾಗಿರುವ ಒಂದು ಸಂಘರ್ಷವೆಂದರೆ, ಈ ನಗರವು ಮೊದಲು ಮಿಯಾಪುರ್ ಎಂದು ಕರೆಯಲ್ಪಡುತ್ತಿತ್ತು ಎಂಬುದಾಗಿತ್ತು. ಮಾಯಾಪುರ್ ನ ಐತಿಹಾಸಿಕ ಕೇಂದ್ರದಲ್ಲಿ ಈಗಲೂ ಮುಸ್ಲೀಮರು ಜನಸಂಖ್ಯೆ ಹೆಚ್ಚಾಗಿದ್ದು, ಅವರು ಹಿಂದೂ ಪ್ರಧಾನ ಊರಿನಲ್ಲಿ, ಹಿಂದೂಗಳ ಜೊತೆ ಸಾಮರಸ್ಯದಿಂದ ಜೀವನ ನಡೆಸುವ ಪರಿ ನಿಜಕ್ಕೂ ಪ್ರಶಂಸನೀಯ. ಇಸ್ಕಾನ್ ನ ಸ್ಥಾಪಕರಾದ ಶ್ರೀಲ ಪ್ರಭುಪಾದ ಅವರ ಸ್ಮರಣೆಗಾಗಿ ಕಟ್ಟಿಸಿರುವ ಶ್ರೀಲ ಪ್ರಭುಪಾದ ಸಮಾಧಿಗೆ ಭೇಟಿ ನೀಡಲೇ ಬೇಕು.

ಮಾಯಾಪುರ್ ನ ಅಡುಗೆ ಪದ್ಧತಿ

ಮಾಯಾಪುರ್ ನ ಆಹಾರದ ಬಗ್ಗೆ ಹೇಳಲೇ ಬೇಕು. ಇದು ಸಸ್ಯಾಹಾರಿಗಳ ಸ್ವರ್ಗವಾಗಿದ್ದು, ಇಲ್ಲಿನ ಉಪಹಾರ ಗೃಹ ಹಾಗೋ ಸ್ಥಳೀಯ ಚಿಕ್ಕ ಹೋಟೆಲ್ ಗಳಲ್ಲಿ ವಿವಿಧ ರುಚಿಕರ ಬಂಗಾಳಿ ಆಹಾರವನ್ನು ಒದಗಿಸುತ್ತವೆ. ಇಲ್ಲಿ ಬೀದಿ ಬದಿಯ ವ್ಯಾಪಾರ ಜೋರಾಗಿದ್ದು, ಚಿಲ್ಲರೆ ವ್ಯಾಪಾರ ಅಥವಾ  ಸಾಂಪ್ರದಾಯಿಕ ವಸ್ತುಗಳ ಶಾಪಿಂಗ್ ಇಲ್ಲಿ ನಡೆಸಬಹುದಾಗಿದೆ.

ಮಾಯಾಪುರ್ ಗೆ ಕೋಲ್ಕತ್ತಾದಿಂದ ಕೇವಲ ಎರಡುವರೆ ಘಂಟೆಯಲ್ಲಿ ತಲುಪಬಹುದಾಗಿದ್ದು, ಇಲ್ಲಿ ಒಂದು ಅಥವಾ ಎರಡು ದಿನಗಳನ್ನು ಆರಾಮವಾಗಿ ಕಳೆಯಬಹುದು. ಇದು ಪಶ್ಚಿಮ ಬಂಗಾಳದ ಇತರ ನಗರ ಹಾಗೂ ಪಟ್ಟಣಗಳಿಂದ ಹತ್ತಿರದಲ್ಲಿದ್ದು, ಹೂಗ್ಲಿಗೂ ಹತ್ತಿರದಲ್ಲಿದೆ. ಹುಳರ್ ಘಾಟ್ ನಿಂದ ಫೆರ್ರಿ ಮೂಲಕವೂ ಮಾಯಾಪುರ್ ಗೆ ತಲುಪಬಹುದಾಗಿದೆ.

ಮಾಯಾಪುರ್ ಪ್ರಸಿದ್ಧವಾಗಿದೆ

ಮಾಯಾಪುರ್ ಹವಾಮಾನ

ಮಾಯಾಪುರ್
34oC / 93oF
 • Haze
 • Wind: SW 11 km/h

ಉತ್ತಮ ಸಮಯ ಮಾಯಾಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮಾಯಾಪುರ್

 • ರಸ್ತೆಯ ಮೂಲಕ
  ರಾಜ್ಯ ಹೆದ್ದಾರಿ 6, ಮಯಾಪುರ್ ಹಾಗೂ ಕೋಲ್ಕತ್ತಾ ದ ನಡುವಿನ ಸಂಪರ್ಕ ರಸ್ತೆಯಾಗಿದ್ದು, ಈ ನಗರಗಳ ನಡುವಿನ ಅಂತರ ಸುಮಾರು 144 ಕಿಲೋಮೀಟರುಗಳು. ಕೋಲ್ಕತ್ತಾ ದಿಂದ ಮಾಯಾಪುರ್ ಗೆ ನಿಯಮಿತ ಬಸ್ ಸೌಕರ್ಯವೂ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹೌರಾ ದಲ್ಲಿರುವ ಕೋಲ್ಕತ್ತಾ ರೈಲ್ವೆ ಸ್ಟೇಷನ್ 144 ಕಿಲೋಮೀಟರು ದೂರದಲ್ಲಿದ್ದು, ಇದು ಮಾಯಾಪುರ್ ನ್ನು ರಾಜ್ಯ ಹಾಗೂ ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮಾಯಾಪುರ್ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣವನ್ನು ಅವಲಂಬಿಸಿದ್ದು, ಇಲ್ಲಿಂದ ದೇಶ ಹಾಗೂ ವಿದೇಶಗಳಿಗೆ ವಿಮಾನ ಸೌಕರ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jun,Wed
Return On
20 Jun,Thu
 • Today
  Mayapur
  34 OC
  93 OF
  UV Index: 9
  Haze
 • Tomorrow
  Mayapur
  30 OC
  86 OF
  UV Index: 9
  Sunny
 • Day After
  Mayapur
  30 OC
  86 OF
  UV Index: 9
  Sunny