Search
 • Follow NativePlanet
Share
ಮುಖಪುಟ » ಸ್ಥಳಗಳು» ಮುರ್ಷಿದಾಬಾದ್

ಮುರ್ಷಿದಾಬಾದ್ - ನವಾಬರ ಆಸನ / ಆಸ್ಥಾನ

9

ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ನದಿ ಗಂಗಾ ನದಿಯ ಉಪನದಿಯಾದ ಭಾಗೀರಥಿ ನದಿಯ  ತೀರದಲ್ಲಿದೆ.

ಇದು ಪ್ರಸಿದ್ಧವಾದ ಹಜರಾದೊರೈ ಅರಮನೆಗೆ ಹೆಸರುವಾಸಿಯಾಗಿದೆ ಮತ್ತು ಹುಂಗ್ಲಿ ನದಿಗೆ ಹತ್ತಿರದಲ್ಲಿದೆ. ಮುರ್ಷಿದಾಬಾದ್, ರಾಜ್ಯದ ರಾಜಧಾನಿ ಕೋಲ್ಕತಾಗೆ ಹತ್ತಿರದಲ್ಲಿರುವುದರಿಂದ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲವು ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ .

ಮುರ್ಷಿದಾಬಾದ್ ನಲ್ಲಿ ಶಾಪಿಂಗ್ / ಖರೀದಿ

ಕರಕುಶಲ ಮತ್ತು ಕೃಷಿ ಕೈಗಾರಿಕೆಗಳಿಗೆ ಮುರ್ಷಿದಾಬಾದ್  ಬಹಳ ಹೆಸರುವಾಸಿಯಾಗಿದ್ದು, ನಗರದ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬಹುದು.  ಪ್ರಸಿದ್ಧ ಟೆರ್ರಕೋಟಾ (ಮಣ್ಣಿನ) ತಯಾರಿಕೆಗಳು ಆಶ್ಚರ್ಯಕರ ಉತ್ತಮ ಬೆಲೆಯಲ್ಲಿ ಲಭ್ಯವಿವೆ. ಸಿಲ್ಕ್ ಉತ್ಪನ್ನ ಮುರ್ಷಿದಾಬಾದ್ ಪ್ರದೇಶದ ಮತ್ತೊಂದು ಪ್ರಸಿದ್ಧ ಉತ್ಪನ್ನವಾಗಿದೆ. ಮತ್ತು ಭಾರತೀಯ ಸೀರೆ ಮತ್ತು ಶಿರೋವಸ್ತ್ರಗಳು ಇಲ್ಲಿ ತಯಾರಿಸಲಾಗುತ್ತದೆ.

ಮುರ್ಷಿದಾಬಾದ್ ಸುತ್ತಲಿನ ಪ್ರವಾಸಿ ತಾಣಗಳು

ನವಾಬರ ಕೋಟೆ ಮತ್ತು ಒಂದು ಸಾವಿರ ಬಾಗಿಲುಳ್ಳ ಅರಮನೆಯು ಪರಂಪರೆಯ ಸ್ಥಳವಾಗಿದ್ದು ತಮ್ಮದೇ ರೀತಿಯಲ್ಲಿ ಸ್ಪೂರ್ತಿದಾಯಕ ವಿಸ್ಮಯವನ್ನುಂಟುಮಾಡುತ್ತವೆ! ಒಂದು ಸಾವಿರ ಬಾಗಿಲಿನ ಅರಮನೆಯನ್ನು ಜನಪ್ರಿಯವಾಗಿ ಹಝಾರ್ ದುರೈ ಅರಮನೆ ಎಂದು ಕರೆಯುತ್ತಾರೆ. ಈ ನಗರ ನವಾಬರ ಸ್ಥಾನವಾಗಿದೆ.

ಆಹಾರ ಮತ್ತು ಉತ್ಸವಗಳು

ಮುರ್ಷಿದಾಬಾದ್ ಗೆ ಭೇಟಿ ನೀಡಿದಾಗ ಇಲ್ಲಿನ ಸ್ಥಳೀಯ ಬಂಗಾಳಿ ತಿನಿಸುಗಳನ್ನು ತಿನ್ನಲು ಮರೆಯಬೇಡಿ. ನೀವು ಉತ್ತಮ ಆಹಾರ ವನ್ನು ತಿನ್ನಲು ಬಯಸಿದರೆ ರಸ್ತೆಯ ಬದಿಯಲ್ಲಿನ ಆಹಾರಗಳು ಮತ್ತು ಸಾಗರದ ತಾಜಾ ಮೀನು ಮೊದಲಾದವುಗಳನ್ನೂ ಸಹ ಸವಿಯಬಹುದು.

ನಗರವನ್ನು ಸುತ್ತಲು ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಬಹುದು. ಮತ್ತು ಮಹಾರಾಜರ ಕಾಲವನ್ನು ನೆನಪಿಸುವ,  ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ಸೈಕಲ್ ರಿಕ್ಷಾಗಳು ಮತ್ತು ಪ್ರಸಿದ್ಧ ಕುದುರೆ ಗಾಡಿಗಳು ಸಹ ಪ್ರಯಾಣಕ್ಕೆ ಲಭ್ಯ. ಪ್ರತಿಯೊಂದು ಪಾರಂಪರಿಕ ಕಟ್ಟಡಗಳು ವಸಾಹತು ಮತ್ತು ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಹೊಂದಿದ್ದು ಇವುಗಳ ಮೂಲರೂಪ ಬಿಳಿಯ ವರ್ಣ. ಮುರ್ಷಿದಾಬಾದ್ ಕುಟುಂಬಗಳು, ಜೋಡಿಗಳು ಮತ್ತು ಒಬ್ಬಂಟಿಯಾಗಿ ಬರುವವರನ್ನೂ ಸ್ವಾಗತಿಸುತ್ತದೆ.

ಮುರ್ಷಿದಾಬಾದ್ ತಲುಪಲು ಉತ್ತಮ ಸಮಯ

ನಗರದಲ್ಲಿ ಆಚರಿಸುವ ದುರ್ಗಾ ಪೂಜೆ, ದೀಪಾವಳಿ ಮತ್ತು ದಸರಾ ಹಬ್ಬಗಳೊಂದಿಗೆ ಉತ್ಸಾಹದಲ್ಲಿ ಭಾಗವಹಿಸಲು ಈ ಸಮಯದಲ್ಲಿಯೇ ಭೇಟಿ ನೀಡಬಹುದು. ಇಲ್ಲಿ ಆಚರಿಸಲಾಗುವ ಇತರ ಹಬ್ಬಗಳೆಂದರೆ ಹೋಳಿ ಮತ್ತು ರಾಮ ನವಮಿ ಮೊದಲಾದವು. ಈ ಸಣ್ಣ ನಗರದಲ್ಲಿ ಶಾಪಿಂಗ್, ಮತ್ತು ಆಹಾರ ಅತ್ಯುತ್ತಮ  ಸಮಯವನ್ನು ನಿಮ್ಮದಾಗಿಸುತ್ತದೆ.

ಮುರ್ಷಿದಾಬಾದ್ ತಲುಪುವುದು ಹೇಗೆ?

ಮುರ್ಷಿದಾಬಾದ್, ರಸ್ತೆ, ರೈಲ್ವೆ, ವಿಮಾನ ಮಾರ್ಗದ ಮೂಲಕ ತಲುಪಬಹುದು.

ಮುರ್ಷಿದಾಬಾದ್ ಪ್ರಸಿದ್ಧವಾಗಿದೆ

ಮುರ್ಷಿದಾಬಾದ್ ಹವಾಮಾನ

ಮುರ್ಷಿದಾಬಾದ್
32oC / 89oF
 • Partly cloudy
 • Wind: SW 13 km/h

ಉತ್ತಮ ಸಮಯ ಮುರ್ಷಿದಾಬಾದ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮುರ್ಷಿದಾಬಾದ್

 • ರಸ್ತೆಯ ಮೂಲಕ
  ಕೋಲ್ಕತಾದಿಂದ ನಿಯಮಿತ ಬಸ್ ಸೇವೆಗಳು ಪ್ರತಿದಿನವು ಮುರ್ಷಿದಾಬಾದ್ ಗೆ ಲಭ್ಯವಿದೆ. ಹಲವು ಸಾರಿಗೆ ವ್ಯವಸ್ಥೆಗಳು ಪ್ರತಿದಿನ ಲಭ್ಯವಿದೆ. ಮುರ್ಷಿದಾಬಾದ್, ಕೋಲ್ಕತಾದಿಂದ ರಸ್ತೆಯ ಮೂಲಕ 4 ಗಂಟೆಗಳು 15 ನಿಮಿಷಗಳಷ್ಟು ಅವಧಿಯಲ್ಲಿ ತಲುಪಬಹುದು.ಮತ್ತು ಕೋಲ್ಕತಾದಿಂದ ಸುಮಾರು 235 ಕಿಲೋಮೀಟರುಗಳಷ್ಟು ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ದೇಶದ ಇತರ ಭಾಗಗಳಿಗೆ ಮತ್ತು ನೆರೆಯ ರಾಜ್ಯ ಬಾಂಗ್ಲಾದೇಶ ಸಂಪರ್ಕ ಕಲ್ಪಿಸುವ ಕೋಲ್ಕತಾದಲ್ಲಿನ ಹೌರಾ ರೈಲು ನಿಲ್ದಾಣ ನೇರವಾಗಿ ಮುರ್ಷಿದಾಬಾದ್ ಗೆ ಸಂಪರ್ಕ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೋಲ್ಕತಾ ಅಂತರ ರಾಷ್ಟ್ರೀಯ ವಿಮಾನ ಮುರ್ಷಿದಾಬಾದ್ ನಿಂದ ಸುಮಾರು 194 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  Murshidabad
  32 OC
  89 OF
  UV Index: 9
  Partly cloudy
 • Tomorrow
  Murshidabad
  28 OC
  82 OF
  UV Index: 9
  Sunny
 • Day After
  Murshidabad
  28 OC
  82 OF
  UV Index: 9
  Partly cloudy