Search
 • Follow NativePlanet
Share
ಮುಖಪುಟ » ಸ್ಥಳಗಳು» ತಾಜಪುರ್

ತಾಜಪುರ್ - ಸಾಗರದ ತೀರದಲ್ಲಿ

4

ಪ್ರತಿಯೊಬ್ಬರು ಒಂದು ಪ್ರಶಾಂತತೆಯ ಸ್ಥಳದಲ್ಲಿ ಇದ್ದು, ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ತಮ್ಮ ವೈಯಕ್ತಿಕ ಆನಂದ ಪಡೆಯಲು ಬಯಸುತ್ತಾರೆ. ಅದರಲ್ಲಿ ಎಲ್ಲರಿಗೂ ಕಡಲ ತೀರದ ಪ್ರಶಾಂತತೆ ಎಂದರೆ ತುಂಬಾ ಇಷ್ಟ. ತಾಜಪುರ್ ಇಂತಹ ಪ್ರಾಕೃತಿಕ ಸೌಂದರ್ಯಕ್ಕೆ ಹೇಳಿ ಮಾಡಿಸಿದ ಸ್ಥಳ. ಇದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇದೆ. ಮತ್ತು ರಾಜ್ಯದ ರಾಜಧಾನಿ ಕೋಲ್ಕತ್ತಾದಿಂದ ಕೆಲವೇ ಅಂತರದ ದೂರವನ್ನು ಹೊಂದಿದೆ.

ಕಡಲ ತೀರ

ಈ ಕಡಲ ತೀರದ ಕುರಿತು ಅನೇಕ ವಿಲಕ್ಷಣ ಸತ್ಯಗಳಿವೆ. ಇದು ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಸಾಮಾನ್ಯವಾಗಿ ಎಲ್ಲ ಕಡಲ ತೀರಗಳು ಅರ್ಧ ಚಂದ್ರಾಕಾರದ ರಚನೆಯನ್ನು ಹೊಂದಿದ್ದರೆ, ತಾಜಪುರ್ ದ ಕಡಲ ತೀರವು ತಲೆಕೆಳಗಾದ ಅರ್ಧ ಚಂದ್ರಾಕಾರದ ರಚನೆಯನ್ನು ಹೊಂದಿದೆ. ಇದು ಪ್ರವಾಸಿಗರಿಗೆ ಸಾಗರದ ಮತ್ತು ದಿಗಂತದ ಅದ್ಭುತ ನೋಟವನ್ನು ಒದಗಿಸುತ್ತದೆ.

ಈ ಕಡಲ ತೀರದ ಸುತ್ತಲೂ ಅರಣ್ಯ ಇದ್ದು, ಇದರ ಮೆರುಗು ಹೆಚ್ಚಿಸಿದೆ. ಇಲ್ಲಿನ ಕಡಲ ತೀರದ ಬಣ್ಣವು ಕಡಗೆಂಪುವಿನಿಂದ ಕೂಡಿದೆ. ಇದಕ್ಕೆ ಕಾರಣ ಈ ಕಡಲ ತೀರದ ಮರಳಿನಲ್ಲಿ ಸಾವಿರಾರು ಕಡುಗೆಂಪು ಏಡಿಗಳು ವಾಸವಾಗಿವೆ. ಈ ಕಡಲ ತೀರದಿಂದ ಒಂದು ಕೀಲೊ ಮೀಟರ ದೂರದಲ್ಲಿ ಒಂದು ಸುಂದರವಾದ ಲಗೂನ ಇದೆ. ಇದು ಈ ಪ್ರದೇಶದ ಮೀನುಗಾರರಿಗೆ ಬಹು ಮಹತ್ವದ್ದಾಗಿದೆ.

ಪ್ರಾಕೃತಿಕ ಶಿಬಿರ

ತಾಜಪುರ್ ದ ಪ್ರಾಕೃತಿಕ ಶಿಬಿರವು ನಿಜವಾಗಿಯೂ ಅದ್ಭುತವಾಗಿರುತ್ತದೆ. ಇದು ಪ್ರವಾಸಿಗರಿಗೆ ದೊಡ್ಡ ತೋಟಗಳನ್ನು ನೋಡುವ ಮತ್ತು ಕಡಲ ತೀರದಲ್ಲಿ ವಿಹರಿಸುವ, ರುಚಿಕರವಾದ ತಿಂಡಿ ಮತ್ತು ಪಾನೀಯಗಳನ್ನು ಸೇವಿಸುವ ಅದ್ಭುತ ಅವಕಾಶವನ್ನು ಮತ್ತು ಅವಿಸ್ಮರಣೀಯ ಅನುಭವವನ್ನು ಒದಗಿಸುತ್ತದೆ. ಇದು ಅಪಾರ ಸಸ್ಯವರ್ಗ ಮತ್ತು ಯೂಕಲಿಪ್ಟಸ್ ಗಳಿಂದ ಸುತ್ತುವರೆದಿದೆ. ಇಲ್ಲಿ ಬರಿಗಾಲಿನ ನಡಿಗೆಯು ಅದ್ಭುತ ಅನುಭವವನ್ನು ನೀಡುತ್ತದೆ. ಮನಸ್ಸಿನ ಆನಂದ ಮತ್ತು ವಿಕಾಸಕ್ಕೆ ಇದು ಸಹಕಾರಿ ಆಗುತ್ತದೆ.

ಸಾಹಸ ಕ್ರೀಡೆಗಳು

ಪ್ರವಾಸಿಗರು ತಾಜಿಪುರ್ ಕಡಲ ತೀರದಲ್ಲಿ ಅನೇಕ ಸಾಹಸಮಯ ಕ್ರೀಡೆಗಳನ್ನು ಆಡಿ ಆನಂದವನ್ನು ಪಡೆಯಬಹುದು.ಉದಾ: ಪಾರಾಗ್ಲಿಡಿಂಗ್, ರಿವರ್ ರ್ಯಾಫ್ಟಿಂಗ್, ಬನಾನಾ ರೈಡ್ ಮತ್ತು ರಾಕ್ ಕ್ಲೈಬಿಂಗ್ ಇತ್ಯಾದಿ. ಇದು ಟೌಟ್ಸಗಳಿಂದ ತುಂಬಿ ಹೋಗಿದ್ದು, ಅವರು ನಿಮ್ಮನ್ನು ಸಂಪರ್ಕಿಸಬಹುದು.

ತಾಜಪುರ್: ತಲುಪುವುದು ಹೇಗೆ?

ತಾಜಪುರ್ ಉತ್ತಮ ರಸ್ತೆ, ರೇಲ್ವೇ ಮತ್ತು ವೈಮಾನಿಕ ಸೌಲಭ್ಯವನ್ನು ಹೊಂದಿದೆ.

ತಾಜಪುರ್ ಪ್ರಸಿದ್ಧವಾಗಿದೆ

ತಾಜಪುರ್ ಹವಾಮಾನ

ತಾಜಪುರ್
26oC / 80oF
 • Partly cloudy
 • Wind: E 16 km/h

ಉತ್ತಮ ಸಮಯ ತಾಜಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತಾಜಪುರ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 6 ಇದು ತಾಜಪುರ್ ವನ್ನು ರಾಜ್ಯ ರಾಜಧಾನಿಯೊಂದಿಗೆ ಜೋಡಿಸುತ್ತದೆ. ಇದು ರಾಜ್ಯದ ರಾಜಧಾನಿಯಿಂದ ಸುಮಾರು 104 ಕೀಲೊ ಮೀಟರ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೋಲ್ಕತ್ತ ರೇಲ್ವೆ ನಿಲ್ದಾಣವು ( ಹೌರಾ) ತಾಜಪುರ್ ದಿಂದ 104 ಕೀಲೊ ಮೀಟರ ದೂರದಲ್ಲಿದೆ. ಇದು ರಾಜ್ಯ ಮತ್ತು ರಾಷ್ಟ್ರದ ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತಾಜಪುರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ಧಾಣ ಎಂದರೆ ಕೋಲ್ಕತ್ತಾದ ನೇತಾಜಿ ಸುಭಾಷ ಚಂದ್ರ ಬೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಇತರ ರಾಜ್ಯ ಮತ್ತು ರಾಷ್ಟ್ರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Tajpur
  26 OC
  80 OF
  UV Index: 8
  Partly cloudy
 • Tomorrow
  Tajpur
  25 OC
  77 OF
  UV Index: 8
  Partly cloudy
 • Day After
  Tajpur
  26 OC
  79 OF
  UV Index: 8
  Partly cloudy