Search
  • Follow NativePlanet
Share
ಮುಖಪುಟ » ಸ್ಥಳಗಳು» ಮುಕುಟಮಣಿಪುರ

ಮುಕುಟಮಣಿಪುರ - ಪ್ರಶಾಂತತೆಯ ನಗರ

7

ಮುಕುಟಮಣಿಪುರ ನಗರವು ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಪ್ರದೇಶದಲ್ಲಿ ಇದೆ. ಇದು ಮುಕುಟಮಣಿಪುರ ಆಣೆಕಟ್ಟಿಗೆ ಪ್ರಸಿದ್ಧವಾಗಿದೆ. ಇದು ದೊಡ್ಡ ನೀರಿನ ಜಲಾಶಯವಾಗಿದ್ದು , ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು 50 ರ ಮಧ್ಯಭಾಗದಲ್ಲಿ ಇದನ್ನು ನಿರ್ಮಿಸಲಾಯಿತು. ಇದು 8000 ಚದುರ ಕೀಲೊ ಮೀಟರವದವರೆಗೂ ವ್ಯಾಪ್ತಿಯನ್ನು ಹೊಂದಿದೆ.

ಒಂದು ಪ್ರಸಿದ್ಧ ಭೂ ಆಣೆಕಟ್ಟು

ಮುಕುಟಮಣಿಪುರ ನಗರದ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಎಂದರೆ ಮುಕುಟಮಣಿಪುರ ಆಣೆಕಟ್ಟೆ. ಇದೇ ಇಲ್ಲಿನ ಪ್ರವಾಸೋದ್ಯಮದ ಯಶಸ್ವಿ ಕಾರಣ ಎಂದರೆ ತಪ್ಪಿಲ್ಲ. ಇದು ಪ್ರವಾಸಿಗರಿಗೆ ಒಂದು ರುದ್ರ ರಮಣೀಯ ಮನಮೋಹಕ ನೋಟವನ್ನು ಒದಗಿಸುತ್ತದೆ. ಇದೊಂದು ವಿಹಾರ ತಾಣವಾಗಿದ್ದು ಇಲ್ಲಿ ಯಾವಾಗಲೂ ಜನಜಂಗುಳಿಯೇ ನೆರೆದಿರುತ್ತದೆ. ಮುಕುಟ ಮಣಿಪುರವು ಬಂಗಾಳಿ ತಿಂಡಿಗಳಿಗೂ ಹೆಚ್ಚು ಪ್ರಸಿದ್ಧಯನ್ನು ಪಡೆದಿದ್ದು, ಇಲ್ಲಿ ಬಂಗಾಳಿ ತಿಂಡಿಗಳ ಹಲವಾರು ಉಪಹಾರ ಗೃಹಗಳಿವೆ.

ವಸತಿ ಸೌಲಭ್ಯ

ಇಲ್ಲಿ ಸರ್ಕಾರದ ಅತಿಥಿ ಗೃಹಗಳವೆ. ಇದರ ಹೊರತಾಗಿ ಈ ನಗರದಲ್ಲಿ ಯುಥ್ ಹಾಸ್ಟೆಲ್, ಲಾಡ್ಜಗಳು ಮತ್ತು ಹೊಟೇಲುಗಳು ಇವೆ. ಸ್ಥಳೀಯ ಸಾರಿಗೆಗಾಗಿ ಪ್ರವಾಸಿಗರು ಅಟೋ ರಿಕ್ಷಾ ಮತ್ತು ಸೈಕಲ್ ರಿಕ್ಷಾಗಳನ್ನು ಬಳಸಬಹುದು.

ಮುಕುಟಮಣಿಪುರ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಬಂಗೋಪಾಲಪುರ ಮೀಸಲು ಅರಣ್ಯವು ಅನೇಕ ಪಕ್ಷಿ ಮತ್ತು ಪ್ರಾಣಿ ಪ್ರಭೇಧಗಳಿಗೆ ಒಂದು ಆಶ್ರಯತಾಣವಾಗಿದೆ. ಇದು ಆಣೆಕಟ್ಟಿನಿಂದ ಕೇವಲ 2 ಕೀಲೊ ಮೀಟರ ದೂರದಲ್ಲಿದೆ. ಝಿಲಿಮಿಲಿ ನಗರವು ಮುಕುಟಮಣಿಪುರ ನಗರಕ್ಕೆ ಹತ್ತಿರದಲ್ಲಿದೆ. ಇಲ್ಲಿಗೆ ವರ್ಷಕ್ಕೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆಯು 100,000 ಮೀರುತ್ತದೆ ಎಂದರೆ ಆಶ್ಚರ್ಯದ ಸಂಗತಿಯಲ್ಲವೇ? ಮುಕುಟಪುರದ ಆಣೆಕಟ್ಟಿನ ತೀರದಲ್ಲಿಯೇ ಒಂದು ರೇಸ್ಟೊರೆಂಟ ಇದೆ. ಈ ಆಣೆಕಟ್ಟು ನೋಡಲು ವಿಸ್ಮಯತೆಯಿಂದ ಕೂಡಿದ್ದು, ಇಲ್ಲಿ ಪ್ರತಿದಿನ ಜನಜಂಗುಳಿಯೇ ನೆರೆದಿರುತ್ತದೆ.

ಮುಕುಟಮಣಿಪುರ ಪ್ರಸಿದ್ಧವಾಗಿದೆ

ಮುಕುಟಮಣಿಪುರ ಹವಾಮಾನ

ಉತ್ತಮ ಸಮಯ ಮುಕುಟಮಣಿಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮುಕುಟಮಣಿಪುರ

  • ರಸ್ತೆಯ ಮೂಲಕ
    ಮುಕುಟ ಮಣಿಪುರವು ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು, ಕೋಲ್ಕತ್ತಾದ ಜೊತೆಗೆ ರಾಜ್ಯ ಹೆದ್ದಾರಿ 2 ರಮೂಲಕ ಸಂಪರ್ಕವನ್ನು ಸಾಧಿಸುತ್ತದೆ. ಮತ್ತು ಇದು ರಾಜಧಾನಿಯಿಂದ 209 ಕೀಲೊ ಮೀಟರ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮುಕುಟಮಣಿಪುರ ನಗರವು ತನ್ನ ಸ್ವಂತ ರೇಲ್ವೆ ಸ್ಟೇಷನ ಹೊಂದಿದ್ದು ಕೋಲ್ಕತ್ತಾ ಮತ್ತು ರಾಜ್ಯದ ಇತರ ನಗರಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕ ಸಂಬಂಧವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮುಕುಟಮಣಿಪುರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ಕೋಲ್ಕತ್ತಾದ ನೇತಾಜಿ ಸುಭಾಷಚಂದ್ರ ಬೋಸ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ. ಇದು ಭಾರತದ ಪ್ರಮುಖ ನಗರಗಳು ಮತ್ತು ಇತರ ವಿದೇಶಗಳೊಂದಿಗೆ ಉತ್ತಮ ವೈಮಾನಿಕ ಸಂಭಂಧವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed