Search
  • Follow NativePlanet
Share
ಮುಖಪುಟ » ಸ್ಥಳಗಳು» ದುರ್ಗಾಪುರ

ದುರ್ಗಾಪುರ : ಪಶ್ಚಿಮ ಬಂಗಾಳದ ಉಕ್ಕಿನ ನಗರ

24

ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಉಕ್ಕಿನ ನಗರವನ್ನು ಸೃಷ್ಟಿಸಿದರು. ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸಲು ಒಂದು ದೈತ್ಯ ಕೈಗಾರಿಕಾ ಪಟ್ಟಣವಾಗಿ, ರಾಜ್ಯದ ಅಭಿವೃದ್ದಿಗೆ ದಾರಿಯಾಗಿ ದುರ್ಗಾಪುರವನ್ನು ಹುಟ್ಟುಹಾಕಿದರು.

ಇತ್ತೀಚಿನ ವರ್ಷಗಳಲ್ಲಿ ದುರ್ಗಾಪುರ ಉಕ್ಕಿನ ಉತ್ಪಾದನಾ ಕೇಂದ್ರದಿಂದ ಒಂದು ಅಭಿವೃದ್ಧಿ ಹೊಂದಿದ ನಗರವಾಗಿ ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಶ್ಚಿಮ ಬಂಗಾಳ ರಾಜ್ಯದ ಮಧ್ಯ ಭಾಗದಲ್ಲಿರುವ ದುರ್ಗಾಪುರ್ ಪ್ರವಾಸೋದ್ಯಮ ವ್ಯಾಪಾರ ಮತ್ತು ವಿರಾಮ ಪ್ರಯಾಣಿಕರಿಗೆ  ಒಂದು ಪರಿಪೂರ್ಣ ರೋಮಾಂಚಕಾರಿ ಮಾಹಿತಿ ನೀಡುವ ಭರವಸೆ ಹೊಂದಿದೆ.

ದುರ್ಗಾಪುರ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು

ದುರ್ಗಾಪುರ ಮುಖ್ಯವಾಗಿ ಕೈಗಾರಿಕಾ ನಗರವಾದರೂ ಕೂಡ ಇಲ್ಲಿರುವ ಅನೇಕ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ದುರ್ಗಾಪುರದಲ್ಲಿ ಅನೇಕ ಸುಂದರ ಉದ್ಯಾನವನಗಳು ಮತ್ತು ಗಾರ್ಡನ್ ಗಳನ್ನು ಕಾಣಬಹುದು. ಮೋಹನ ಕುಮಾರಮಂಗಳಂ ಉದ್ಯಾನವನ, ಬುರ್ನಪುರದಲ್ಲಿರುವ ನೆಹರು ಉದ್ಯಾನವನ ಅವುಗಳಲ್ಲಿ ಕೆಲವು. ಬಿಷ್ಣುಪುರ, ಜಯದೇವ ಕೆಂದುಲಿ, ರಾಹ್ರೇಶ್ವರ ಶಿವ ಮಂದಿರ ಇವುಗಳು ಈ ಸ್ಥಳದ ಮುಖ್ಯ ಯಾತ್ರಾ ಸ್ಥಳಗಳು.

ಪಶ್ಚಿಮ ಬಂಗಾಳದ ಇತರ ಸಣ್ಣ ನಗರಗಳಂತೆ ದುರ್ಗಾಪುರದಲ್ಲಿಯೂ ಕೂಡ ಸಾಕಷ್ಟು ಮಾಲ್ ಗಳು ತಲೆಯೆತ್ತಿ ನಿಂತಿವೆ. ಡ್ರೀಮ್ ಪ್ಲೆಕ್ಸ್ ದುರ್ಗಾಪುರದಲ್ಲಿ ಪ್ರಾರಂಭವಾದ ಮೊದಲು ಮಾಲ್. ಹೆಚ್ಚಿನ ಮಾಲ್ ಗಳು ಶ್ರೇಷ್ಠ ಬ್ರಾಂಡ್ ಗಳನ್ನು ಒಳಗೊಂಡಿವೆ ಮತ್ತು ಹೊಸ ಹಾಲಿವುಡ್ ಮತ್ತು ಬಾಲಿವುಡ್ ಚಲನ ಚಿತ್ರಗಳನ್ನು ತೋರಿಸುವ ಮಲ್ಟಿ ಪ್ಲೆಕ್ಸ್ ಗಳು ಕೂಡ ಇಲ್ಲಿವೆ.

ಮೋಹನ ಕುಮಾರಮಂಗಳಂ ಉದ್ಯಾನವನವು ಒಂದು ಸಾಮಾನ್ಯ ಉದ್ಯಾನವನವಾಗಿತ್ತು ಅದನ್ನು ದುರ್ಗಾಪುರ ಪ್ರವಾಸೋದ್ಯಮದವರು ಮಕ್ಕಳ ಆಟಿಕೆ ಮತ್ತು ನೀರಿನ ಬೋಟಿಂಗ್ ಇವುಗಳ ಮೂಲಕ ಮನೋರಂಜನಾ  ಉದ್ಯಾನವನವಾಗಿ ಪರಿವರ್ತಿಸಿದ್ದಾರೆ.

ಕುಮಾರ ಮಂಗಳಂ ನ ನೀರಿನ ತಾಣಗಳು ಸಾಕಷ್ಟು ವಿಷಪೂರಿತ ಹಾವುಗಳ ವಾಸ ಸ್ಥಾನವಾಗಿದೆ. ದುರ್ಗಾಪುರಕ್ಕೆ  ಭೇಟಿ ನೀಡಿದ ಪ್ರವಾಸಿಗರು ನೈಸರ್ಗಿಕ ಬಿಸಿನೀರಿನ ಬುಗ್ಗೆ ಅನುಭವಿಸಲು ಮತ್ತು ಪೂಜಿಸಲು ಬಕ್ರೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಕೈಗಾರಿಕೆ ಮತ್ತು ಶೈಕ್ಷಣಿಕ ಮಾಹಿತಿ

ಉಕ್ಕಿನ ನಗರದ ಒಂದು ವಿಸ್ತರಣೆಯ ಜೊತೆಗೆ ದುರ್ಗಾಪುರ ರಾಷ್ಟ್ರೀಯ ಇಂಜಿನೆಯರಿಂಗ್ ಕಾಲೇಜನ್ನು ಕೂಡ ಹೊಂದಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಬಂದು ಇಲ್ಲಿ ನೆಲೆಸಿರುವುದನ್ನು ಕಾಣಬಹುದು. ಬೀದಿಗಳಲ್ಲಿ ವಿದ್ಯಾರ್ಥಿಗಳನ್ನು ಸಂಜೆ ಸಮಯದಲ್ಲಿ ಕಾಣುವುದು ಇಲ್ಲಿನ ಸಾಮಾನ್ಯ ದೃಶ್ಯವಾಗಿದೆ. ಅಗತ್ಯಗಳನ್ನು ಪೂರೈಸಲು ಪಟ್ಟಣದ ಸುತ್ತಮುತ್ತಲು ಮತ್ತು ಮುಖ್ಯ ಭಾಗಗಳಲ್ಲಿ ಅನೇಕ ರೆಸ್ಟೋರೆಂಟ್ ಗಳು ಮತ್ತು ತಿನಿಸುಗಳನ್ನು ಕಾಣಬಹುದು.

ಸ್ಪೋರ್ಟ್ಸ್ ಪ್ರೀತಿ

ಪಶ್ಚಿಮ ಬಂಗಾಳದ ಉಳಿದ ನಗರದಂತೆ ದುರ್ಗಾಪುರದ ಜನರು ಕೂಡ ಸ್ಪೋರ್ಟ್ಸ್ ಪ್ರಿಯರು. ಫುಟ್ಬಾಲ್, ಕ್ರಿಕೆಟ್ ಮುಂತಾದ ಕ್ರೀಡಾಂಗಣಕ್ಕೆ ನೆಹರು ಸ್ಟೇಡಿಯಂ, ಎ ಎಸ್ ಪಿ ಸ್ಟೇಡಿಯಂ ಮತ್ತು ಭಗತ್ ಸಿಂಗ್ ಸ್ಟೇಡಿಯಂ ಗಳು ಹೆಸರುವಾಸಿಯಾಗಿದ್ದು ವಿದ್ಯಾರ್ಥಿಗಳು ಮತ್ತು ಸ್ಪೋರ್ಟ್ಸ್ ಪ್ರಿಯರು ಈ ಕ್ರೀಡಾಂಗಣವನ್ನು ಬಳಸಿಕೊಳ್ಳುತ್ತಾರೆ.

ದುರ್ಗಾಪುರ ಪ್ರಕೃತಿ ಸೌಂದರ್ಯ ಸವಿಯಲು ಸೂಕ್ತ ಸ್ಥಳ.ಜೊತೆಗೆ ಇಲ್ಲಿನ ಜನರ ಸಣ್ಣ ಪಟ್ಟಣದ ಜೀವನ ಕೂಡ ಕಾಣಬಹುದು. ಪ್ರವಾಸಿಗರು ಇಲ್ಲಿ ಬೃಹತ್ ಭಾರತೀಯ ಉಕ್ಕಿನ ಕಾರ್ಖಾನೆ ಬಗ್ಗೆ ತಿಳಿದುಕೊಳ್ಳಬಹುದು. ರಾಜ್ಯದ ಇತರ ನಗರ ಮತ್ತು ಭಾಗಗಳಿಂದ ಕೂಡ ಇಲ್ಲಿ ತಲುಪಬಹುದು ಮತ್ತು ಪ್ರಾಪಂಚಿಕ ನಗರ ಜೀವನದಿಂದ ತ್ವರಿತ ಬಿಡುಗಡೆಯೊಂದಿಗೆ ಆಹ್ಲಾದಕರವಾದ  ಸ್ಥಳ ಇದಾಗಿದೆ.

ದುರ್ಗಾಪುರವನ್ನು ತಲುಪುವ ಮಾರ್ಗ

ದುರ್ಗಾಪುರ ರಸ್ತೆ ಮತ್ತು ರೈಲ್ವೆ ಮಾರ್ಗದ ಸಂಪರ್ಕ ಹೊಂದಿದೆ.

ದುರ್ಗಾಪುರದ ಹವಾಮಾನ

ದುರ್ಗಾಪುರ ತಲುಪಲು ಸೂಕ್ತ ಸಮಯ ಚಳಿಗಾಲ

ದುರ್ಗಾಪುರ ಪ್ರಸಿದ್ಧವಾಗಿದೆ

ದುರ್ಗಾಪುರ ಹವಾಮಾನ

ಉತ್ತಮ ಸಮಯ ದುರ್ಗಾಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದುರ್ಗಾಪುರ

  • ರಸ್ತೆಯ ಮೂಲಕ
    ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ 2 ಮತ್ತು ಎ ಹೆಚ್ 1 ರ ಮೂಲಕ 3 ಗಂಟೆಯ ಪ್ರಯಾಣದಲ್ಲಿ ರಸ್ತೆ ಮೂಲಕ ಸುಲಭವಾಗಿ ದುರ್ಗಾಪುರ ಸೇರಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದುರ್ಗಾಪುರ ಕೊಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಇತರ ಮುಖ್ಯ ನಗರಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿ ಹಲವಾರು ಎಕ್ಸ್ ಪ್ರೆಸ್ ಮತ್ತು ಪ್ರಯಾಣಿಕರ ರೈಲುಗಳು ದುರ್ಗಾಪುರದ ಮೂಲಕ ಹಾದುಹೋಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುರ್ಗಾಪುರ ತಲುಪಬಹುದು ಮತ್ತು ಅಲ್ಲಿಂದ 3 ಗಂಟೆಯ ಪ್ರಯಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun