Search
  • Follow NativePlanet
Share
ಮುಖಪುಟ » ಸ್ಥಳಗಳು» ಖರಗಪುರ್

ಖರಗಪುರ - ರೈಲ್ವೇ ನಗರ

7

ಈ ಪಟ್ಟಣ ಪ್ರಸಿದ್ದಿಯಾಗಿರುವುದು ಅತಿದೊಡ್ಡ ರೈಲು ಪ್ಲಾಟ್ ಫಾರಂಗಾಗಿ, ಇದು ದೇಶದ ಮೂರನೇ ಅತಿದೊಡ್ಡ ರೈಲು ನಿಲ್ದಾಣ. ಇದಲ್ಲದೇ ಖರಗಪುರ ದೇಶದ ಪ್ರಸಿದ್ದ ವಿದ್ಯಾ ಕೇಂದ್ರ ಕೂಡಾ. ಇಲ್ಲಿನ ಇಂಡಿಯನ್ ಇನ್ಸಿಟ್ಯೂಟ್ ಖರಗಪುರ ಕ್ಯಾಂಪಸ್ ಬಹಳ ಪ್ರಸಿದ್ದ. ಖರಗಪುರ ದೇಶದ ಮೂರನೇ ದೊಡ್ಡ ರೈಲು ನಿಲ್ದಾಣ ಮತ್ತು ಇಲ್ಲಿ ಹದಿಮೂರು ಸಾವಿರ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಾರೆ.

ಖರಗಪುರ ಸುತ್ತ ಮುತ್ತವಿರುವ ಸ್ಥಳಗಳು

ಖರಗಪುರದ ದೊಡ್ಡ ಕೆರೆ ನಗರದ ಪ್ರಮುಖ ಆಕರ್ಷಣೆಯಲ್ಲೊಂದು, ಯುವ ಸಮುದಾಯ ಈ ಕೆರೆಗೆ ಮಾರು ಹೋಗಿ ಇದನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಖರಗಪುರ, ಪ್ರಮುಖ ವಿದ್ಯಾ ಕೇಂದ್ರವಾಗಿರುವುದರಿಂದ ಪ್ರಮುಖ ನಗರವಾಗಿ, ಅತಿಯಾದ ಉತ್ಸಾಹದಿಂದ, ತೇಜಸ್ಸಿನಿಂದ ಮತ್ತು ಹುಮ್ಮಸ್ಸಿನಿಂದ ಸದಾ ಕೂಡಿರುತ್ತದೆ.

ಖರಗಪುರ ದೇಶದ ಹಿಂದೂ - ಮುಸ್ಲಿಂ ಸಾಮರಸ್ಯದ ನಗರಕ್ಕೂ ಹೆಸರುವಾಸಿಯಾಗಿದೆ. ಎರಡೂ ಸಮುದಾಯದವರು ಜೊತೆಗೆ ವಾಸಿಸಿ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುತ್ತಾರೆ. ಕಾಳಿ ದೇವಾಲಯ ಮತ್ತು ಶಾ ಮಸೀದಿ ಇಲ್ಲಿನ ಎರಡೂ ಸಮದಾಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು ಎರಡೂ ಕೋಮಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಆಹಾರ ಮತ್ತು ಹಬ್ಬ ಹರಿದಿನ

ವಿದ್ಯಾಕೇಂದ್ರವಾಗಿ, ವಿದ್ಯಾರ್ಥಿಗಳಿಗೆ ಅತಿ ಬೇಡಿಕೆಯ ನಗರವಾಗಿದ್ದರೂ, ಖರಗಪುರ ಈ ಭಾಗದಲ್ಲಿ ಉತ್ತಮ ಆಹಾರ ಪದ್ದತಿಯನ್ನು ಹೊಂದಿದೆ. ರಸ್ತೆ ಪಕ್ಕದಲ್ಲಿ ಮಾರುವ ಜಾಯಿಂಟ್ ಮತ್ತು ರೆಸ್ಟೋರೆಂಟ್ ಗಳು ವಿವಿಧ ರೀತಿಯ ಬಾಯಲ್ಲಿ ನೀರೂರಿಸುವ ಬೆಂಗಾಲಿ ಮತ್ತು ಇತರ ಆಹಾರವನ್ನು ನೀಡುತ್ತದೆ.

ಇಲ್ಲಿನ ಆಹಾರ ಪದ್ದತಿಯ ರುಚಿ ನೋಡಬೇಕೆಂದರೆ ಖರಗಪುರ ಕೆರೆಯ ಸಮೀಪವಿರುವ ಸಾಲು ಸಾಲು ರಸ್ತೆ ಬದಿಯ ಹೋಟೇಲುಗಳಲ್ಲಿ ಪ್ರಯತ್ನಿಸಬಹುದು. ಬೆಂಗಾಲಿ ಶೈಲಿಯ ಕರಾವಳಿ ಕಡಲ ಆಹಾರಗಳು ಮತ್ತು ಸಿಹಿ ತಿನುಸುಗಳು ಹೆಸರುವಾಸಿ. ಸಿಹಿ ತಿಂಡಿಯಲ್ಲಿ ಪಟ್ಟಿ ಮಾಡಿದರೆ, ಅದರಲ್ಲೇ ರುಚಿ ನೋಡಲೇ ಬೇಕಾದ ತಿನುಸು ಎಂದರೆ ಸಂದೇಶ್ ಮತ್ತು ರಾಸ್ ಮಲೈ.

ಮಾಲ್ ಸಂಸ್ಕ್ರುತಿ ಮತ್ತು ಮನೋರಂಜನೆ

ಇಲ್ಲಿನ ಮಲ್ಟಿಪ್ಲೆಕ್ಸ್ ಮತ್ತು ಮಾಲುಗಳಲ್ಲಿ ವಿಶ್ವ ಪ್ರಸಿದ್ದ ಬ್ರಾಂಡುಗಳೂ ಸಿಗುವುದಲ್ಲದೇ, ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ. ಅಗ್ಗದ ದರದಲ್ಲಿ ಖರೀದಿ ಮಾಡುಲಿಚ್ಚಿಸುವ ಪ್ರವಾಸಿಗರು ನಗರದ ಪುರಾತನ್, ಗೋಲೆ ಅಥವ ಗೇಟ್ ಬಜಾರ್ ಕಡೆ ಹೋಗಬಹುದು.

ವಿದ್ಯಾಕೇಂದ್ರದ ಜೊತೆಗೆ ನಗರವು ಪ್ರವಾಸಿ ಮೌಲ್ಯವನ್ನೂ ಪರಿಚಯಿಸುತ್ತದೆ, ಖರಗಪುರ ಪ್ರವಾಸೋದ್ಯಮ ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಕೊಲ್ಕತ್ತಾ ಮತ್ತು ಇತರ ನಗರ, ಪಕ್ಕದ ರಾಜ್ಯಗಳಿಗೆ ಖರಗಪುರದಿಂದ ಪ್ರಯಾಸವಿಲ್ಲದೇ ಪ್ರಯಾಣಿಸ ಬಹುದು.

ವಿದ್ಯಾರ್ಥಿಗಳನ್ನು ಇಲ್ಲಿ ಉತ್ತಮವಾಗಿ ನೋಡಿ ಕೊಳ್ಳಲಾಗುತ್ತದೆ, ಸ್ಥಳೀಯರು ಮತ್ತು ಹೊರಗಿನವರೂ ಇಲ್ಲಿ ವಾಸಿಸುತ್ತಾರೆ. ವಾರಾಂತ್ಯ ಪ್ರವಾಸಕ್ಕೆ ಕೊಲ್ಕತ್ತಾ ಉತ್ತಮ ಆಯ್ಕೆ.

ಖರಗಪುರ ತಲುಪುವುದು ಹೇಗೆ

ಖರಗಪುರ ಆಗ್ನೇಯ ರೈಲ್ವೇಯ ಪ್ರಮುಖ ಜಂಕ್ಷನ್, ಈ ಭಾಗದಲ್ಲಿ ಹೌರಾದ ನಂತರ ಇದೇ ದೊಡ್ಡ ರೈಲ್ವೆ ಜಂಕ್ಷನ್. ರೈಲ್ವೆಯ ಉತ್ತಮ ನೆಟ್ವರ್ಕ್ ಈ ನಗರಕ್ಕಿದೆ. ರಸ್ತೆ ಮೂಲಕವೂ ಖರಗಪುರ ಉತ್ತಮ ಸಂಪರ್ಕದಲ್ಲಿದೆ. ಪಶ್ಚಿಮ ಬಂಗಾಲದ ವಿವಿಧ ಪ್ರದೇಶಗಳಿಂದ ಬಸ್ಸುಗಳು ಇಲ್ಲಿಗಿವೆ.

ಖರಗಪುರ ತಲುಪಲು ಯಾವ ಸಮಯ ಸೂಕ್ತ

ಖರಗಪುರ ಭೇಟಿ ನೀಡಲು ಚಳಿಗಾಲ ಅತ್ಯಂತ ಸೂಕ್ತ ಸಮಯ.

ಖರಗಪುರ್ ಪ್ರಸಿದ್ಧವಾಗಿದೆ

ಖರಗಪುರ್ ಹವಾಮಾನ

ಉತ್ತಮ ಸಮಯ ಖರಗಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಖರಗಪುರ್

  • ರಸ್ತೆಯ ಮೂಲಕ
    ರಾಷ್ಟೀಯ ಹೆದ್ದಾರಿ ಆರು ಖರಗಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ, ಇದು ಕೊಲ್ಕತ್ತಾಗೆ ಕೊಂಡಿಯಾಗಿದ್ದು ಸುಮಾರು 131 ಕಿಲೋಮೀಟರ್ ದೂರದಲ್ಲಿದೆ. ಖರಗಪುರದಿಂದ ಎರಡು ಗಂಟೆಯಲ್ಲಿ ಕೊಲ್ಕತ್ತಾ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಖರಗಪುರ ರೈಲು ನಿಲ್ದಾಣ ಮೂರನೇ ದೇಶದ ಅತಿ ಉದ್ದದ ಪ್ಲಾಟ್ ಫಾರಂ ಹೊಂದಿರುವ ನಗರ. ದೇಶದ ಪ್ರಮುಖ ರೈಲ್ವೇ ಜಂಕ್ಷನ್ ಆಗಿದ್ದು ದೆಹಲಿ, ಮುಂಬೈ, ಕೊಲ್ಕತ್ತಾಗೆ ನೇರ ರೈಲು ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಖರಗಪುರಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಅಂತರಾಷ್ಟೀಯ ವಿಮಾನ ನಿಲ್ದಾಣ, ಇಲ್ಲಿಂದ ದೇಶದ ಮತ್ತು ವಿಶ್ವದ ಇತರ ಭಾಗಗಳಿವೆ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat