Search
 • Follow NativePlanet
Share
ಮುಖಪುಟ » ಸ್ಥಳಗಳು» ಬೊಮ್ಡಿಲ

ಬೊಮ್ಡಿಲ : ಸುಂದರ ಪ್ರಾಕೃತಿಕ ನೋಟ

20

ಬೊಮ್ಡಿಲ ಅರುಣಾಚಲಪ್ರದೇಶದ ಒಂದು ಸಣ್ಣ ಪಟ್ಟಣ ಸಮುದ್ರಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಪೂರ್ವಹಿಮಾಲಯದ ಶ್ರೇಣಿಗಳಿಂದ ಆವೃತವಾಗಿರುವ ಈ ಸ್ಥಳವನ್ನು ನೋಡಲು ಪ್ರವಾಸಿಗರು ದೂರದೂರುಗಳಿಂದ ಬರುತ್ತಾರೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಇಲ್ಲಿ ಸೇಬಿನ ತೋಟಗಳು ಮತ್ತು ಬೌದ್ಧ ಮಂದಿರಗಳು ಇವೆ. ಚಾರಣಪ್ರಿಯರನ್ನು ಸಹ ಈ ಸ್ಥಳ ಆಕರ್ಷಿಸುತ್ತದೆ.

ಬೊಮ್ಡಿಲಾದ ಸಂಕ್ಷಿಪ್ತ ಇತಿಹಾಸ

ಇತಿಹಾಸದ ಪ್ರಕಾರ ಬೊಮ್ಡಿಲ ಮಧ್ಯಕಾಲೀನ ಯುಗದಲ್ಲಿ ಟಿಬೇಟ್ ಸಾಮ್ರಾಜ್ಯಕ್ಕೆ ಸೇರಿತ್ತು. ಇದರೊಂದಿಗೆ ಆದಿವಾಸಿ ಪಂಗಡಗಳು ಮತ್ತು ಭೂತಾನಿನ ರಾಜರು ಕೂಡ ಕೆಲಕಾಲ ಈ ಪಟ್ಟಣವನ್ನು ಆಳಿದ್ದರು ಎಂದು ಹೇಳಲಾಗುತ್ತದೆ. ಬ್ರಿಟೀಷ ಆಳ್ವಿಕೆಯ ಸಮಯದಲ್ಲಿ ಅಂದರೆ 1873 ರಲ್ಲಿ ಈ ಸ್ಥಳವನ್ನು ಗಡಿಯಾಚೆಗಿನ ಪ್ರದೇಶವೆಂದು ಹೇಳಲಾಯಿತು. ಬೊಮ್ಡಿಲಾದ ಸುತ್ತಲ ಪ್ರದೇಶವನ್ನು 1962 ರಲ್ಲಿ ಚೀನಾ ಆಕ್ರಮಿಸಿಕೊಂಡಿತ್ತು. ನಂತರ ಇದನ್ನು ಪುನಃ ಗಳಿಸಲಾಯಿತು. 1947 ರಿಂದಲೂ ಅರುಣಾಚಲ ಪ್ರದೇಶದ ಈ ಭಾಗ ಭಾರತ ಮತ್ತು ಚೀನಾದ ನಡುವೆ ವಿವಾದಾತ್ಮಕ ಪ್ರದೇಶವಾಗಿಯೇ ಉಳಿದುಕೊಂಡಿದೆ.

ಹವಾಮಾನ

ಹಿಮಪರ್ವತಗಳ ತಪ್ಪಲಲ್ಲಿ ಇರುವ ಕಾರಣದಿಂದ ಬೊಮ್ಡಿಲದಲ್ಲಿ ಬೇಸಿಗೆಯು ಅಲ್ಪಾವಧಿಯದಾಗಿದ್ದು ಏಪ್ರಿಲ್-ಜೂನ್‌ವರೆಗೆ ಇರುತ್ತದೆ. ಬೇಸಿಗೆ ಹೆಚ್ಚು ಧಗೆಯಿಂದ ಕೂಡಿರುವುದಿಲ್ಲ ಬದಲಿಗೆ ಬೆಚ್ಚಗಿರುತ್ತದೆ.  ಚಳಿಗಾಲ ನವಂಬರ್-ಫೆಬ್ರವರಿವರೆಗೆ ಇರುತ್ತದೆ. ಮಳೆಗಾಲವು ಜುಲೈ-ಸೆಪ್ಟಂಬರ್‌ವರೆಗೆ ಇರುತ್ತದೆ. ಬೊಮ್ಡಿಲಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಏಪ್ರಿಲ್-ಅಕ್ಟೋಬರ್. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಬೆಚ್ಚನೆಯ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.

ಸುತ್ತಮುತ್ತಲ ಪ್ರವಾಸಿ ಸ್ಥಳಗಳು

ಬೊಮ್ಡಿಲ ಪಶ್ಚಿಮ ಕಾಮೆಂಗ್ ಜಿಲ್ಲೆಯ ಮುಖ್ಯಕೇಂದ್ರ ಕಛೇರಿಯಾಗಿದ್ದು ಅರುಣಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಬೊಮ್ಡಿಲದಿಂದ ಪ್ರವಾಸಿಗರು ಹಿಮಾಲಯ ಶ್ರೇಣಿಯ ಹಿಮಾಚ್ಛಾದಿತ ಪರ್ವತ ಶೃಂಗಗಳನ್ನು ನೋಡಬಹುದು. ಇದರೊಂದಿಗೆ ಇಲ್ಲಿ ಬೌದ್ಧ ಮಂದಿರಗಳನ್ನು ಕೂಡ ಸಂದರ್ಶಿಸಬಹುದು. ಇದರೊಂದಿಗೆ ಪ್ರವಾಸಿಗರು ಇಲ್ಲಿ ಹಲವು ಟಿಬೇಟಿಯನ್ ಆಹಾರದ ರುಚಿಯನ್ನು ಕೂಡ ನೋಡಬಹುದು.

ಬೊಮ್ಡಿಲ ಪಟ್ಟಣವನ್ನು ಸುತ್ತುವುದರೊಂದಿಗೆ ಪ್ರವಾಸಿಗರು ಇಲ್ಲಿ ಖರೀದಿ ಕೂಡ ಮಾಡಬಹುದು. ಬೊಮ್ಡಿಲವು ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಉಣ್ಣೆಯ ಬಟ್ಟೆಗಳು, ಕಾರ್ಪೆಟ್‌ಗಳು ಮತ್ತು ಸಾಂಪ್ರದಾಯಿಕ ಮುಖವಾಡಗಳವರೆಗೆ ಹಲವು ವಸ್ತುಗಳನ್ನು ಖರೀದಿಸಬಹುದು. ಕರಕುಶಲ ಕೇಂದ್ರ ಮತ್ತು ಮೂರು ಬೌದ್ಧ ಮಂದಿರಗಳು ಕೆಳ ಗೊಂಪ, ಮಧ್ಯ ಗೊಂಪ ಮತ್ತು ಮೇಲಿನ ಗೊಂಪ ಎಂದು ಕರೆಯಲಾಗುತ್ತದೆ. ಇವು ಸಂದರ್ಶಿಸಬೇಕಾದ ಕೆಲ ಸ್ಥಳಗಳು.

ಬೊಮ್ಡಿಲದ ಉತ್ತರಕ್ಕೆ ತವಾಂಗ್ ಎನ್ನುವ ಸಣ್ಣ ಪಟ್ಟಣವಿದೆ. ಇದು ಪರ್ವತಗಳ ಸುಂದರ ನೋಟಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ತವಾಂಗ್ ಸಮುದ್ರಮಟ್ಟದಿಂದ 3,400 ಅಡಿ ಎತ್ತರದಲ್ಲಿದೆ. ಇಲ್ಲಿ 17 ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲಾದ ಬೌದ್ಧ ಮಂದಿರವಿದ್ದು ಇದು 400 ವರ್ಷಗಳಷ್ಟು ಹಳೆಯದು. ಇಲ್ಲಿ ಸೆಸ್ಸಾ ಆರ್ಚಿಡ್ ತೋಟ, ಈಗಲ್‌ನೆಸ್ಟ್ ಪಕ್ಷಿಧಾಮ ಮತ್ತು ಕಾಮೆಂಗ್ ಆನೆ ಅಭಯಾರಣ್ಯವಿದ್ದು ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯವನ್ನು ಉಣಬಡಿಸುತ್ತದೆ.

ತಲುಪುವುದು ಹೇಗೆ?

ಬೊಮ್ಡಿಲ ರಸ್ತೆಮಾರ್ಗವಾಗಿ ತೇಜ್ಪುರದಿಂದ 180 ಕಿಮೀ ಮತ್ತು ತವಾಂಗ್‌ನಿಂದ 160 ಕಿಮೀ ದೂರದಲ್ಲಿದೆ. ನಿಮ್ಮ ಸ್ವಂತ ವಾಹನದಲ್ಲಿ ಹೋಗಲು ಇಚ್ಛಿಸದಿದ್ದರೆ ಬಸ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇಟಾನಗರ್‌ನಿಂದ ಬೊಮ್ಡಿಲಗೆ ದಿನನಿತ್ಯ ಬಸ್ಸುಗಳು ಓಡಾಡುತ್ತವೆ. ತೇಜ್ಪುರದಿಂದ 20 ಕಿಮೀ ದೂರದಲ್ಲಿರುವ ಬಲಿಪಾರದ ಮೂಲಕ ಈ ಬಸ್ಸುಗಳು ಓಡಾಡುತ್ತವೆ.

ಬೊಮ್ಡಿಲ ಪ್ರಸಿದ್ಧವಾಗಿದೆ

ಬೊಮ್ಡಿಲ ಹವಾಮಾನ

ಬೊಮ್ಡಿಲ
9oC / 48oF
 • Partly cloudy
 • Wind: NW 5 km/h

ಉತ್ತಮ ಸಮಯ ಬೊಮ್ಡಿಲ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬೊಮ್ಡಿಲ

 • ರಸ್ತೆಯ ಮೂಲಕ
  ಇಟಾನಗರದಿಂದ ಬೊಮ್ಡಿಲಾಕ್ಕೆ ಬಲಿಪಾರ ಮೂಲಕ ನಿತ್ಯವೂ ಬಸ್ಸುಗಳು ಸಂಚರಿಸುತ್ತವೆ. ಇದು ತೇಜ್ಪುರದಿಂದ 20 ಕಿಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತೇಜ್ಪುರ ಇಲ್ಲಿಗೆ ಸಮೀಪದ ರೈಲುನಿಲ್ದಾಣವನ್ನು ಹೊಂದಿದೆ. ಇದು ಎಲ್ಲ ಮುಖ್ಯ ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ತೇಜ್ಪುರ. ಇಲ್ಲಿಂದ ಬೊಮ್ಡಿಲಾಕ್ಕೆ ರೈಲು ಅಥವ ರಸ್ತೆಯ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Apr,Wed
Return On
25 Apr,Thu
 • Today
  Bomdila
  9 OC
  48 OF
  UV Index: 3
  Partly cloudy
 • Tomorrow
  Bomdila
  9 OC
  48 OF
  UV Index: 3
  Moderate or heavy rain shower
 • Day After
  Bomdila
  8 OC
  47 OF
  UV Index: 3
  Moderate or heavy rain shower