Search
 • Follow NativePlanet
Share
ಮುಖಪುಟ » ಸ್ಥಳಗಳು » ಬೊಮ್ಡಿಲ » ಆಕರ್ಷಣೆಗಳು » ಬೊಮ್ಡಿಲಾದ ಗೊಂಪಾಸ್

ಬೊಮ್ಡಿಲಾದ ಗೊಂಪಾಸ್, ಬೊಮ್ಡಿಲ

1

ಗಾನ್ತ್ಸೆ ಗಾಡೆನ್ ರಬ್ಗ್ಯೆಲ್ ಲಿಂಗ್ ಮಠವನ್ನು ಜಿಆರ್‌ಎಲ್ ಮಠ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ಬೌದ್ಧ ಲಾಮಾಗಳು ಮತ್ತು ಸಂನ್ಯಾಸಿಗಳು ಇರುತ್ತಾರೆ. ಇದು ಲಾಮಾ ನಂಬಿಕೆಯ ಮಹಾಯಾನ ಬೌದ್ಧ ಧರ್ಮದ ಮುಖ್ಯ ಕೇಂದ್ರವಾಗಿದೆ. ಇದು ಪಶ್ಚಿಮ ಕಾಮೆಂಗ್ ಜಿಲ್ಲೆಯಾಲ್ಲಿದೆ. ಇದನ್ನು 1965-66 ರಲ್ಲಿ ತ್ಸೊನ ಗೊನ್ತ್ಸೆ ರಿಪೊಚೆಯ 12 ನೇ ಅವತಾರದಲ್ಲಿ ಕಟ್ಟಲಾಗಿದೆ.

ಮುಖ್ಯ ಗೊಂಪಾದಲ್ಲಿ ಮೂರು ಭಾಗಗಳಿವೆ. ಕೆಳ ಗೊಂಪಾ, ಮಧ್ಯ ಗೊಂಪಾ ಮತ್ತು ಮೇಲಿನ ಗೊಂಪಾ. ಮೇಲಿನ ಗೊಂಪಾವನ್ನು ಮುಖ್ಯ ಮಠವೆಂದು ಪರಿಗಣಿಸಲಾಗುತ್ತದೆ. ಕೆಳಗಿನ ಗೊಂಪಾವು ಮುಖ್ಯ ಮಾರುಕಟ್ಟೆ ಪ್ರದೇಶದ ಕೊನೆಯಲ್ಲಿದ್ದು, ಟೆಬೇಟಿಯನ್ ವಾಸ್ತುಶಿಲ್ಪಕಲೆಯನ್ನು ಬಿಂಬಿಸುತ್ತದೆ. ಮಧ್ಯ ಗೊಂಪಾವು ಮುಖ್ಯ ಮಾರುಕಟ್ಟೆಯಿಂದ 2 ಕಿಮೀ ದೂರದಲ್ಲಿದೆ. ಕೆಳ ಗೊಂಪಾದಲ್ಲಿ ದೊಡ್ಡದಾದ ಪ್ರಾರ್ಥನಾ ಮಂದಿರವಿದೆ. ಇಲ್ಲಿನ ಬಹಳ ಮುಖ್ಯ ನಂಬಿಕೆಯೆಂದರೆ ಗೊಂಪಾದಲ್ಲಿನ ಗಂಟೆಯನ್ನು ಬಾರಿಸಿದರೆ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ ಎಂದು.

ಮಧ್ಯ ಗೊಂಪಾದಲ್ಲಿ ನೀಲಿ ಬಣ್ಣದ ಬುದ್ಧ ವಿಗ್ರಹವಿದೆ. ಇದು ಔಷಧಗಳ ಅಥವ ವೈದ್ಯಕ್ಕೆ ಅಧಿದೇವತೆ ಎಂದು ಹೆಸರಾಗಿದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ಈ ವಿಗ್ರಹವು ರೋಗಗಳನ್ನು ವಾಸಿಮಾಡುತ್ತದೆ.  ಜನರು ರೋಗ ಪರಿಹರಿಸಿಕೊಳ್ಳಲು ಧ್ಯಾನವನ್ನು ಮಾಡುತ್ತಾರೆ. ಮೂರು ಗಾಂಪಾಗಳ ಪೈಕಿ ಮಧ್ಯ ಗಾಂಪಾವು ಪುರಾತನವಾದುದು.

ಕೆಳ ಮತ್ತು ಮಧ್ಯ ಗಾಂಪಾಗಳಲ್ಲದೆ ಮೇಲಿನ ಗಾಂಪಾ ಕೂಡ ಇದೆ. ಇದು ಮಠದ ಮುಖ್ಯ ಭಾಗ. ಇಲ್ಲಿ ಸಂನ್ಯಾಸಿಗಳ ಮಕ್ಕಳಿಗೆ ಶಾಲೆ, ಪ್ರಾರ್ಥನಾ ಮಂದಿರ ಮತ್ತು ಬುದ್ಧ ಮಂದಿರವಿದೆ. ಹಲವು ವರ್ಷಗಳಿಂದಲೂ ಮೇಲಿನ ಗಾಂಪಾವು ಬೌದ್ಧ ಬೋಧನೆಗಳಿಗಾಗಿ ಮುಖ್ಯ ಪ್ರವಾಸಿ ಆಕರ್ಷಣೆಯಾಗಿದೆ.

ಗಾಂಪಾವು ಟಿಬೆಟ್‌ನ ತ್ಸೊನಾ ಗೊನ್ತ್ಸೆ ಮಠದ ಪ್ರತಿಕೃತಿ ಎಂದು ಹೇಳಲಾಗುತ್ತದೆ. ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿ ಲಾಮಾಗಳು ಮತ್ತು ಸಂನ್ಯಾಸಿಗಳು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಹಿರಿಯ ಲಾಮಾಗಳು ಕಿರಿಯ ಲಾಮಾಗಳಿಗೆ ತಂತ್ರಯಾನ ಅಭ್ಯಾಸಗಳನ್ನು ಮತ್ತು ಮಠದ ಜೀವನ ಶೈಲಿಯನ್ನು ಬೋಧಿಸುತ್ತಾರೆ.

One Way
Return
From (Departure City)
To (Destination City)
Depart On
18 Feb,Mon
Return On
19 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Feb,Mon
Check Out
19 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Feb,Mon
Return On
19 Feb,Tue
 • Today
  Bomdila
  -2 OC
  29 OF
  UV Index: 7
  Partly cloudy
 • Tomorrow
  Bomdila
  -2 OC
  29 OF
  UV Index: 7
  Light sleet
 • Day After
  Bomdila
  1 OC
  33 OF
  UV Index: 8
  Moderate rain at times