ಸೆಸ್ಸಾ ಆರ್ಕಿಡ್ ಉದ್ಯಾನವನ, ಬೊಮ್ಡಿಲಾದ ಮುಖ್ಯ ಆಕರ್ಷಣೆಗಳಲ್ಲಿ ಒಂದು. ಇದು ಬಾಲುಕ್ಪಾಂಗ್ನಲ್ಲಿ ಹಿಮಾಲಯದ ತಪ್ಪಲಿನಲ್ಲಿದೆ. ಇದು ಸರಿಸುಮಾರು 100 ಕಿಮೀ ವಿಸ್ತೀರ್ಣವಾಗಿದೆ. ಇದು ಈಗಲ್ನೆಸ್ಟ್ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತಿದೆ. ಪರಿಸರ ಮತ್ತು ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ ಚಾರಣ ಮಾರ್ಗಗಳನ್ನು ರೂಪಿಸಿರುವುದರಿಂದ ಇದು ಜನಪ್ರಿಯವಾಗಿದೆ. ಸಾಹಸ ಪ್ರಿಯರಿಗೆ ಇಲ್ಲಿನ ಪರ್ವತಗಳು ಮತ್ತು ಕಣಿವೆಗಳು ಅಭೂತಪೂರ್ವ ಅನುಭವವನ್ನು ನೀಡುತ್ತದೆ. ಇಲ್ಲಿ ನರ್ಸರಿ ಕೂಡ ಇದ್ದು ಹಲಬಗೆಯ ಆರ್ಚಿಡ್ಗಳ ತಳಿಗಳನ್ನು ಕಾಣಬಹುದು.
ಈ ಉದ್ಯಾನದಲ್ಲಿ ಸುಮಾರು ೨೦೦ ಬಗೆಯ ಆರ್ಕಿಡ್ ಗಳನ್ನು ಕಾಣಬಹುದು. ಇದಲ್ಲದೆ ಏಳು ಬಗೆಯ ಆಪ್ರೋಟ್ರೋಫಿಕ್ ಆರ್ಕಿಡ್ ಗಳನ್ನು ಕೂಡ ಕಾಣಬಹುದು. ದೆಡೊರ್ಬಿಯಂ, ಬುಬೊಫೈಲಂ, ಕೊಎಲೊಗ್ಯೆನೆ, ಎರಿಯಾ, ಫೈಸ್, ಲಿಪ್ಯಾರಿಸ್ ಮತ್ತಿತರ ಬಗೆಗಳನ್ನು ಕೂಡ ಇಲ್ಲಿ ಕಾಣಬಹುದು. ಇದು ಬೊಮ್ಡಿಲಾದಿಂದ 24 ಕಿಮೀ ದೂರದ ಟಿಪಿಯ ಸಮೀಪದಲ್ಲಿದೆ.