Search
  • Follow NativePlanet
Share
ಮುಖಪುಟ » ಸ್ಥಳಗಳು » ಬೊಮ್ಡಿಲ » ಆಕರ್ಷಣೆಗಳು » ಈಗಲ್‌ನೆಸ್ಟ್ ವನ್ಯಜೀವಿಧಾಮ

ಈಗಲ್‌ನೆಸ್ಟ್ ವನ್ಯಜೀವಿಧಾಮ, ಬೊಮ್ಡಿಲ

10

ಸೆಸ್ಸಾ ಆರ್ಕಿಡ್ ಉದ್ಯಾನ ಪಕ್ಕದಲ್ಲೇ ಈಗಲ್‌ನೆಸ್ಟ್ ವನ್ಯಜೀವಿಧಾಮವಿದೆ. ಇದು ಪಶ್ಚಿಮ ಕಾಮೆಂಗ್ ಜಿಲ್ಲೆಯ ಹಿಮಾಲಯದ ತಪ್ಪಲಲ್ಲಿದೆ. 1950 ರಲ್ಲಿ ಭಾರತೀಯ ಸೇನೆಯ ರೆಡ್ ಈಗಲ್ ಡಿವಿಜ಼ನ್ ಅನ್ನು ಈ ಸ್ಥಳದಲ್ಲಿ ಸ್ಥಿತಗೊಳಿಸಲಾಯಿತು. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿತು. ಈ ಧಾಮದ ಪೂರ್ವಕ್ಕೆ ಕಾಮೆಂಗ್ ನದಿಯಿದೆ. ಇಲ್ಲಿ ವಿವಿಧ ಜಾತಿಯ ಪಕ್ಷಿಗಳಿರುವುದರಿಂದ ಪಕ್ಷಿವೀಕ್ಷಕರಿಗೆ ಇದು ನೆಚ್ಚಿನ ತಾಣವಾಗಿದೆ. ಈ ತಾಣವು ಟಿಂಬರ್ ಮತ್ತು ಪ್ರಾಣಿ ಬೇಟೆಗಳಿಂದ ರಕ್ಷಿತವಾಗಿದೆ. ಇಲ್ಲಿ ಕಚ್ಚಾರಸ್ತೆಯಿದ್ದು ಮಿಲಿಟರಿ, ವಿಜ್ಞಾನಿಗಳು ಮತ್ತು ಪರಿಸರ ಪ್ರವಾಸಿಗರಿಗೆ ಅನುಕೂಲವಾಗಿದೆ.

ಇಲ್ಲಿ ಸರಿಸುಮಾರು 454 ಜಾತಿಯ ಪಕ್ಷಿಗಳಿವೆ. ನೀರುಕಾಗೆಗಳು, ಕೊಕ್ಕರೆಗಳು, ಓರಿಯೆಂಟಲ್ ವೈಟ್ ಲಿಬ್ಸ್, ಬಾತುಕೋಳಿಗಳು, ಹಾಕ್ಸ್, ರಣಹದ್ದುಗಳು, ನೆಲಗುಬ್ಬಿಗಳು, ನೊಣಹಿಡುಕಗಳು, ಮಿಂಚುಳ್ಳಿಗಳು ಮೊದಲಾದ ಪಕ್ಷಿಗಳಿವೆ. ಇವಲ್ಲದೆ ಲಂಗೂರ್, ಬಂಗಾಳ ಹುಲಿ, ಏಷ್ಯಾ ಆನೆ, ಕೆಂಪು ಪಾಂಡಾ, ಏಷ್ಯಾಟಿಕ್ ಕರಡಿ ಇತ್ಯಾದಿ 15 ಬಗೆಯ ಸಸ್ತನಿಗಳನ್ನು ಸಹ ಕಾಣಬಹುದು. ಇದರೊಂದಿಗೆ 34 ಬಗೆಯ ಉಭಯಚರಗಳು, 24 ಬಗೆಯ ಹಾವುಗಳು ಮತ್ತು 7 ಬಗೆಯ ಹಲ್ಲಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಡಾರ್ಜಿಲಿಂಗ್ ಫಾಲ್ಸ್- ವುಲ್ಫ್‌ಸ್ನೇಕ್ ಮತ್ತು ಗುಂಥರ್ಸ್ ಕುಕ್ರಿ ಸ್ನೇಕ್ ರೀತಿಯ ಅಪರೂಪದ ಜೀವಿಗಳನ್ನು ಸಹ ಕಾಣಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed