Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾನಗರ » ಹವಾಮಾನ

ಇಟಾನಗರ ಹವಾಮಾನ

ಇಟಾನಗರಕ್ಕೆ ನೀವು ವರ್ಷದ ಯಾವ ಕಾಲದಲ್ಲಾದರೂ ಸಹ ಭೇಟಿ ನೀಡಬಹುದು.  ರಾಜಧಾನಿಯ ಹವಾಮಾನವು ಯಾವಾಗಲೂ ಉಲ್ಲಾಸದಾಯಕವಾಗಿದ್ದು, ಅನುಭವಿಸಲು ಸುಯೋಗ್ಯ.  ವರ್ಷದ ಯಾವುದೇ ಅವಧಿಯಲ್ಲಿಯೂ ಸಹ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

ಇಟಾನಗರವು ತೇವಭರಿತ ಬೇಸಿಗೆಯಿಂದ ಕೂಡಿರುತ್ತದೆ.  ಮೇ ತಿಂಗಳಿನಿಂದ ಜೂನ್ ವರೆಗೆ ಕಾಲಾವಧಿಯಾಗಿದ್ದು, ಈ ಸಮಯದಲ್ಲಿ ಹವಾಮಾನವು ಅಹ್ಲಾದಕರವಾಗಿದ್ದರೂ ಕೂಡ ಕೆಲವೊಮ್ಮೆ, ಉಷ್ಣತೆಯು ಗರಿಷ್ಟ ಮಟ್ಟವನ್ನು ತಲುಪಬಹುದು.  ರಾಷ್ಟೀಯ ಉದ್ಯಾನವನದತ್ತ ಹಿಮಾಲಯದ ಗಾಳಿಯು ಬೀಸುವುದರಿoದಾಗಿ ಉಷ್ಣತೆಯು ಸಹನೀಯವಾಗಿದೆ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ನವರೆಗೆ ಮಳೆಗಾಲವಿದ್ದು ಈ ಅವಧಿಯಲ್ಲಿ ಹವಾಮಾನವು ಹಿತವಾಗಿರುತ್ತದೆ.  ಜೂನ್ ಅoತ್ಯಭಾಗದಲ್ಲಿಯೇ ಮಳೆಯು ಆರಭವಾಗುತ್ತದೆ.

ಚಳಿಗಾಲ

ಚಳಿಗಾಲವು ಇಟಾನಗರದಲ್ಲಿ ತಂಪಾಗಿರುತ್ತದೆ.  ಮಳೆಗಾಲದ ತರುವಾಯ ಹಾಗೂ ಚಳಿಗಾಲ ಮತ್ತು ವಸಂತಕಾಲದ ಪರ್ಯಂತ, ಆರ್ಕಿಡ್ ರಾಜಧಾನಿಯನ್ನು ಅನ್ವೇಷಿಸಲು ಹವಾಮಾನವು ಪೂರಕವಾಗಿರುತ್ತದೆ.