Search
 • Follow NativePlanet
Share
ಮುಖಪುಟ » ಸ್ಥಳಗಳು » ಇಟಾನಗರ » ಆಕರ್ಷಣೆಗಳು » ಗಂಗಾ ಸರೋವರ

ಗಂಗಾ ಸರೋವರ, ಇಟಾನಗರ

1

ಇಟಾನಗರದಲ್ಲಿರುವ ಗಂಗಾ ಸರೋವರವು ಅರುಣಾಚಲ ಪ್ರದೇಶದಲ್ಲಿರುವ ಪ್ರಸಿದ್ಧ ಪ್ರವಾಸೀ ತಾಣವಾಗಿದೆ.  ಸ್ಥಳೀಯವಾಗಿ ಇದು ಗೇಕರ್ ಸಿನ್ಯಿ ಅಥವಾ ಗೇಯ್ಕರ್ ಸೆನ್ಯಿಕ್ ಎಂದು ಕರೆಯಲ್ಪಡುತ್ತದೆ.  ರಾಜಧಾನಿಯಿಂದ 6 ಕಿ.ಮೀ. ದೂರದಲ್ಲಿರುವ ಈ ಐತಿಹಾಸಿಕ ಸರೋವರವು ತನ್ನ ಸುತ್ತಮುತ್ತಲೂ ಹಚ್ಚ ಹಸುರಾದ ಅರಣ್ಯದಿಂದ ಕಂಗೊಳಿಸುತ್ತಿದ್ದು, ಮುಖ್ಯವಾಗಿ ಈ ವನದಲ್ಲಿ ಅತಿ ಪುರಾತನ ಕಾಲದ ಸಸ್ಯವರ್ಗಗಳಿವೆ. ಎತ್ತರದ ವೃಕ್ಷಗಳು, ಆರ್ಕಿಡ್ ಗಳು ಮತ್ತು ಹೂ ರಹಿತ ಸಸ್ಯಗಳು ಸರೋವರದ ಸೌಂದರ್ಯವನ್ನು ನೂರ್ಮಡಿಗೊಳಿಸುತ್ತವೆ.  ನಯನಮನೋಹರ, ಶಾಂತ ಸರೋವರವು ಅತಿ ದೃಢವಾದ ಬಂಡೆಗಳನ್ನೂ ಸಹ ಹೊಂದಿದೆ.

ನಿಯ್ಶಿ ಯಲ್ಲಿರುವ ಗೆಕರ್ ಸಿನ್ಯಿ ಯ ಭಾವಾರ್ಥವು "ನಿಂತ ನೀರು" ಎಂದಾಗುತ್ತದೆ.  ಬಂಡೆಗಳಿಂದ ಆವೃತವಾದ ಈ ಜಲಪ್ರದೇಶವು ಒಂದು ಪ್ರಸಿದ್ಧ ಸುವಿಹಾರೀ ತಾಣವಾಗಿದೆ.  ದೋಣಿವಿಹಾರದ ಸೌಲಭ್ಯ, ಈಜುಕೊಳ, ಮತ್ತು ಸುತ್ತಣ ಪರಿಸರದ ಪ್ರಕೃತಿಯನ್ನು ಸವಿಯುತ್ತಾ ಅಡ್ಡಾಡಲು ಕಾಲ್ನಡಿಗೆಯ ಮಾರ್ಗ ಇವೆಲ್ಲವೂ ಪ್ರವಾಸಿಗರನ್ನು ಮೋಡಿ ಮಾಡುತ್ತವೆ.    ಈ ಪ್ರಶಾಂತ, ಪ್ರಾಕೃತಿಕ ಸರೋವರವು ಹಿಮಾಲಯದ ತಪ್ಪಲಲ್ಲಿದ್ದು, ತನ್ನ ಪರಿಸರದಲ್ಲಿ ಸಮೃದ್ಧ ಹಸಿರನ್ನು ಹೊಂದಿದೆ.  ಅದ್ವಿತೀಯ ಪುಷ್ಪರಹಿತ ಮರಗಳು ಈ ತಾಜಾ ನೀರಿನ ಸರೋವರವನ್ನು ಇನ್ನಷ್ಟು ಸೊಗಸಾಗಿಸಿವೆ.

ನಾನಾ ಕಾರಣಗಳಿಗಾಗಿ ಈ ಸರೋವರವು ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.  ಸರೋವರದ ನೀರು ಪ್ರವಹಿಸದಿರುವುದರಿಂದ, ಇದು ಸದಾ ಹಸಿರು ವರ್ಣದ್ದಾಗಿದೆ.  ಸರೋವರದ ಅವಿಸ್ಮರಣೀಯ ಸೌಂದರ್ಯವಲ್ಲದೇ, ಇದರ ಬಗ್ಗೆ  ಕೆಲವು ದಂತಕಥೆಗಳು ಈ ಸರೋವರದ ನೀರಿನ ಕುರಿತಾಗಿಯೂ ಸಹ ಇವೆ.  ಸರೋವರದ, ಸೆರೆಹಿಡಿಯಲು ಯೋಗ್ಯವಾದ ನೋಟಗಳನ್ನು ಇಲ್ಲಿನ ಪ್ರವಾಸಿಗರು ತಮ್ಮ ಕ್ಯಾಮರ ಕಣ್ಣಿನಲ್ಲಿ ಸೆರೆಹಿಡಿಯುತ್ತಾರೆ.

One Way
Return
From (Departure City)
To (Destination City)
Depart On
20 Jan,Thu
Return On
21 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jan,Thu
Check Out
21 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jan,Thu
Return On
21 Jan,Fri