Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾನಗರ » ಆಕರ್ಷಣೆಗಳು » ಇಟಾ ಕೋಟೆ

ಇಟಾ ಕೋಟೆ, ಇಟಾನಗರ

5

ರಾಜಧಾನಿ ನಗರವಾದ ಇಟಾನಗರದಲ್ಲಿರುವ ಐತಿಹಾಸಿಕ ಪ್ರದೇಶಗಳು ಅತಿ ಪ್ರಸಿದ್ಧವಾಗಿವೆ.  ಇಟಾ ಕೋಟೆ (ಇಟ್ಟಿಗೆಗಳ ಕೋಟೆ) ಯು, ದೃಶ್ಯ ರೂಪದಲ್ಲಿ ಸೆರೆಹಿಡಿಯಲ್ಪಡಲು ಅತೀ ಯೋಗ್ಯವಾದ ಪ್ರವಾಸೀ ಸ್ಥಳಗಳಲ್ಲೊಂದು.  ಇಟಾ ಕೋಟೆಯು ಒಂದು ಅನಿಯಮಿತವಾದ (ಸರಿಯಾದ ಆಕಾರವಿಲ್ಲದ) ಒಂದು ನಿರ್ಮಾಣವಾಗಿದ್ದು, ಈ ಕೋಟೆಯಿಂದಾಗಿಯೇ ಇಟಾನಗರಕ್ಕೆ ಆ ಹೆಸರು ಬಂದಿದೆ.

ನಗರದ ಹೃದಯ ಭಾಗದಲ್ಲಿರುವ ಈ ಕೋಟೆಗೆ ಯಾವುದೇ ಮೂಲೆಯಿಂದಲೂ ಸಹ ಸುಲಭವಾಗಿ ತಲುಪಬಹುದು.  ಕೋಟೆಯ ಇತಿಹಾಸವು 14 - 15 ಶತಮಾನಗಳಷ್ಟು ಹಳೆಯದಾಗಿದೆ.  ಕೋಟೆಯ ನಿರ್ಮಾಣಕ್ಕೆ ಬಳಸಲಾದ ಇಟ್ಟಿಗೆಯ ಗಾತ್ರವು 16,200 ಘ. ಮೀ. ನಷ್ಟಾಗಿದೆ.  ಕೆಲವು ಇತಿಹಾಸಕಾರರು, ಈ ಇಟ್ಟಿಗೆಗಳು ಮಾಯಾಪುರದ  ರಾಮಚಂದ್ರನ ಆಳ್ವಿಕೆಯ ಕಾಲದ್ದು ಎಂದು ಅಭಿಪ್ರಾಯಪಡುತ್ತಾರೆ.   ಈತನು ಜಿತಾರಿ ಸಾಮ್ರಾಜ್ಯದ ಅರಸನಾಗಿದ್ದನು.

ಈ ಐತಿಹಾಸಿಕ ಕೋಟೆಯ ನಿರ್ಮಾಣಕ್ಕೆ 80 ಲಕ್ಷಗಳಿಗಿಂತಲೂ ಅಧಿಕ ಇಟ್ಟಿಗೆಗಳನ್ನು ಬಳಸಲಾಗಿದೆ.  ಹಲವು ಶತಮಾನಗಳೇ ಕಳೆದು ಹೋದರೂ ಸಹ ಇಂದಿಗೂ ಈ ಕೋಟೆಯು ಶ್ರೀಮದ್ಗಾಂಭೀರ್ಯದಿಂದ, ನವನವೀನತೆಯಿಂದ ಕಂಗೊಳಿಸುತ್ತಾ ತಲೆ ಎತ್ತಿ ನಿಂತಿದೆ.  ಅಹೋಮ್ ಭಾಷೆಯಲ್ಲಿ "ಇಟಾ" ಎಂಬ ಪದಕ್ಕೆ, ಇಟ್ಟಿಗೆ ಎಂಬ ಅರ್ಥವಿದ್ದು, ಇದರಿಂದಲೇ ಈ ಕೋಟೆ ಮತ್ತು ಈ ನಗರಕ್ಕೆ ಈ ಹೆಸರು ಬಂದಿದೆ.  ಈ ಕೋಟೆಯನ್ನು ಪಶ್ಚಿಮ, ಪೂರ್ವ, ಮತ್ತು ದಕ್ಷಿಣ ದಿಕ್ಕುಗಳಿಂದ ಪ್ರವೇಶಿಸಬಹುದಾಗಿದೆ.  ಈ ಕೋಟೆಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಹಾಗೆ ಸಂಶೋಧನೆ ಸಡೆಸಿದಾಗ, ಇಲ್ಲಿ ದೊರೆತ ವಸ್ತುಗಳು ಇಟಾನಗರದ ಜವಹರ ಲಾಲ್ ನೆಹರು ಸಂಗ್ರಹಾಲಯದಲ್ಲಿ ಸುಭದ್ರವಾಗಿವೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed