Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಹವಾಮಾನ

ಕಾಜಿರಂಗಾ ಹವಾಮಾನ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ನವೆಂಬರ್ ನಿಂದ ಮೇವರೆಗೆ ಪ್ರವಾಸಿಗರಿಗಾಗಿ ತೆರೆದಿರಲ್ಪಟ್ಟಿರುತ್ತದೆ. ಇನ್ನುಳಿದ ಅವಧಿಯಲ್ಲಿ ಅತಿಯಾದ ಮಳೆಯ ಕಾರಣದಿಂದಾಗಿ ಈ ಉದ್ಯಾನವನವನ್ನು ಪ್ರವಾಸಿಗರ ಪ್ರವೇಶಕ್ಕಾಗಿ ಮುಚ್ಚಲ್ಪಟ್ಟಿರುತ್ತದೆ. ಮಳೆಗಾಲದ ನಂತರದ ದಿನಗಳು ಇಲ್ಲಿಗೆ ಭೇಟಿ ನೀಡಲು ಅತ್ಯಂತ ಪ್ರಶಸ್ತವಾಗಿರುತ್ತದೆ. ಬೇಸಿಗೆಯ ಭಯಾನಕ ಬಿಸಿಲಿನ ದಿನಗಳಲ್ಲಿ ಇಲ್ಲಿ ಹಲವಾರು ಪ್ರಾಣಿಗಳನ್ನು ನಾವು ನೋಡಬಹುದಾಗಿದೆ.

ಬೇಸಿಗೆಗಾಲ

ಕಾಜಿರಂಗಾದಲ್ಲಿ ಬೇಸಿಗೆಗಳು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇರುತ್ತದೆ. ಈ ತಿಂಗಳುಗಳು ಇಲ್ಲಿ ಅತಿಯಾದ ಬಿಸಿಲಿನಿಂದ ಕೂಡಿರುತ್ತವೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಇದ್ದರೆ, ಕನಿಷ್ಠ 25 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಜೊತೆಗೆ ಈ ಅವಧಿಯಲ್ಲಿ ಇಲ್ಲಿ ಒಣ ಹವೆಯ ಜೊತೆಗೆ ಅತಿಯಾದ ಗಾಳಿ ಸಹ ಇರುತ್ತದೆ. ಮೇ ತಿಂಗಳಿನಲ್ಲಿ ಹಲವಾರು ಪ್ರಾಣಿಗಳನ್ನು ನಾವಿಲ್ಲಿ ನೋಡಬಹುದು.

ಮಳೆಗಾಲ

ಮಳೆಗಾಲವು ಈ ಉದ್ಯಾನವನದಲ್ಲಿ ವಿಪರೀತವಾದ ಪ್ರವಾಹವನ್ನುಂಟು ಮಾಡುತ್ತದೆ. ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿ ಮಳೆಗಾಲವಿರುತ್ತದೆ. ಈ ಅವಧಿಯಲ್ಲಿ ಉದ್ಯಾನವನವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಲಾಗಿರುತ್ತದೆ. ಕಾಜಿರಂಗಾದಲ್ಲಿ ವಾರ್ಷಿಕ 2220 ಮಿ.ಮೀ ಮಳೆಯಾಗುತ್ತದೆ. ಈ ಕಾಲದಲ್ಲಿ ಇಲ್ಲಿ ಒಮ್ಮೊಮ್ಮೆ 5 ರಿಂದ 10 ದಿನಗಳ ಕಾಲ ಎಡೆಬಿಡದೆ ಮಳೆ ಸುರಿಯುತ್ತಿರುತ್ತದೆ.

ಚಳಿಗಾಲ

ಚಳಿಗಾಲವು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಈ ಕಾಲವು ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ವ್ಯಾಪಿಸಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಕನಿಷ್ಠ 5 ಡಿಗ್ರಿ ಮತ್ತು ಗರಿಷ್ಠ 30 ಡಿಗ್ರಿ ಸೆಲ್ಶಿಯಸ್ ನಡುವೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ತುಂಬಾ ಆಹ್ಲಾದಕರವಾಗಿರುತ್ತದೆ. ಹಾಗಾಗಿ ಈ ಅವಧಿಯಲ್ಲಿ ಇಲ್ಲಿಗೆ ಬೃಹತ್ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುತ್ತಾರೆ. ಹಾಗಾಗಿ ಈ ಅವಧಿಯು ಇಲ್ಲಿ ಪ್ರವಾಸಿ ಋತುವಾಗಿರುತ್ತದೆ.