Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಕಕೊಚಾಂಗ್ ಜಲಪಾತ

ಕಕೊಚಾಂಗ್ ಜಲಪಾತ, ಕಾಜಿರಂಗಾ

1

ಕಕೊಚಾಂಗ್ ಜಲಪಾತವು ಅಸ್ಸಾಂನ ಗೊಲಘಾಟ್ ಜಿಲ್ಲೆಯಲ್ಲಿನ ಬೊಕಖಾಟ್‍ನಿಂದ 13 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದೊಂದು ನಯನ ಮನೋಹರವಾದ ಜಲಪಾತವಾಗಿದ್ದು, ಸ್ವರ್ಗವನ್ನು ನಾಚಿಸುವಂತಹ ಪ್ರಕೃತಿಯ ರಮಣೀಯ ತಾಣದಲ್ಲಿ ನೆಲೆಗೊಂಡಿದೆ. ಕಾಫೀ ಮತ್ತು ರಬ್ಬರ್ ತೋಟಗಳ ಮಧ್ಯೆ ಧುಮ್ಮಿಕ್ಕುವ ಈ ಜಲಪಾತವು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಕಕೊಚಂಗ್ ಜಲಪಾತವು ಸ್ಥಳೀಯರ ಮತ್ತು ಪ್ರವಾಸಿಗರ ವಲಯದಲ್ಲಿ ವಿಹಾರ ತಾಣವಾಗಿ ಜನಪ್ರಿಯಗೊಂಡಿದೆ. ಇಲ್ಲಿ ವಿಹಾರಕ್ಕೆಂದು ಬರುವವರಿಗೆ ವಿಶಾಲವಾಗಿರುವ ಪ್ರದೇಶವು ಕುಂಟುಂಬ ಅಥವಾ ಸಹಚರರ ಜೊತೆಗೆ ಕಾಲ ಕಳೆಯಲು ಅವಕಾಶವನ್ನು ಮಾಡಿಕೊಡುತ್ತದೆ.

ಕಕೊಚಂಗ್ ಜಲಪಾತದ ಬಳಿಯಿಂದ ನುಮಲಿಗಡ್‍ನ ಅವಶೇಷಗಳನ್ನು ಪ್ರವಾಸಿಗರು ನೋಡಬಹುದು. ಈ ಪ್ರಾಚೀನ ಅವಶೇಷಗಳು ಅಮೂಲ್ಯವಾದ ಪ್ರಾಚ್ಯ ವಸ್ತುಗಳಾಗಿದ್ದು, ಪ್ರವಾಸಿಗರ ಕುತೂಹಲವನ್ನು ಕೆರಳಿಸುತ್ತವೆ. ಪ್ರವಾಸಿಗರು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ ನುಮಲಿಗಡ್ ಬಳಿಯ ಡಿಯೊಪರ್ಬತ್‍ನ ಅವಶೇಷಗಳನ್ನು ನೋಡಲು ಹೋದಾಗ ಕಕೊಚಂಗ್ ಜಲಪಾತಕ್ಕು ಸಹ ಭೇಟಿ ನೀಡಬಹುದು. ಬೊಕಖಾಟ್ ಈ ರಾಷ್ಟ್ರೀಯ ಉದ್ಯಾನವನದಿಂದ 23 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ಈ ಜಲಪಾತಕ್ಕೆ ಭೇಟಿ ನೀಡಬೇಕಾದರೆ ಮಳೆಗಾಲದ ತಿಂಗಳುಗಳಲ್ಲಿ ಭೇಟಿ ನೀಡುವುದು ಉತ್ತಮ. ಮಳೆಗಾಲದಲ್ಲಿ ಈ ಜಲಪಾತವು ತನ್ನ ರುದ್ರ ರಮಣೀಯ ಸೌಂದರ್ಯವನ್ನು ತೋರಿಸುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed