Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ದೇವ್‍ಪರ್ಬತ್ ಅವಶೇಷಗಳು

ದೇವ್‍ಪರ್ಬತ್ ಅವಶೇಷಗಳು, ಕಾಜಿರಂಗಾ

1

ದೇವ್‍ಪರ್ಬತ್ ಅವಶೇಷಗಳು ಗೊಲಘಾಟ್ ಜಿಲ್ಲೆಯಲ್ಲಿನ ನುಮಲಿಗಡ್‍ನಿಂದ 5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ ಇದು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಡಿಯೊಪಹಡ್ ( ಎರಡು ಬೆಟ್ಟಗಳು) ಎಂದು ಸಹ ಕರೆಯಲ್ಪಡುವ ದೇವ್‍ಪರ್ಬತ್ ಅವಶೇಷಗಳು, ಈ ಬೆಟ್ಟದ ಮೇಲಿರುವ ಪುರಾತನ ಅವಶೇಷಗಳಾಗಿದ್ದು, ಇವು ತಮ್ಮ ಇತಿಹಾಸದಿಂದಾಗಿ ಪ್ರಸಿದ್ಧಿಯನ್ನು ಗಳಿಸಿವೆ.

ಇಲ್ಲಿನ ಬೆಟ್ಟದ ಮೇಲೆ ಒಂದು ಪ್ರಾಚೀನ ದೇವಾಲಯವು ಇದ್ದು, ಅದರ ಅವಶೇಷಗಳು ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನಾವು ಕಾಣಬಹುದು. ಈ ಅವಶೇಷಗಳು ಆ ಪ್ರಾಚೀನ ದೇವಾಲಯದ ವೈಭವವನ್ನು ಸಾರಿ ಹೇಳುತ್ತಿವೆ. ಡಿಯೊಪಹಡ್ ಬೆಟ್ಟವನ್ನು ಬಿಸಿಲಿನ ದಿನಗಳಲ್ಲಿ ಏರುವುದು ಸ್ವಲ್ಪ ಕಠಿಣ. ಆದರೆ ಕಷ್ಟ ಪಟ್ಟು ಒಮ್ಮೆ ಹತ್ತಿದರೆ, ಅಲ್ಲಿ ಕಂಡು ಬರುವ ದೃಶ್ಯವು ನಿಜಕ್ಕು ಮೈಮನಗಳನ್ನು ಪುಲಕಗೊಳಿಸುತ್ತದೆ. ಪ್ರವಾಸಿಗರು ಇಲ್ಲಿಂದ ನುಮಲಿಗಡ್ ಟೀ ಎಸ್ಟೇಟ್‍ಗಳನ್ನು ಮತ್ತು ಹತ್ತಿರದ ಕಬಿ ಅಂಗ್‍ಲಾಂಗ್ ಬೆಟ್ಟಗಳ ನೋಟವನ್ನು ಕಾಣಬಹುದು.

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ ಪ್ರವಾಸಿಗರು ದೇವ್‍ಪರ್ಬತ್ ತಲುಪಲು ಟ್ಯಾಕ್ಸಿಗಳ ಸೇವೆ ಲಭ್ಯವಿದೆ. ಇದನ್ನು ನೋಡುವ ಜೊತೆಗೆ ಪ್ರವಾಸಿಗರು ಗೊಲಘಾಟ್ ಜಿಲ್ಲೆಯಲ್ಲಿರುವ ಕೆಲವೊಂದು ಸ್ಥಳಗಳನ್ನು ಒಂದೇ ದಿನದಲ್ಲಿ ನೋಡಿಕೊಂಡು ಹಿಂತಿರುಗಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed