Search
 • Follow NativePlanet
Share
ಮುಖಪುಟ » ಸ್ಥಳಗಳು» ಹಫ್ಲೋಂಗ್

ಹಫ್ಲೋಂಗ್ : ಅಸ್ಸಾಂನ ಮನಮೋಹಕ ಪರ್ವತ ಪ್ರದೇಶ

5

ಅಸ್ಸಾಂನ ಏಕೈಕ ಬೆಟ್ಟ ಪ್ರದೇಶವಾಗಿರುವ ಹಫ್ಲೋಂಗ್ ಮನಸೂರೆಗೊಳ್ಳುವ ಮೋಹಕತೆಯಿಂದ ಕೂಡಿದೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿರುವಂತೆ ಹಿಮಾವ್ರತವಾಗಿರದಿದ್ದರೂ ಕೂಡ ಪೂರ್ವದ ಸ್ವಿಟ್ಜರ್ ಲ್ಯಾಂಡ್ ಎಂದೇ ಪ್ರಖ್ಯಾತವಾಗಿದೆ. ಉತ್ತರ ಖಚಾರ್ ಜಿಲ್ಲೆಯ ಪ್ರಮುಖ ಸ್ಥಳವಾಗಿರುವ ಹಫ್ಲೊಂಗ್ ಬರಾಕ್ ಕಣಿವೆಗೆ ಹತ್ತಿರದಲ್ಲಿದೆ. ಹಫ್ಲೊಂಗ್ ಪ್ರವಾಸೋದ್ಯಮ  ಕಳೆಗಟ್ಟುವುದು ಹತ್ತಿರದ ನಗರದ ಜನರು ಬೇಸಿಗೆಯ ದಿನಗಳನ್ನು ತಂಪಾಗಿ ಕಳೆಯುವುದರಿಂದ.

ಹಫ್ಲೊಂಗ್ ನಗರ ಪರ್ವತ ಪ್ರದೇಶಗಳಿಂದ ಆವೃತವಾಗಿದೆ. 512 ಆಲ್ಟಿಟ್ಯೂಡ್ ಹೊಂದಿರುವ ಹಫ್ಲೊಂಗ್ ತಂಪಾಗಿಯೂ ಮನಮೋಹಕವಾಗಿಯೂ ಆದರ್ಶಪ್ರಾಯವಾಗಿಯೂ ಇದೆ. ಬೋರ್ಘರೆದು ಹರಿಯುವ ಜಲಪಾತಗಳು, ತೊರೆಗಳು, ಸುತ್ತಲು ಆವರಿಸಿರುವ ಹಸಿರು ಪ್ರದೇಶಗಳು ಒಬ್ಬರ ಮನಸ್ಸಿನಲ್ಲಿ ಪಡಿಯಚ್ಚಾಗಿ ಉಳಿಯುತ್ತವೆ. ಹಫ್ಲೊಂಗ್ ನಗರಕ್ಕೆ ವೈಟ್ ಆ್ಯಂಟ್ ಹಿಲ್ಲಾಕ್ ಎಂಬ ಹೆಸರೂ ಇದೆ.

ಹಫ್ಲೊಂಗ್ ನ ಪ್ರವಾಸಿ ತಾಣಗಳು:

ಹಫ್ಲೊಂಗ್ ನಲ್ಲಿ ಸುಂದರ ಬೆಟ್ಟಗಳು ಮನಸ್ಸಿಗೆ ನಿರಾಳತೆಯನ್ನು ಕೊಡುತ್ತವೆ. ಹಫ್ಲೊಂಗ್ ಪ್ರವಾಸಕ್ಕೆ ಕಳೆ ತುಂಬುವ ಮತ್ತೊಂದು ಅಂಶವೆಂದರೆ ಹಫ್ಲೊಂಗ್ ಸರೋವರ. ಡಿಮಾಸ್ ಕಚಾರಿ  ರಾಜವಂಶದ ಪುರಾತನ ರಾಜಧಾನಿ ಮೈಬಾಂಗ್ ಗೆ ಪ್ರವಾಸಿಗರು ಭೇಟಿ ನೀಡಬಹುದು.

ಪ್ರಶಸ್ತ ಸಮಯ:

ಹಫ್ಲೊಂಗ್ ಗೆ ಭೇಟಿ ನೀಡಲು ಬೇಸಿಗೆ ಪ್ರಶಸ್ತವಾದ ಸಮಯ. ಬೇಸಿಗೆಯಲ್ಲಿ ಅತಿಯಾದ ಉಷ್ಣಾಂಶವೂ ಇರುವುದಿಲ್ಲ, ಮಳೆಯೂ ಕಡಿಮೆ ಇರುತ್ತದೆ, ಹಫ್ಲೊಂಗ್ ನ ಸೌಂದರ್ಯ ಸವಿಯಲು ಆದರ್ಶಮಯ ಸಮಯ. ಉತ್ತರ ಕಚಾರ್ ಬೆಟ್ಟಶ್ರೇಣೀಗಳ ತಂಪಿನ ವಾತಾವರಣವನ್ನು ರಸಮಯವಾಗಿ ಸವಿಯಬಹುದು.

ಹಫ್ಲೋಂಗ್ ಪ್ರಸಿದ್ಧವಾಗಿದೆ

ಹಫ್ಲೋಂಗ್ ಹವಾಮಾನ

ಹಫ್ಲೋಂಗ್
25oC / 76oF
 • Patchy rain possible
 • Wind: S 6 km/h

ಉತ್ತಮ ಸಮಯ ಹಫ್ಲೋಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಹಫ್ಲೋಂಗ್

 • ರಸ್ತೆಯ ಮೂಲಕ
  ರಸ್ತೆಗಳು ಹಫ್ಲೊಂಗ್ ನ ಜೀವಜಾಲಗಳು. ರಾಷ್ಟ್ರೀಯ ಹೆದ್ದಾರಿ 54 ಮತ್ತು 27 ಇಲ್ಲಿಂದ ಹಾದುಹೋಗುತ್ತವೆ. ಅಸ್ಸಾಂ ಮತ್ತು ನೆರೆಯ ಮೇಘಾಲಯ ನಾಗಾಲ್ಯಾಂಡ್ ರಾಜ್ಯಗಳಿಗೂ ರಸ್ತೆ ಸಂಪರ್ಕವಿದೆ. ಸಿಲಾಚಾರ್ ಹತ್ತಿರದ ದೊಡ್ಡ ನಗರವಾಗಿದ್ದು ಗೌಹಾತಿ ಇಲ್ಲಿಂದ 309 ಕಿಮೀ ದೂರದಲ್ಲಿದೆ. ಹಫ್ಲೊಂಗ್ ನಿಂದ ಸತತವಾಗಿ ಬಸ್ಸುಗಳ ಸಂಚಾರವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೆಳ ಹಫ್ಲೊಂಗ್ ನಲ್ಲಿ ಮೀಟರ್ ಗೇಝ್ ರೈಲ್ವೇ ಸಂಪರ್ಕವಿದ್ದು ಸಿಲಚಾರ್, ಲುಮ್ ಡಿಂಗ್, ಮೈಬಾಂಗ್ ಮತ್ತು ಜತಿಂಗಾಗಳಿಗೆ ಸಂಪರ್ಕವಿದೆ. ಲಮ್ ಡಿಂಗ್ ನಿಲ್ದಾಣ ಹಫ್ಲೊಂಗ್ ನಿಂದ 131ಕಿಮೀ ದೂರದಲ್ಲಿದೆ. ಗೌಹಾತಿಯಿಂದ ಬರುವ ಹಲವು ರೈಲುಗಳು ಲುಮ್ ಡಂಗ್ ನಲ್ಲಿ ನಿಲ್ಲುತ್ತವೆ. ಈಶಾನ್ಯ ಭಾರತದಲ್ಲಿಯೇ ಗೌಹಾತಿ ಅತಿ ದೊಡ್ಡ ರೈಲ್ವೇ ನಿಲ್ದಾಣ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕುಂಭಿರ್ಗ್ರಾಮ್ ನಲ್ಲಿರುವ ಸಿಲಚಾರ್ ವಿಮಾನನಿಲ್ದಾಣ ಹಫ್ಲೊಂಗ್ ಗೆ ಹತ್ತಿರದಲ್ಲಿದೆ. ಸಿಲಚಾರ್ ನಿಲ್ದಾಣ ಹಫ್ಲೊಂಗ್ ನಿಂದ 106 ಕಿಮೀ ದೂರದಲ್ಲಿದೆ. ಗೌಹಾತಿ, ದಿಬ್ರಾಘರ್ ಮತ್ತು ಕೋಲ್ಕತ್ತಾ ನಗರಗಳಿಂದ ಸಿಲಚಾರ್ ವಿಮಾನನಿಲ್ದಾಣಕ್ಕೆ ನಿರಂತರ ವಿಮಾನ ಸಂಪರ್ಕವಿದೆ. ಇಲ್ಲಿಂದ ಮುಂದೆ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೂ ವಿಮಾನ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Sep,Thu
Return On
20 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Thu
Check Out
20 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Thu
Return On
20 Sep,Fri
 • Today
  Haflong
  25 OC
  76 OF
  UV Index: 5
  Patchy rain possible
 • Tomorrow
  Haflong
  18 OC
  65 OF
  UV Index: 5
  Patchy rain possible
 • Day After
  Haflong
  19 OC
  66 OF
  UV Index: 5
  Patchy rain possible

Near by City