Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ವರ್ಡ್ಸ್ ಸರೋವರ

ವರ್ಡ್ಸ್ ಸರೋವರ, ಶಿಲ್ಲಾಂಗ್

1

ಪಟ್ಟಣದ ಹೃದಯ ಭಾಗದಲ್ಲಿರುವ ವರ್ಡ್ಸ್ ಸರೋವರವು ಬಹುಶಃ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ತಾಣವಾಗಿದೆ.  ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ಕಿಕ್ಕಿರಿದು ತುಂಬಿರುವ ಸ್ಥಳೀಯರಿಗೂ ಇದು ಜನಪ್ರಿಯ ತಾಣ.  ಬ್ರಿಟಿಷರ ಆಡಳಿತಾವಧಿಯ ಕಾಲದಲ್ಲಿ ನಿರ್ಮಾಣಗೊಂಡ ಈ ಸರೋವರವು ಅಸ್ಸಾಂ ನ ಮುಖ್ಯ ಕಮಿಷನರ್ ಆದ ಸರ್ ವಿಲಿಯಂ ವರ್ಡ್ ಅವರ ತರುವಾಯ ನಾಮಾಂಕಿತಗೊಂಡಿದೆ.  ಕುದುರೆ ಲಾಳಾಕೃತಿಯ ಈ ಸರೋವರವು ಒಂದು ಕಾಲದಲ್ಲಿ ಸರ್ಕಾರಿ ನಿವಾಸ ಅಥವಾ ರಾಜಭವನದ ಒಂದು ಭಾಗವಾಗಿದ್ದು, ಪ್ರಕೃತಿ ಮನೋಹರ ತಾಣಕ್ಕೆ ತಕ್ಕ ಸ್ಥಳವಾಗಿದೆ.  ಪುರಾಣದ ಪ್ರಕಾರ, ಈ ಸುಂದರ ಸರೋವರವು ಕಾಶಿಯ ಖೈದಿಯೊಬ್ಬನಿಂದ, ಆತನ ಸೆರೆವಾಸದ ಬಿಡುಗಡೆಯ ಕೋರಿಕೆಯ ಮೇರೆಗೆ, ಅದರ ಪ್ರತಿಫಲದ ರೂಪದಲ್ಲಿ ನಿರ್ಮಾಣಗೊಂಡಿತು.  ಆತನ ಕೆಲಸದ ಆರಂಬಿಕ ಹಂತವು, ಅಲ್ಲಿನ ಆಡಳಿತಾಧಿಕಾರಿಗಳಿಗೆ ಸುತ್ತಲೂ ಉತ್ತಮ ಬಯಲನ್ನು ನಿರ್ಮಿಸಲು ಪ್ರೇರೇಪಿಸಿದವು.  ಸ್ಥಳೀಯರು ಈ ಸರೋವರವನ್ನು ನಾನ್ ಪೊಲೊಕ್ ‘Nan Polok’ ಅಥವಾ ಪೊಲೊಕ್ ಕೆರೆ ‘Polok Lake’ ಎಂದು ಕರೆಯುತ್ತಾರೆ.

ಆಧುನಿಕ ಶತಮಾನದ ಆದಿಭಾಗದಲ್ಲಿ ಶಿಲ್ಲಾಂಗ್ ಪಟ್ಟಣವು ಈ ಸರೋವರದ ಸುತ್ತಲೂ, ಸುವರ್ಣ ಸೇತುವೆಯೊಂದಿಗೆ ನಿರ್ಮಿಸಲ್ಪಡಲು ಯೋಜನೆ ರೂಪುಗೊಂಡಿತ್ತು.  ಸರೋವಕ್ಕೆ ತಾಗಿಕೊಂಡಂತೆ ಇರುವ ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ ಕೆಲವು ಅಪರೂಪದ ಸಸ್ಯ ವರ್ಗಗಳು ಪ್ರಾವಾಸಿಗರಿಗೆ ನೋಡಸಿಗುತ್ತವೆ.  ಬಯಲಿನಲ್ಲಿರುವ ವಿವಿಧ ಸುಂದರ ಹೂಗಳು ಮತ್ತು ಶಿಲಾಮಾರ್ಗವು ಇಲ್ಲಿನ ಅಂದವನ್ನು ನೂರ್ಮಡಿಗೊಳಿಸುತ್ತವೆ.  ಸರೋವರಕ್ಕೆ ಇತ್ತೀಚೆಗೆ ಅಳವಡಿಸಿರುವ ಬೆಳಕು ಮತ್ತು ಧ್ವನಿಯು ಸಂಜೆಯ ವೇಳೆಯ ಪ್ರಧಾನ ಆಕರ್ಷಣೆ.  ವರ್ಡ್ಸ್ ಸರೋವರಕ್ಕೆ ಭೇಟಿ ನೀಡುವ ಯಾರೊಬ್ಬರೂ ಕೂಡ ದೋಣಿವಿಹಾರದಿಂದ ವಂಚಿತರಾಗಬಾರದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri