Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಲೇಡಿ ಹೈದರಿ ಪಾರ್ಕ್

ಲೇಡಿ ಹೈದರಿ ಪಾರ್ಕ್, ಶಿಲ್ಲಾಂಗ್

1

ಲೇಡಿ ಹೈದರಿ ಪಾರ್ಕ್ ಒಂದು ಎಂತಹ ಪ್ರವಾಸಿ ತಾಣವೆಂದರೆ, ಯಾವೊಬ್ಬ ಪ್ರವಾಸಿಗನೂ ಕೂಡ ಇಲ್ಲಿಗೆ ಭೇಟಿ ಕೊಡದೆ ಹಿಂತಿರುಗಲಾರನು/ಳು.  ವರ್ಷವಿಡಿ ಅರಳುವ ವರ್ಣಮಯ ಹೂವುಗಳಿಂದ ಶೋಭಿತವಾದ ಈ ಹಚ್ಚ ಹಸುರಿನ ಉದ್ಯಾನವು ಇದಕ್ಕೆ ತಾಗಿಕೊಂಡಂತೆ ಇರುವ ಸಣ್ಣ ಜೂ ನಲ್ಲಿರುವ ಜಿಂಕೆಯ ಉದ್ಯಾನವು, ಲೇಡಿ ಹೈದರಿ ಪಾರ್ಕ್ ಅನ್ನು ಮೋಜಿನ ತಾಣವನ್ನಾಗಿಸುತ್ತದೆ.  ಪ್ರವಾಸಿಗರು ಮತ್ತು ಸ್ಥಳೀಯರು ಗಂಟೆಗಟ್ಟಲೆ, ಉದ್ಯಾನವನದಲ್ಲಿ ಕಾಲಕಳೆಯಬಹುದಾದರೆ, ಚಿಕ್ಕ ಮಕ್ಕಳು ಅಲ್ಲಿಯೇ ಇರುವ ವಿಶಾಲ ಆವರಣದಲ್ಲಿ ಓಡಾಡಿಕೊoಡಿರಬಹುದು, ವಿಶೇಷವಾದ ಆಟದ ಸ್ಥಳದಲ್ಲಿ ಆಡಬಹುದು, ಅದೇ ಕಾಲಕ್ಕೆ ವಯಸ್ಕರು, ಸುಂದರವಾಗಿ ವಿನ್ಯಾಸಗೊಳಿಸಿದ ಹಸಿರಿನ ಮೇಲೆ ಕುಳಿತು ಪ್ರಕೃತಿಯನ್ನು ಸವಿಯಬಹುದು.

ಈ ಉದ್ಯಾನದ ಕುರಿತು ನಾವು ಕೃತಜ್ಞರಾಗಿರಲೇಬೇಕಾದದ್ದು, ಬ್ರಿಟಿಷರ ಆಳ್ವಿಕೆಯ ಅವಧಿಯ, ಪ್ರಕೃತಿಯ ಆರಾಧಕಳಾದ, ಅಸ್ಸಾಂ ರಾಜ್ಯದ ಪ್ರಥಮ ಮಹಿಳೆ, ಲೇಡಿ ಹೈದರಿ ಯವರ ಪ್ರಯತ್ನಗಳಿಗೆ.  ಇವರು ಅಸ್ಸಾಂನ ಗವರ್ನರ್ ನ ಪತ್ನಿಯಾಗಿದ್ದಳು.  ಜಪಾನೀ ಶೈಲಿಯಲ್ಲಿ ಸಿದ್ಧಗೊಂಡಿರುವ ಈ ಉದ್ಯಾನವು ಚಿಕ್ಕ ಜೂ ಮತ್ತು ಹೂಗಿಡಗಳ ಸಾಲುಗಳೊಂದಿಗೆ, ಅಪಾರ ಹಸಿರು ಹೊದಿಕೆಯನ್ನು ಕೂಡ ಹೊಂದಿದೆ.  ಕೇವಲ ಜಿಂಕೆಗಳು ಮಾತ್ರವಲ್ಲದೇ, ಈ ಜೂ, ಅನೇಕ ಪಕ್ಷಿ ಪ್ರಬೇಧಗಳು, ಸರೀಸೃಪಗಳು, ಮತ್ತು ಸಸ್ತನಿಗಳ ವಾಸಸ್ಥಾನವೂ ಹೌದು.

ಲೇಡಿ ಹೈದರಿ ಉದ್ಯಾನವು ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿದೆ.  ಇಲ್ಲಿನ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ, ಇಲ್ಲಿರುವ ತರಹೇವಾರಿ ಗುಲಾಬಿ ಹೂಗಳು.  ಕ್ರಿನೋಲೈನ್ ಸ್ವಿಮ್ಮಿಂಗ್ ಪೂಲ್ ಎಂಬುದು, ಉದ್ಯಾನಕ್ಕೆ ಹತ್ತಿರದಲ್ಲಿರುವ, ನಗರದ ಏಕಮಾತ್ರ ಸಾರ್ವಜನಿಕ ಈಜುಕೊಳವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue