Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಎಲಿಫೆಂಟ್ ಜಲಪಾತ - ಮೂರು ಹಂತದ ಜಲಪಾತ

ಎಲಿಫೆಂಟ್ ಜಲಪಾತ - ಮೂರು ಹಂತದ ಜಲಪಾತ, ಶಿಲ್ಲಾಂಗ್

7

ನಗರದ ಹೃದಯ ಭಾಗದಿಂದ 8 ಕಿ. ಮೀ. ದೂರದಲ್ಲಿರುವ ಎಲಿಫೆಂಟ್ ಜಲಪಾತವು ಅತಿ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದಾಗಿದೆ.  ನಗರದಿಂದ ಜಲಪಾತದೆಡೆಗೆ ಪಯಣಿಸುವಾಗ, ಅತಿ ರಮಣೀಯವಾದ ರಸ್ತೆಯ ಮೂಲಕ ಸಾಗಬೇಕಾಗಿದ್ದು , ಮೇಘಾಲಯ ರಾಜ್ಯದ ಪ್ರಾಕೃತಿಕ ಸೌoದರ್ಯವನ್ನು ಸವಿಯಬಹುದು.  ಜಲಪಾತದ ಸ್ಥಳೀಯ ಹೆಸರು ಕಾ ಕ್ಷೈದ್ ಲೈ ಪತೇಂಗ್ ಖೊಹಸೀವ್ (Ka Kshaid Lai Pateng Khohsiew) ಎಂದಾಗಿದ್ದು, ಇದರ ಭಾವಾರ್ಥವು ಮೂರು ಹಂತದ ಜಲಪಾತ ಎಂದಾಗಿದೆ.  ಕಾರಣ ಈ ಜಲಪಾತವು ಮೂರು ಹಂತವನ್ನು ಹೊಂದಿದೆ.  ಈ ಜಲಪಾತದ ಬಂಡೆಯೊಂದು ಆನೆಯನ್ನು ಹೋಲುವುದರಿಂದ, ಬ್ರಿಟಿಷರು ಈ ಜಲಪಾತವನ್ನು ಎಲಿಫೆಂಟ್ ಜಲಪಾತವೆಂದು ಹೆಸರಿಸಿದರು.  ಈ ಬಂಡೆಯ ಒಂದು ಭಾಗವು 1897 ರಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ  ಭೂಕಂಪದ ಕಾರಣ ನಾಶಗೊಂಡಿದೆ.  ಕಪ್ಪು ಬಂಡೆಗಳ ಮೇಲೆ ಹರಿಯುವ ಹಾಲಿನಂತಹ ನೀರು ಈ ಜಲಪಾತದ ವಿಶೇಷ.

ಎಲಿಫೆಂಟ್ ಜಲಪಾತ ಪ್ರದೇಶವು ಜೀವ ವೈವಿಧ್ಯಕ್ಕೆ ಸಾಕ್ಷೀಭೂತವಾಗಿದ್ದು, ವಿವಿಧ ಪ್ರಭೇಧಕ್ಕೆ ಸೇರಿರುವ ಸಸ್ಯ ಸಂಕುಲಗಳು ಇಲ್ಲಿವೆ ಮತ್ತು ಕೆಲವು ಪ್ರಭೇಧಗಳು ಈ ಪ್ರದೇಶದಲ್ಲಿ ಮಾತ್ರವೇ ಕಂಡು ಬರುವಂತವು.  ಈ ಪ್ರಾಂತದಲ್ಲಿ ಸ್ಥಳೀಯ ಮಹಿಳೆಯರಿಂದ ನಡೆಸಲ್ಪಡುವ ಅನೇಕ ಅಂಗಡಿಗಳಿದ್ದು, ಇವರು ಇಲ್ಲಿ, ಆ ರಾಜ್ಯದ ಮತ್ತು ಸ್ಥಳೀಯವಾದ ಅನೇಕ ಸುಂದರ, ನಾಜೂಕಾದ ಕರಕುಶಲ ವಸ್ತುಗಳ್ಳನ್ನು ಮಾರುತ್ತಾರೆ.  ಓರ್ವ ಪ್ರವಾಸಿಗರಾಗಿ, ನೀವು ಇಲ್ಲಿನ ಸ್ಥಳೀಯ ಉಡುಪನ್ನು ಧರಿಸಿ ಒಂದು ಛಾಯಾಚಿತ್ರವನ್ನು ತೆಗೆಸಲೇ ಬೇಕು.  ಜಲಪಾತ ಸುತ್ತಲೂ ಇರುವ ಬಂಡೆಗಳನ್ನೇರಲು ಚಾರಣಿಗರಿಗೆ ಇದು ಮಹೋನ್ನತ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue