Search
 • Follow NativePlanet
Share
ಮುಖಪುಟ » ಸ್ಥಳಗಳು» ಅಗರ್ತಲಾ

ಅಗರ್ತಲಾ - ಅರಮನೆ ಮತ್ತು ದೇವಾಲಯಗಳ ನೆಲೆ /ಭೂಮಿ

37

ಬಹಳಷ್ಟು ಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಬೆಟ್ಟದ ತಪ್ಪಲನ್ನು ಏರುವುದು, ಚಾರಣ ಇಂತಹ ಚಟುವಟಿಕೆಗಳಲ್ಲಿ ಇನ್ನಿಲ್ಲದ ಆಸಕ್ತಿ. ಅದಕ್ಕಾಗಿ ಅವರು ಯಾವುದೇ ಸ್ಥಳಕ್ಕೆ ಹೋಗಲು ಹಿಂಜರಿಯುವುದಿಲ್ಲ. ಇಂತಹ ಸಾಹಸಿಗಳಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ನಮ್ಮ ಸ್ಥಳದ ಆಯ್ಕೆ, ತ್ರಿಪುರಾದ ಅಗರ್ತಲಾ. ಇಲ್ಲಿ ಸಾಕೆಂದರೂ ಮುಗಿಯದಷ್ಟು ಪ್ರವಾಸಿ ತಾಣಗಳಿವೆ!

ಮತ್ತೆ ಮತ್ತೆ ನೋಡಬೇಕೆನಿಸುವ ಹಚ್ಚ ಹಸುರಿನ ಬೆಟ್ಟಗಳಿವೆ. ಇಂತಹ ಅದ್ಭುತ ಸ್ಥಳಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು. ಇಲ್ಲಿ ಯಾವುದೇ ವಯಸ್ಸಿನ ಭೇದವಿಲ್ಲದೇ ಎಲ್ಲಾ ವಯಸ್ಸಿನವರು ಅನುಭವಿಸುವಂತಹ ಮನೋರಂಜನೆಗಳು ಸಾಕಷ್ಟಿವೆ. ಇಲ್ಲಿನ ಸರೋವರಗಳು, ಉದ್ಯಾನಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈ ಸೌಂದರ್ಯದ ಗಣಿ ಅಗರ್ತಲಾ ನಗರದ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ:

ಭಾರತದ ಈಶಾನ್ಯ ಭಾಗದಲ್ಲಿ ಗೌಹಾತಿಯ ನಂತರದ ಅತ್ಯಂತ ಪ್ರಮುಖ ನಗರ ಎಂದು ಹೆಸರಿಸುವುದಾದರೆ ಅದೇ ತ್ರಿಪುರಾದ ರಾಜಧಾನಿ ಅಗರ್ತಲಾ ನಗರ. ಅಗರ್ತಲಾ, ಪುರಸಭಾ ಪ್ರದೇಶ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಈ ಪ್ರದೇಶದ ಎರಡನೇ ದೊಡ್ಡ ನಗರವಾಗಿದೆ. ಬಾಂಗ್ಲಾದೇಶದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿದೆ ಅಗರ್ತಲಾ. ಅಗರ್ತಲಾ ಒಂದು ಸಾಂಸ್ಕೃತಿಕ ಕೇಂದ್ರವೂ ಆಗಿದೆ.

ಅಗರ್ತಲಾ ಪಶ್ಚಿಮ ತ್ರಿಪುರದಲ್ಲಿದೆ ಮತ್ತು ಹರೋವಾ ನದಿ ಈ ನಗರವನ್ನು ದಾಟಿ ಮುಂದೆ ಸಾಗುತ್ತದೆ. ಈ ನಗರದಲ್ಲಿ, ಮನೋರಂಜನೆ, ಸಾಹಸ ಮತ್ತು ಸಂಸ್ಕೃತಿ ಎಲ್ಲವು ಒಗ್ಗೂಡಿ ಇದನ್ನು ಒಂದು ಉತ್ತಮ ನಗರವನ್ನಾಗಿಸಿವೆ. ಪ್ರಾಣಿ ಹಾಗು ಸಸ್ಯಗಳ ಸಂಪತ್ತು ಇಲ್ಲಿ ಉತ್ಕೃಷ್ಟವಾಗಿದ್ದು, ಅಗರ್ತಲಾ ಪ್ರವಾಸೋದ್ಯಮದಲ್ಲಿ ಆಸಕ್ತಿಯನ್ನುಂಟುಮಾಡುವ ಹಲವು ವಿಷಯಗಳಲ್ಲಿ ಸೇರ್ಪಡೆಯಾಗುತ್ತದೆ!

ಭೌಗೋಳಿಕವಾಗಿಯೂ ಕೂಡ, ಅಗರ್ತಲಾ ಸ್ಥಳವು, ಈ ಪ್ರದೇಶದ ಇತರ ರಾಜ್ಯಗಳ ರಾಜಧಾನಿಗಳಿಗಿಂತ ಸ್ವಲ್ಪ ಭಿನ್ನವಾಗಿದೆ ಮತ್ತು ಬಾಂಗ್ಲಾ ದೇಶ ತಲುಪುವ ಮಹಾನ್ ಗಂಗಾ-ಬ್ರಹ್ಮಪುತ್ರ ನದಿ ಬಯಲು ಪ್ರದೇಶದ ಪಶ್ಚಿಮ ತುದಿಯಲ್ಲಿದೆ. ಅಗರ್ತಲಾದಲ್ಲಿರುವ ಹೇರಳವಾದ ಅರಣ್ಯರಾಶಿ, ಪ್ರದೇಶದ ಪ್ರವಾಸೋದ್ಯಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ರಾಜ್ಯದ ರಾಜಧಾನಿಯಾಗಿದ್ದರೂ ಕೂಡ, ಅಗರ್ತಲಾ ವಿಶ್ರಮಿಸಬಹುದಾದಂತಹ ನಗರವಾಗಿದೆ. ಸಾಮಾನ್ಯವಾಗಿ ನಾವು ಒಂದು ದೊಡ್ಡ ನಗರದಲ್ಲಿ ವಾಸಿಸುತ್ತೇವೆ. ಅದರಲ್ಲೂ ಗದ್ದಲ ಗಲಾಟೆಗಳ ನಡುವೆ ದೊಡ್ಡ ನಗರದ ಜತೆಗೂಡಿದ್ಡೇವೆ. ಆದರೆ ಅಗರ್ತಲಾ ತನ್ನ ಪ್ರಶಾಂತ ಪರಿಸರ, ಪ್ರಶಾಂತ ವಾತಾವರಣ ಇವೆಲ್ಲವೂ ಸಂಸ್ಕೃತಿ, ಮತ್ತು ನಿಸರ್ಗದ ನಡುವೆ ಒಂದು ಪರಿಪೂರ್ಣ ರಜೆ ಕಳೆಯಲು ಸಂಯೋಜಿತ ಸ್ಥಳವಾಗಿದೆ.

ಅಗರ್ತಲಾದ ಸಂಕ್ಷೀಪ್ತ ಇತಿಹಾಸ

ಮಹಾರಾಜ ಕೃಷ್ಣ ಮಾಣಿಕ್ಯ, 19 ಶತಮಾನದಲ್ಲಿ ಮಾಣಿಕ್ಯ ರಾಜವಂಶದ ರಾಜಧಾನಿ, ಉದೈಪುರದ ರಂಗಮತಿಯನ್ನು ಈಗಿನ ಅಗರ್ತಲಾ, ಅಂದಿನ ದಕ್ಷಿಣ ತ್ರಿಪುರಾಕ್ಕೆ  ಸ್ಥಳಾಂತರಿಸಲಾಯಿತು. ಆನಂತರದಲ್ಲೇ ಅಗರ್ತಲಾ ಬೆಳಕಿಗೆ ಬಂದಿದ್ದು! ಕುಕಿಗಳ ಸತತ ದಾಳಿಯಿದ ರಾಜ್ಯದಲ್ಲಿ ಸಮಸ್ಯೆಗಳಾಗಿ ರಾಜಧಾನಿಯನ್ನು ಬದಲಾಯಿಸಲಾಯಿತು. ಸ್ಥಳಾಂತರಕ್ಕೆ ಇನ್ನೊಂದು ಕಾರಣವೆಂದರೆ, ಮಹಾರಾಜನು ತನ್ನ ಸಾಮ್ರಾಜ್ಯ ಮತ್ತು ನೆರೆ ಪ್ರದೇಶ ಬ್ರಿಟಿಷ್ ಬಂಗಾಳದ ನಡುವೆ ಸಂವಹನ ಸೇತುವೆ ನಿರ್ಮಿಸಲು ಯೋಚಿಸಿದ್ದುದು! 1940 ರಲ್ಲಿ, ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್, ನಗರವನ್ನು ಮರುಸಂಘಟಿಸಲು ಯೋಜನೆ ರೂಪಿಸಿ ನಂತರ ಅದರ ಪ್ರಸ್ತುತ ರೂಪವನ್ನು ನೀಡಿದರು. ಯೋಜಿತ ರಸ್ತೆಗಳು, ಮಾರುಕಟ್ಟೆ ಕಟ್ಟಡ ಮತ್ತು ಒಂದು ಪುರಸಭೆ ಈ ನಗರದ ಒಂದು ಭಾಗವಾಯಿತು. ಅವರ ಕೊಡುಗೆ ಕಾರಣ, ಅಗರ್ತಲಾವನ್ನು 'ಬೀರ್ ಬಿಕ್ರಮ್ ಮಾಣಿಕ್ಯ ಬಹದ್ದೂರ್ ನಗರ' ಎಂದೂ ಕರೆಯುತ್ತಾರೆ.

ಒಂದು ಸಾಮ್ರಾಜ್ಯದ ರಾಜಧಾನಿ ಮತ್ತು ಬಾಂಗ್ಲಾದೇಶದ ಸಾಮೀಪ್ಯದಿಂದಾಗಿ, ಅಗರ್ತಲಾ ಹಿಂದೆ ಅನೇಕ ಹೆಸರಾಂತ ವ್ಯಕ್ತಿಗಳ ಹೆಸರನ್ನು ತನ್ನೊಂದಿಗೆ ಅಚ್ಚಾಗಿಸಿದೆ. ರವೀಂದ್ರನಾಥ ಟ್ಯಾಗೋರ್ ಅಗರ್ತಲಾಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರು ಮತ್ತು ತ್ರಿಪುರ ರಾಜರೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರು ಎಂದು ನಂಬಲಾಗಿದೆ.

ಅಗರ್ತಲಾ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಅಗರ್ತಲಾ ನಗರದ ಸುತ್ತ ಆಸಕ್ತಿದಾಯಕ ಅನೇಕ ಪ್ರವಾಸಿ ಸ್ಥಳಗಳಿವೆ. ಅಗರ್ತಲಾ ಹಳೆಯ, ಖ್ಯಾತಿವೆತ್ತ ಪರಂಪರೆ ಉಳಿಸಿಕೊಂಡು ಸಲೀಸಾಗಿ ಆಧುನಿಕತೆಗೂ ಅವಕಾಶ ಮಾಡಿಕೊಟ್ಟ ಈಶಾನ್ಯದ ಕೆಲವು ನಗರಗಳಲ್ಲಿ ಒಂದಾಗಿದೆ. ನಗರವು ಅರಮನೆಗಳು ಮತ್ತು ವೈಭವದ ಎಸ್ಟೇಟ್ ಗಳಿಂದ ತುಂಬಿದೆ. ಇಲ್ಲಿ ಆಧುನಿಕತೆಯನ್ನು ಬಿಂಬಿಸುವ ರಂಗುರಂಗಾದ ಕಟ್ಟಡಗಳು ಅಣ್ಬೆಗಳಂತೆ ತಲೆ ಏತ್ತುತ್ತಿರುವುದನ್ನು ಕಾಣಬಹುದು. ಅಗರ್ತಲಾ ಭೇಟಿ ಸಂದರ್ಭದಲ್ಲಿ, ಈ ಕೆಳಗಿನ ಸ್ಥಳಗಳಿಗೆ ಭೇಟಿ ನೀಡುವುದು ಅತ್ಯಗತ್ಯ.

ಉಜ್ಜಯಂತಾ ಅರಮನೆ:

ಉಜ್ಜಯಂತಾ ಅರಮನೆ ಮಹಾರಾಜ ರಾಧಾ ಕಿಶೋರ್ ಮಾಣಿಕ್ಯ ಅವರಿಂದ ಕಟ್ಟಲ್ಪಟ್ಟಿದೆ. ಅಗರ್ತಲಾದಲ್ಲಿ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣವಾಗಿದೆ. ಈ ಅರಮನೆಯ ನಿರ್ಮಾಣ 1901ರಲ್ಲಿ ಪೂರ್ಣಗೊಂಡಿತು ಮತ್ತು ಇಂದು ಇದು ರಾಜ್ಯದ ವಿಧಾನಸಭೆಯಾಗಿ ಬಳಸಲ್ಪಡುತ್ತಿದೆ.

ನೀರ್ಮಹಲ್/ ನೀರಮಹಲ್:

ನಗರದಿಂದ 53 ಕಿಲೋಮೀಟರ್ ಗಳಷ್ಟು ದೂರವಿರುವ ನೀರ್ ಮಹಲ್ ರಾಜ, ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ನಿರ್ಮಿಸಿದ ಭವ್ಯವಾದ ಅರಮನೆ. ನೀರ್‌‌‌‌‌‍ಮಹಲ್ ಮಹಾರಾಜರ ಬೇಸಿಗೆಯ ರೆಸಾರ್ಟ್ (ವಿಶ್ರಾಂತಿ ಗೃಹ) ಆಗಿ ಬಳಸಲಾಗುತ್ತಿತ್ತು. ಇದು ರುದ್ರಸಾಗರ ಸರೋವರದ ನಡುವೆ ಇದೆ. ಇದರ ವಿನ್ಯಾಸ ಇಸ್ಲಾಂ ಮತ್ತು ಹಿಂದೂ ವಾಸ್ತು ಲಕ್ಷಣಗಳ ಸಂಯೋಜನೆಯಾಗಿದೆ.

ಜಗನ್ನಾಥ ದೇವಾಲಯ:

ಅಗರ್ತಲಾದ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾದ ಜಗನ್ನಾಥ ದೇವಾಲಯ, ಅದ್ಭುತ ವಾಸ್ತುಶಿಲ್ಪವನ್ನೂ ಹೊಂದಿದೆ. ಅಷ್ಟಭುಜಾಕೃತಿಯಲ್ಲಿರುವ ಈ ದೇವಾಲಯದ ಸುತ್ತಲೂ ಆಕರ್ಷಕ ಪ್ರದಕ್ಷಿಣಾ ಪಥವನ್ನು ಕಾಣಬಹುದಾಗಿದೆ.

ಮಹಾರಾಜ ಬೀರ್ ಬಿಕ್ರಮ ಕಾಲೇಜ್:

ಹೆಸರೇ ಹೇಳುವಂತೆ ಈ ಕಾಲೇಜನ್ನು ನಿರ್ಮಿಸಿದವರು ಮಹಾರಾಜ ಬೀರ್ ಬಿಕ್ರಮ್. ಮಹಾರಾಜರು, ಸ್ಥಳೀಯ ಪ್ರದೇಶದ ಯುವಕರಿಗೆ ವೃತ್ತಿಪರ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಕಾಲೇಜನ್ನು ಸ್ಥಾಪಿಸಿದರು. ಈ ಕಾಲೇಜ್ ಅನ್ನು 1947ರಲ್ಲಿ ಸ್ಥಾಪಿಸಲಾಯಿತು.

ಲಕ್ಷ್ಮಿ ನಾರಾಯಣ ದೇವಾಲಯ:

ಹಿಂದೂಗಳು ಹೆಚ್ಚಾಗಿ ಭೇಟಿ ನೀಡುವ, ಅಗರ್ತಲಾ ನಗರದ ಜನಪ್ರಿಯ ಪ್ರವಾಸಿ ತಾಣಗಳ ನಡುವೆ ಒಂದೆಂದು ಪರಿಗಣಿಸಲಾಗಿರುವ  ಮತ್ತೊಂದು ದೇವಸ್ಥಾನ. ಲಕ್ಷ್ಮಿ ನಾರಾಯಣ ದೇವಾಲಯವನ್ನು ನಿರ್ಮಿಸಿದವರು ಕೃಷ್ಣಾನಂದ ಸೇವಾಯತ್ ಎಂಬುವವರು.

ರವೀಂದ್ರ ಕಾನನ್:

ರಾಜ್ ಭವನ ಪಕ್ಕದಲ್ಲಿ ಇರುವ ರವೀಂದ್ರ ಕಾನನ್ ನಲ್ಲಿ ಸೊಂಪಾದ ಹಸಿರು ಉದ್ಯಾನ ವಿಸ್ತೃತವಾಗಿ ಹರಡಿದೆ. ಮನೋರಂಜನೆಗಾಗಿ ಅನೇಕರು ವಯಸ್ಸಿನ ಭೇದವಿಲ್ಲದೆ ಉತ್ತಮ ಸಮಯವನ್ನು ಕಳೆಯಲು ಈ ಉದ್ಯಾನಕ್ಕೆ ಆಗಮಿಸುತ್ತಿರುತ್ತಾರೆ.

ಅಗರ್ತಲಾ ಅತ್ಯಂತ ವೇಗದಿಂದ ಆಧುನಿಕ ನಗರವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಪಡೆಯುವುದು ಕಷ್ಟವೆನಲ್ಲ. ವಿಶ್ವದರ್ಜೆಯ ಉತ್ತಮ ತಿನಿಸುಗಳು ಮತ್ತು ಅಗ್ಗವಾದ ವಸತಿ ಸೌಕರ್ಯಗಳು ಎಲ್ಲವೂ ಅಗರ್ತಲಾ ಪ್ರವಾಸೋದ್ಯಮ ಸುಲಭ ಮಾಡುವ ನಗರದ ಹೃದಯಭಾಗದಲ್ಲಿವೆ. ಇಲ್ಲಿ ಉಪಾಹರಗೃಹಗಳು ಕೈಗೆಟುಕುವ ದರದಲ್ಲಿ ಕಾಂಟಿನೆಂಟಲ್, ಚೀನೀ ಹಾಗೆಯೇ ಭಾರತೀಯ ಪಾಕಪದ್ಧತಿಗಳ ಸೇವೆ ಕೂಡ ಇಲ್ಲಿ ಲಭ್ಯ. ಇಲ್ಲಿ ಹೋಟೆಲ್ ಗಳು ತುಂಬಾ ಯೋಗ್ಯವಾದ ಇನ್ನೂ ಹೆಚ್ಚು ಲಭ್ಯವಿರುವ ಮೂಲಭೂತ ಸೇವೆಗಳನ್ನು ಹೊಂದಿವೆ.

ಕಳೆದ ಕೆಲವು ವರ್ಷಗಳಿಂದ, ಅಗರ್ತಲಾ ಈಶಾನ್ಯದಲ್ಲಿ ನಿಯಮಿತವಾಗಿ ಅಕ್ಕಿ, ತೈಲ ಬೀಜಗಳು, ಚಹಾ ಮತ್ತು ಸೆಣಬು ಮೊದಲಾದವುಗಳ ವ್ಯಾಪಾರಗಳಿಂದಾಗಿ ಒಂದು ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಿದೆ. ನಗರವು ಪ್ರವಾಸಿಗರು, ಭೇಟಿ ನೀಡಲೇಬೇಕಾದಂತಹ ಕೆಲವು ಪ್ರವರ್ಧಮಾನ (ಅಭಿವೃದ್ಧಿ ಶೀಲ) ಮಾರುಕಟ್ಟೆ ಪ್ರದೇಶಗಳನ್ನು ಹೊಂದಿದೆ. ಮೇಲೆ ತಿಳಿಸಿದ ಉತ್ಪನ್ನಗಳ ಹೊರತಾಗಿ, ಈ ಮಾರುಕಟ್ಟೆಗಳಲ್ಲಿ ವಿವಿಧ ಕರಕುಶಲ ಮತ್ತು ಉಣ್ಣೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

ಅಗರ್ತಲಾ ಪ್ರಸಿದ್ಧವಾಗಿದೆ

ಅಗರ್ತಲಾ ಹವಾಮಾನ

ಅಗರ್ತಲಾ
25oC / 77oF
 • Mist
 • Wind: N 0 km/h

ಉತ್ತಮ ಸಮಯ ಅಗರ್ತಲಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಗರ್ತಲಾ

 • ರಸ್ತೆಯ ಮೂಲಕ
  ಅಗರ್ತಲಾ ಹಾಗೂ ಅಸ್ಸಾಂ ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 44 ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 44 ಮತ್ತು 44ಎ, ಸಿಲ್ಚಾರ್, ಗೌಹಾತಿ ಮತ್ತು ಶಿಲಾಂಗ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಬಸ್ ಸೇವೆಗಳಿವೆ. ಬಸ್ ಗಳ ಹೊರತಾಗಿ , ಖಾಸಗಿ ಟ್ಯಾಕ್ಸಿಗಳು ಕೂಡ ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಗರ್ತಲಾ ರೈಲ್ವೆ ನಿಲ್ದಾಣ, ನಗರದಿಂದ 5.5 ಕಿ. ಮೀ ದೂರದಲ್ಲಿದೆ. ರೈಲಿನಲ್ಲಿ ಅಗರ್ತಲಾಗೆ ತಲುಪಲು ಬಯಸುವಿರಾದರೆ ಗೌಹಾತಿ ತನಕ ಪ್ರಯಾಣ ಮಾಡಿ ಅಲ್ಲಿಂದ ಮುಂದೆ ಬ್ರಾಡ್‍ಗೇಜ್ ಲೈನಿನ ಮೂಲಕ ಲುಮ್ಡಿಂಗ್‍ಗೆ ಪ್ರಯಾಣಿಸಬೇಕು. ಲುಮ್ಡಿಂಗ್ ನಿಂದ ಅಗರ್ತಲಾ ತಲುಪಲು ರಾತ್ರಿಪೂರ್ತಿ ಪ್ರಯಾಣದ ಎಕ್ಸ್ಪ್ರೆಸ್ ರೈಲು ಲಭ್ಯ. ಇದನ್ನು ಹೊರತುಪಡಿಸಿದರೆ ಪರ್ಯಾಯ ಮಾರ್ಗವೆಂದರೆ ದಕ್ಷಿಣ ಅಸ್ಸಾಂನ ಸಿಲ್ಚಾರ್ ನಿಂದ ನೇರ ರೈಲಿನ ಮೂಲಕವೂ ಅಗರ್ತಲಾಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಅಗರ್ತಲಾ ಒಂದು ಪೂರ್ಣ ಕಾರ್ಯಾಚರಣೆಯ ಸಿಂಗರ್ಭಿಲ್/ಸಿಂಗರ್ ಭಿಲ್ ವಿಮಾನ ನಿಲ್ದಾಣವನ್ನು ಹೊಂದಿದೆ. ಇದು ನಗರದಿಂದ 12 ಕಿಲೋಮೀಟರ್ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಗೌಹಾತಿ ಮತ್ತು ಕೋಲ್ಕತಾ ಮೂಲಕ, ದೆಹಲಿ, ಮುಂಬೈ, ಬೆಂಗಳೂರು ನಂತಹ ಎಲ್ಲಾ ಪ್ರಮುಖ ನಗರಗಳ ರಾಷ್ಟ್ರೀಯ ವಿಮಾನಯಾನದ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣದಿಂದ, ನಗರವನ್ನು ತಲುಪಲು ಹಲವಾರು ಟ್ಯಾಕ್ಸಿಗಳು ಮತ್ತು ಸ್ವಯಂ ರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ ಮತ್ತು ಇದು ನಗರ ತಲುಪಲು ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Feb,Sun
Return On
25 Feb,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Feb,Sun
Check Out
25 Feb,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Feb,Sun
Return On
25 Feb,Mon
 • Today
  Agartala
  25 OC
  77 OF
  UV Index: 10
  Mist
 • Tomorrow
  Agartala
  20 OC
  68 OF
  UV Index: 8
  Moderate or heavy rain shower
 • Day After
  Agartala
  19 OC
  66 OF
  UV Index: 9
  Moderate or heavy rain shower

Near by City