Search
 • Follow NativePlanet
Share
ಮುಖಪುಟ » ಸ್ಥಳಗಳು» ಉದಯಪುರ್-ತ್ರಿಪುರಾ

ಉದಯಪುರ್ - ಭಕ್ತಿಪ್ರಧಾನವಾದ ಸರೋವರಗಳ ನಗರ

10

ಭಾರತದ ಈಶಾನ್ಯ ಭಾಗದಲ್ಲಿರುವ ಸಣ್ಣ ರಾಜ್ಯವಾದ ತ್ರಿಪುರಾದ ದಕ್ಷಿಣದಲ್ಲಿರುವ ಪುಟ್ಟ ಆದರೂ ಖ್ಯಾತ ಪಟ್ಟಣ ಉದಯಪುರ್.  ಇದು ದಕ್ಷಿಣ ತ್ರಿಪುರಾದ ಜಿಲ್ಲಾಕೇಂದ್ರವಾಗಿದೆ. ಇದು ರಾಜಸ್ಥಾನದ ಪ್ರಸಿದ್ಧ ಸ್ಥಳವಾದ ಉದಯಪುರ್ ನ ಹೆಸರನ್ನು ಹೊಂದಿದ್ದರೂ, ಪಶ್ಚಿಮದ ಮರಳು ನಾಡಿಗಿಂತ ತುಂಬಾ ಭಿನ್ನವಾಗಿದೆ.

ಉದಯಪುರ್ ಸುತ್ತಲಿನ ಯಾತ್ರಾಸ್ಥಳಗಳು

ಉದಯಪುರ್ ಇಲ್ಲಿನ ದೇವಸ್ಥಾನಗಳಿಗೆ ಪ್ರಖ್ಯಾತವಾಗಿದೆ.  ಇಲ್ಲಿನ ದೇವಿಯಾದ ತ್ರಿಪುರ ಸುಂದರಿ ಹಾಗೂ ಇತರ ದೇವರ ದರ್ಶನಕ್ಕಾಗಿ ಜನಸ್ತೋಮ ನೆರೆದಿರುತ್ತದೆ. ಈ ಜಾಗದ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿ ಕೃತಕ ಸರೋವರಗಳ ನಿರ್ಮಾಣ ಮಾಡಲಾಗಿದ್ದು, ಇದರಿಂದಲೇ ಉದಯಪುರ್ ಗೆ ಸರೋವರಗಳ ನಗರ ಎಂಬ ಪ್ರಖ್ಯಾತಿ ದೊರೆತಿದೆ. ಧನಿ ಸಾಗರ್, ಮಹಾದೇವ್ ದಿಘಿ, ಜಗನ್ನಾಥ್ ದಿಘಿ ಹಾಗೂ ಅಮರ್ ಸಾಗರ್ ಇಲ್ಲಿನ ಕೆಲವು ಸರೋವರಗಳು.

 ಉದಯಪುರ್, ತ್ರಿಪುರಾದಲ್ಲಿನ ಅಗರ್ತಲದ ನಂತರದ ದೊಡ್ಡ ನಗರವಾಗಿದೆ. ಈ ನಗರದ ಮೂಲಕ ಗೋಮತಿ ನದಿಯು ಹರಿಯುತ್ತಿದ್ದು, ಇದು ಇಲ್ಲಿನ ಮಣ್ಣನ್ನು ಫಲಪ್ರದವಾಗಿಸಿ ಕೃಷಿಯೋಗ್ಯವಾಗಿಸುತ್ತದೆ. ಉದಯಪುರ್ ಅಗರ್ತಲದಿಂದ 55 ಕಿಲೋಮೀಟರು ದೂರದಲ್ಲಿದ್ದು, ಇಲ್ಲಿಗೆ  ಖಾಸಗಿ ವಾಹನ ಹಾಗೂ ರಾಜ್ಯ ಸಾರಿಗೆ ಬಸ್ ಮೂಲಕ ತಲುಪಬಹುದಾಗಿದೆ.  

 ಉದಯಪುರ್ ನಲ್ಲಿ ಹಲವಾರು ದೇವಸ್ಥಾನಗಳಿದ್ದು, 1501 ರಲ್ಲಿ ನಿರ್ಮಿಸಿದ್ದ ತ್ರಿಪುರ ಸುಂದರಿ ದೇವಸ್ಥಾನ ಪ್ರಖಾತ ಹಾಗೂ ಅತಿ ಹೆಚ್ಚು ಯಾತ್ರಿಗಳು ಭೇಟಿ ಕೊಡುವ ದೇವಸ್ಥಾನವಾಗಿದೆ. ಹಿಂದೂ ಪುರಾಣದ ಪ್ರಕಾರ ಇದು 51 ಶಕ್ತಿ ಪೀಠದಲ್ಲಿ ಒಂದಾಗಿದ್ದು, ಮಾತಬರಿ ಎಂದೂ ಕರೆಯಲ್ಪಡುತ್ತದೆ. ಕಲ್ಯಾಣ್ ಸಾಗರ್ ಇಲ್ಲಿ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ.  ಉದಯಪುರ್ ನ ಇನ್ನೊಂದು ದೇವಸ್ಥಾನವಾದ ಭುವನೇಶ್ವರಿ ದೇವಿಯ ಭುಬನೇಶ್ವರಿ ದೇವಸ್ಥಾನವು ಇಲ್ಲಿನ ಇನ್ನೊಂದು ಜನಪ್ರಿಯ ದೇವಸ್ಥಾನವಾಗಿದೆ.

ಪ್ರಸಿದ್ಧ ಬಂಗಾಳಿ ಕವಿಯಾದ ಕಜ್ಹಿ ನಜ್ರುಲ್ ಇಸ್ಲಾಂ ಅವರ ನೆನಪಿಗಾಗಿ ಇರುವ ನಜ್ರುಲ್ ಗ್ರಂಥಗಾರ್ ಎಂಬ ವಾಚನಾಲಯ  ಇಲ್ಲಿನ  ಇನ್ನೊಂದು ಪ್ರೇಕ್ಷಣೀಯ ಸ್ಥಳ.

ಹವಾಮಾನ

ತ್ರಿಪುರಾದ ಹೆಚ್ಚಿನ ಭಾಗದಂತೆ, ವರ್ಷದ ಹೆಚ್ಚಿನ ಸಮಯದಲ್ಲಿ  ಉದಯಪುರ್ ನಲ್ಲಿ ಬಿಸಿ ಹಾಗೂ ಶೈತ್ಯ ವಾತಾವರಣವಿರುತ್ತದೆ.

ಉದಯಪುರ್-ತ್ರಿಪುರಾ ಪ್ರಸಿದ್ಧವಾಗಿದೆ

ಉದಯಪುರ್-ತ್ರಿಪುರಾ ಹವಾಮಾನ

ಉದಯಪುರ್-ತ್ರಿಪುರಾ
29oC / 85oF
 • Patchy rain possible
 • Wind: SSE 15 km/h

ಉತ್ತಮ ಸಮಯ ಉದಯಪುರ್-ತ್ರಿಪುರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಉದಯಪುರ್-ತ್ರಿಪುರಾ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 44 ತ್ರಿಪುರಾ ತುಂಬಾ ಹಾಯುತ್ತಿದ್ದು, ಅಗರ್ತಲದಿಂದ ಉದಯಪುರ್ ಗೆ ಸಂಪರ್ಕ ಕಲ್ಪಿಸುತ್ತದೆ. ಅಗರ್ತಲದಲ್ಲಿ ಉದಯಪುರ್ ನೋಡಲೇಬೇಕಾದ ಸ್ಥಳವಾಗಿದ್ದು, ಇತರ ಸಾರಿಗೆ ವ್ಯವಸ್ಥೆಯೂ ಇದೆ. ರಸ್ತೆಯೂ ಒಳ್ಳೆಯ ಸ್ಥಿತಿಯಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಉದಯಪುರ್ ನ ಹತ್ತಿರದ ರೈಲ್ವೆ ಸ್ಟೇಷನ್ ಅಗರ್ತಲದಲ್ಲಿದೆ. ಸಿಲ್ಚಾರ್-ಲುಮ್ದಿಂಗ್ ಮಾರ್ಗದಲ್ಲಿ ಒಂದು ಸ್ಟೇಷನ್ ರಾಜಧಾನಿಯಲ್ಲಿದೆ. ಯಾತ್ರಿಗಳು ಗುವಾಹಟಿಗೆ ಬಂದು ಅಲ್ಲಿಂದ ಇಂಟರ್-ಸಿಟಿ ರೈಲು ಮೂಲಕ ಲುಮ್ದಿಂಗ್ ಅಥವಾ ಸಿಲ್ಚಾರ್ ಅನ್ನು ತಲುಪಬಹುದು. ಇಲ್ಲಿಂದ ಅಗರ್ತಲಕ್ಕೆ ಮತ್ತೊಂದು ರೈಲು ಹಿಡಿಯಬೇಕಾಗುತ್ತದೆ. ಅಗರ್ತಲದಿಂದ ಉದಯಪುರ್ ಗೆ ನಿಯಮಿತ ಸಾರಿಗೆ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಉದಯಪುರ್ ನಲ್ಲಿ ಯಾವುದೇ ವಿಮಾನ ನಿಲ್ಧಾಣವಿಲ್ಲ. ಅಗರ್ತಲ ಇಲ್ಲಿನ ಹತ್ತಿರದ ವಿಮಾನ ನಿಲ್ದಾಣ. ಸಿನ್ಗೆರ್ಭಿಲ್ ವಿಮಾನನಿಲ್ದಾಣ ಅಗರ್ತಲ ನಗರದಿಂದ 10 ಕಿಲೋಮೀಟರು ದೂರದಲ್ಲಿದ್ದು, ರಾಜಧಾನಿ ಉದಯಪುರ್ ನಿಂದ 55 ಕಿಲೋಮೀಟರು ದೂರದಲ್ಲಿದೆ. ವಿಮಾನನಿಲ್ದಾಣದಿಂದ ಉದಯಪುರ್ ಗೆ ನಿಯಮಿತ ಬಸ್ ಹಾಗೂ ಟ್ಯಾಕ್ಸಿ ವ್ಯವಸ್ತೆಯಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
14 Oct,Mon
Return On
15 Oct,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Oct,Mon
Check Out
15 Oct,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Oct,Mon
Return On
15 Oct,Tue
 • Today
  Udaipur-Tripura
  29 OC
  85 OF
  UV Index: 7
  Patchy rain possible
 • Tomorrow
  Udaipur-Tripura
  28 OC
  82 OF
  UV Index: 7
  Patchy rain possible
 • Day After
  Udaipur-Tripura
  28 OC
  83 OF
  UV Index: 7
  Patchy rain possible

Near by City