Search
 • Follow NativePlanet
Share

ಧಲೈ- ಅರಣ್ಯ ಮತ್ತು ಬೆಟ್ಟಗಳಿಂದ ಸುತ್ತುವರೆದ ಪ್ರದೇಶ

9

ಧಲೈ ಇತ್ತೀಚೆಗೆ ತ್ರಿಪುರದಲ್ಲಿ ರೂಪುಗೊಂಡಿರುವ ಜಿಲ್ಲೆ. ಧಲೈ ಜಿಲ್ಲೆ ತನ್ನ ಗಡಿಯನ್ನು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿದೆ. ಧಲೈ ಜಿಲ್ಲೆಯ ಮುಖ್ಯಕೇಂದ್ರ ಅಂಬಸ್ಸಾ. ಈ ಜಿಲ್ಲೆಯನ್ನು 1995ರಲ್ಲಿ ರೂಪಿಸಲಾಯಿತು. ಪಂಚಾಯತ್ ರಾಜ್ ಸಚಿವಾಲಯವು ಈ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆಯಾಗಿ ಗುರುತಿಸಿದೆ.

ಧಲೈ ರಾಜಧಾನಿ ಅಗರ್ತಲಾದಿಂದ 90 ಕಿಮೀ ದೂರದಲ್ಲಿದೆ. ರಾಜಧಾನಿಯಿಂದ ಇಲ್ಲಿಗೆ ರಸ್ತೆಯ ಮೂಲಕ 3 ಘಂಟೆಗಳ ಪ್ರಯಾಣ.

ಪ್ರಾಕೃತಿಕ ಸೌಂದರ್ಯ

ಧಲೈ, ಅರಣ್ಯ ಮತ್ತು ಬೆಟ್ಟಗಳಿಂದ ಸುತ್ತುವರೆದ ಸುಂದರ ಜಿಲ್ಲೆ. ತ್ರಿಪುರಾಗೆ ಭೇಟಿ ನೀಡುವ ಪ್ರವಾಸಿಗರನ್ನು ಇಲ್ಲಿಯ ದಟ್ಟ ಅರಣ್ಯಗಳು ತಮ್ಮ ಸೌಂದರ್ಯದಿಂದ ಸೆಳೆದು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಭೇಟಿ ನೀಡುವಂತೆ ಮಾಡುತ್ತವೆ.

ಇಲ್ಲಿ ಯಾವುದೇ ಮುಖ್ಯ ಕೈಗಾರಿಕೆಗಳಿಲ್ಲ. ಇಲ್ಲೊಂದು ಅನಾನಸ್ ರಸ ಸಾಂದ್ರೀಕರಣ (ಪೈನಾಪಲ್ ಜ್ಯೂಸ್ ಕಾನ್ಸನ್ಟ್ರೇಶನ್) ಘಟಕವನ್ನು ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ಕಾರ್ಪೋರೇಷನ್ ಲಿಮಿಟೆಡ್ನವರು ಸ್ಥಾಪಿಸಿದ್ದಾರೆ. ನಿರಮ್ಯಾಕ್ ಈ ಜಿಲ್ಲೆಯಲ್ಲಿದೆ. ಧಲೈನಲ್ಲಿ ಹೆಸರಿಸಬಹುದಾದ ಕೈಗಾರಿಕೆ ಇದೊಂದೆ. ಇಲ್ಲಿಯ ಹಳ್ಳಿಗರು ಕರಕುಶಲ ವಸ್ತು ತಯಾರಿಕೆಯಲ್ಲಿ ಸಿದ್ಧಹಸ್ತರು. ಧಲೈ ಅಗರಬತ್ತಿಗಳಿಗೆ ಕೂಡ ಹೆಸರುವಾಸಿಯಾಗಿದೆ.

ಧಲೈನ ಸುತ್ತಮುತ್ತಲ ಪ್ರವಾಸಿ ತಾಣಗಳು

ತ್ರಿಪುರಕ್ಕೆ ಭೇಟಿನೀಡುವ ಪ್ರವಾಸಿಗರನ್ನು ಧಲೈ ಕೈಬೀಸಿ ಕರೆಯುತ್ತದೆ. ಲೋಂಗಥರೈ ಮಂದಿರ, ಕಮಲೇಶ್ವರಿ ಮಂದಿರ, ರಾಸ ಮೇಳ ಇಲ್ಲಿನ ಕೆಲವು ಪ್ರವಾಸಿ ಆಕರ್ಷಣೆಗಳು. ತ್ರಿಪುರ ಪ್ರವಾಸೋದ್ಯಮದ ಬಹುಮುಖ್ಯ ಭಾಗ ಧಲೈ.

ಹೋಗುವುದು ಹೇಗೆ?

ತ್ರಿಪುರದಲ್ಲಿರುವ ಏಕಮಾತ್ರ ವಿಮಾನ ನಿಲ್ದಾಣ ಸಿಂಗರಭಿಲ್ನಲ್ಲಿದೆ. ಇದು ಅಗರ್ತಲದಿಂದ 12 ಕಿಮೀ ದೂರದಲ್ಲಿದೆ. ವಿಮಾನದ ಮೂಲಕ ಧಲೈಗೆ ಬರಲಿಚ್ಛಿಸುವ ಪ್ರವಾಸಿಗರು ಅಗರ್ತಲಕ್ಕೆ ಬಂದು ನಂತರ ಇಲ್ಲಿಗೆ ಬರಬೇಕು. ಇದು 3 ಘಂಟೆಗೂ ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಧಲೈ ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ರೈಲು ನಿಲ್ದಾಣ ನಿರ್ಮಾಣವಾಗಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣ ಅಗರ್ತಲಾ. ಅಗರ್ತಲಾದಿಂದ ಲುಂಡಿಂಗ್‍ಗೆ ರಾತ್ರಿ ರೈಲು ಸೌಲಭ್ಯವಿರುವುದರಿಂದ ಗುವಾಹಟಿಗೆ ತಲುಪಬಹುದು. ಗುವಾಹಟಿಯಲ್ಲಿ ಈಶಾನ್ಯ ರೈಲ್ವೇಯ ಅತಿ ದೊಡ್ಡ ರೈಲು ನಿಲ್ದಾಣವಿದೆ. ರಾಷ್ಟ್ರೀಯ ಹೆದ್ದಾರಿ 44, ಧಲೈ ಮತ್ತು ತ್ರಿಪುರದ ಉಳಿದ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜಧಾನಿಯಿಂದ ಧಲೈಗೆ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯವಿದೆ. ರಾಜಧಾನಿಯಿಂದ ಇಲ್ಲಿಗೆ ತಲುಪಲು 3 ಘಂಟೆಗಳು ಬೇಕು.

ಹವಾಮಾನ

ಧಲೈ ಜಿಲ್ಲೆಯಲ್ಲಿ ವರ್ಷ ಪೂರ್ತಿ ಆಹ್ಲಾದಕರವಾದ ವಾತಾವರಣವಿರುತ್ತದೆ.

 

 

 

 

ಧಲೈ ಪ್ರಸಿದ್ಧವಾಗಿದೆ

ಧಲೈ ಹವಾಮಾನ

ಧಲೈ
32oC / 90oF
 • Haze
 • Wind: SSW 15 km/h

ಉತ್ತಮ ಸಮಯ ಧಲೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಧಲೈ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 44, ಧಲೈ ಮತ್ತು ತ್ರಿಪುರದ ಉಳಿದ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜಧಾನಿಯಿಂದ ಧಲೈಗೆ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯವಿದೆ. ರಾಜಧಾನಿಯಿಂದ ಇಲ್ಲಿಗೆ ತಲುಪಲು 3 ಘಂಟೆಗಳು ಬೇಕು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಧಲೈ ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ರೈಲು ನಿಲ್ದಾಣ ನಿರ್ಮಾಣವಾಗಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣ ಅಗರ್ತಲಾ. ಅಗರ್ತಲಾದಿಂದ ಲುಂಡಿಂಗ್‍ಗೆ ರಾತ್ರಿ ರೈಲು ಸೌಲಭ್ಯವಿರುವುದರಿಂದ ಗುವಾಹಟಿಗೆ ತಲುಪಬಹುದು. ಗುವಾಹಟಿಯಲ್ಲಿ ಈಶಾನ್ಯ ರೈಲ್ವೇಯ ಅತಿ ದೊಡ್ಡ ರೈಲು ನಿಲ್ದಾಣವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತ್ರಿಪುರದಲ್ಲಿರುವ ಏಕಮಾತ್ರ ವಿಮಾನ ನಿಲ್ದಾಣ ಸಿಂಗರಭಿಲ್ನಲ್ಲಿದೆ. ಇದು ಅಗರ್ತಲದಿಂದ 12 ಕಿಮೀ ದೂರದಲ್ಲಿದೆ. ವಿಮಾನದ ಮೂಲಕ ಧಲೈಗೆ ಬರಲಿಚ್ಛಿಸುವ ಪ್ರವಾಸಿಗರು ಅಗರ್ತಲಕ್ಕೆ ಬಂದು ನಂತರ ಇಲ್ಲಿಗೆ ಬರಬೇಕು. ಇದು 3 ಘಂಟೆಗೂ ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Oct,Wed
Return On
17 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Oct,Wed
Check Out
17 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Oct,Wed
Return On
17 Oct,Thu
 • Today
  Dhalai
  32 OC
  90 OF
  UV Index: 6
  Haze
 • Tomorrow
  Dhalai
  28 OC
  83 OF
  UV Index: 6
  Light drizzle
 • Day After
  Dhalai
  28 OC
  83 OF
  UV Index: 6
  Patchy rain possible

Near by City