Search
  • Follow NativePlanet
Share
ಮುಖಪುಟ » ಸ್ಥಳಗಳು » ಧಲೈ » ಹವಾಮಾನ

ಧಲೈ ಹವಾಮಾನ

ಮಳೆಗಾಲದ ಕೊನೆಯ ದಿನಗಳು ಚಳಿಗಾಲದ ಆರಂಭದ ದಿನಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಅಂದರೆ ಅಕ್ಟೋಬರ್ ನಂತರ ಮಾರ್ಚ್-ಏಪ್ರಿಲ್ವರೆಗೆ ಭೇಟಿ ನೀಡಲು ಸೂಕ್ತ ಸಮಯ. ಹೆಚ್ಚು ಮಳೆಯಾಗಲಿ ಚಳಿಯಾಗಲಿ ಈ ಸಮಯದಲ್ಲಿ ಇರುವುದಿಲ್ಲ. ಆದರೂ ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯುವುದು ಉತ್ತಮ.

ಬೇಸಿಗೆಗಾಲ

ಬೇಸಿಗೆ ಕಾಲ ಮಾರ್ಚ-ಜುಲೈ. ಈ ಸಮಯದಲ್ಲಿ ಉಷ್ಣಾಂಶವು 36-28 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಪ್ರವಾಸಿಗರು ಈ ಉಷ್ಣತೆಯನ್ನು ಸಹಿಸಬಲ್ಲವರಾದರೆ ತಾಪಮಾನದಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಸಿದ್ಧತೆಗಳೊಂದಿಗೆ ಇಲ್ಲಿಗೆ ಹೋಗಬಹುದು.

ಮಳೆಗಾಲ

ಧಲೈ ಮಳೆಗಾಲದಲ್ಲಿ ಹೊಸ ರೂಪ ತಳೆಯುತ್ತದೆ. ಇಲ್ಲಿ ಆಗಸ್ಟ್-ಅಕ್ಟೋಬರ್ ಮಳೆಗಾಲ. ಈ ಸಮಯದಲ್ಲಿ 220 ಸೆಂಮೀ ದಾಖಲೆ ಮಳೆಯಾಗುತ್ತದೆ. ಮಳೆಗಾಲದಲ್ಲಿ ಕಾಡು ಬೆಟ್ಟಗಳ ಈ ಪ್ರದೇಶದ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿನ ತಾಪಮಾನವು 17 ಡಿಗ್ರಿ ಸೆಲ್ಸಿಯಸ್‍ನಿಂದ ದ 6 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದಕ್ಕಿಂತ ಕಮ್ಮಿ ಕೂಡ ಆಗಬಹುದು. ಆದ್ದರಿಂದ ಈ ಸಮಯದಲ್ಲಿ ಭೇಟಿ ನೀಡುವವರು ಅವಶ್ಯಕ ತಯಾರಿಯೊಂದಿಗೆ ಹೋಗುವುದು ಒಳಿತು. ಅಕ್ಟೋಬರ್-ಫೆಬ್ರವರಿ ಚಳಿಗಾಲ.