Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಸಿಪಹಿಜಾಲ ವನ್ಯಮೃಗ ಅಭಯಾರಣ್ಯ

ಸಿಪಹಿಜಾಲ ವನ್ಯಮೃಗ ಅಭಯಾರಣ್ಯ, ಅಗರ್ತಲಾ

1

ಅಗರ್ತಲಾ ನಗರ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ  ಸಿಪಿಹಿಜಾಲ ವನ್ಯಮೃಗ ಅಭಯಾರಣ್ಯ, ತನ್ನ ಹಸಿರು ಮತ್ತು ಹೇರಳವಾದ ಭೂದೃಶ್ಯಕ್ಕೆ ಹೆಸರುವಾಸಿಯಾಗಿದೆ. ಇದು 18.5 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ. ಮತ್ತು ವಲಸೆ ಹಕ್ಕಿಗಳು ಮತ್ತು ಪ್ರಾಣಿಗಳ ನೆಲೆಯಾಗಿದೆ.

ವನ್ಯಮೃಗ ಅಭಯಾರಣ್ಯವನ್ನು 1972 ರಲ್ಲಿ ನಿರ್ಮಿಸಲಾಯಿತು ಮತ್ತು ಅದೇ ವರ್ಷದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೆಸರು ಗಳಿಸಿದೆ. ಇಲ್ಲಿ 150 ಪ್ರಭೇದಗಳಿಗಿಂತ ಹೆಚ್ಚು ವಲಸೆ ಪಕ್ಷಿಗಳನ್ನು ಪತ್ತೆಹಚ್ಚಲಾಗಿದೆ. ಕಾಡಿನ  ಹೊರತಾಗಿ, ಈ ಅಭಯಾರಣ್ಯದಲ್ಲಿ  ಒಂದು ಜಿಂಕೆ ಪಾರ್ಕ್ ಮತ್ತು ಸರೋವರಗಳನ್ನು ಕಾಣಬಹುದಾಗಿದೆ.

ಈ ವನ್ಯಮೃಗ ಅಭಯಾರಣ್ಯವನ್ನು ಮೂಲತಃ ಇಲ್ಲಿ ವಾಸಿಸುವ ಪ್ರಾಣಿಗಳ ಪ್ರತ್ಯೇಕತೆಯ ಆಧಾರದ ಮೇಲೆ ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಮಾಂಸಾಹಾರಿಗಳ ವಿಭಾಗ, ಸಸ್ತನಿ ವಿಭಾಗ, ಗೊರಸುಳ್ಳ ಪ್ರಾಣಿಗಳ ವಿಭಾಗ, ಸರೀಸೃಪ ವಿಭಾಗ ಮತ್ತು ಪಂಜರ ವಿಭಾಗ. ಸಿಪಹಿಜಾಲ ವನ್ಯಮೃಗ ಅಭಯಾರಣ್ಯ ಅಬಸಾರಿಕಾ(ಅಭಿಸಾರಿಕಾ) ಮತ್ತು ಅಮೃತ್ ಸಾಗರ ಎಂಬ ಎರಡು ನೈಸರ್ಗಿಕ ಕೆರೆಗಳನ್ನು ಹೊಂದಿದೆ. ಇಲ್ಲಿ ದೋಣಿ ವಿಹಾರ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಭಯಾರಣ್ಯದ ವ್ಯಾಪ್ತಿಯೊಳಗೆ ವಿಶ್ರಾಂತಿ ಗೃಹಗಳನ್ನೂ ಕೂಡ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed