ಸಿಲ್ಚಾರ್ ನಿಂದ 40 ಕಿ.ಮೀ ದೂರದಲ್ಲಿರುವ ಭುವನ್ ಮಹಾದೇವ್ ದೇವಾಲಯ ಶಿವ ದೇವರ ದೇವಾಲಯವಾಗಿದ್ದು ಮಧ್ಯಕಾಲೀನ ಕಾಲದ ನಿರ್ಮಾಣವಾಗಿದೆ. ಇದು ಭುವನ್ ಬೆಟ್ಟದ ಮೇಲೆ ಇದೆ ಹಾಗೂ ಇದನ್ನು ಕಚಾರಿ ರಾಜ ಲಕ್ಷ್ಮಿ ಚಂದ್ರ ನಿರ್ಮಾಣ ಮಾಡಿದ್ದನು. ಇಲ್ಲಿ ಶಿವ ದೇವರು ಮತ್ತು ಪಾರ್ವತಿ ದೇವಿಯ ಮೂರ್ತಿಗಳಿವೆ. ಹಾಗೂ ಇದನ್ನು ಬಹಳ ಗಟ್ಟಿಯಾದ ಬಂಡೆಯಿಂದ ಕೆತ್ತಲಾಗಿದೆ. ಇಲ್ಲಿನ ವಾಸ್ತು ಶಿಲ್ಪ ಮತ್ತು ಶಿಲ್ಪಕಲೆ ಬಹಳ ಉನ್ನತವಾಗಿದ್ದು ಆ ಕಾಲದ ವಾಸ್ತು ಶಿಲ್ಪ ಮತ್ತು ಶಿಲ್ಪಕಲೆಯ ಸೌಂದರ್ಯ ಮತ್ತು ಸೂಕ್ಷ್ಮ ಕಲೆಗೆ ಒಂದು ಉತ್ತಮ ಉದಾಹರಣೆಯಾಗಿದೆ.
ಭುವನ್ ಮಹಾದೇವ್ ದೇವಾಲಯ ದೇಶದಾದ್ಯಂತದ ಭಕ್ತರನ್ನು ವರ್ಷವಿಡಿ ಹಾಗೂ ವಿಶೇಷವಾಗಿ ಶಿವರಾತ್ರಿಯ ಸಂದರ್ಭದಲ್ಲಿ ಆಕರ್ಷಿಸುತ್ತದೆ. ಬೆಟ್ಟದ ಕೆಳ ಭಾಗದಿಂದ ಮೇಲಿನ ತನಕದ ಚಾರಣ ನಿಮ್ಮನ್ನು ಶಾಂತ ಪ್ರದೇಶಕ್ಕೆ ಒಯ್ಯುತ್ತದೆ. ಇದರ ಜೊತೆಗೆ ಇಲ್ಲೇ ಪಕ್ಕದ ಪ್ರದೇಶಗಳ ವಿಹಂಗಮ ನೋಟ ನಿಮ್ಮನ್ನು ಬೆರಗಾಗಿಸದೇ ಇರದು.