Search
 • Follow NativePlanet
Share
ಮುಖಪುಟ » ಸ್ಥಳಗಳು» ಲುಂಗ್ಲೈ

ಲುಂಗ್ಲೈ: ಮಿಜೋರಂನ ಕಲ್ಲುಸೇತುವೆಯ ಪಟ್ಟಣ

11

ಲುಂಗ್ಲೈ ಮಿಜೋರಂನ ಏಳು ಜಿಲ್ಲೆಗಳಲ್ಲಿ ಒಂದು. ಇದು ರಾಜ್ಯದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯ ಮುಖ್ಯ ಕೇಂದ್ರ ಕಛೇರಿಯಾಗಿದ್ದು ಇಲ್ಲಿನ ಮುಖ್ಯ ಪಟ್ಟಣವಾಗಿದೆ. ಲುಂಗ್ಲೈ ಅನ್ನು ಲುಂಗ್ಲೇಹ್ ಎಂದು ಕೂಡ ಕರೆಯುತ್ತಾರೆ. ಇದರರ್ಥ ‘ಕಲ್ಲಿನ ಸೇತುವೆ’. ನಾಗಸಿಹ್ದಲ್ಲಿನ ನದಿಯೊಂದರಲ್ಲಿ ಕಲ್ಲೊಂದು ಸೇತುವೆಯ ಹಾಗೆ ಕಾಣಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ತ್ಲವಾಂಗ್ ನದಿಯ ಉಪನದಿ. ಈ ಕಲ್ಲಿನಿಂದ ಲುಂಗ್ಲೈ ತನ್ನ ಹೆಸರನ್ನು ಪಡೆದುಕೊಂಡಿದೆ.

ಇದು ಪ್ರಕೃತಿಪ್ರಿಯರಿಗೆ ಸ್ವರ್ಗವಿದ್ದಂತೆ. ಈ ಪ್ರದೇಶದ ಸುತ್ತಮುತ್ತಲು ಹಲವು ಜನಜಂಗುಳಿಯಿಂದ ದೂರವಾದ ಪ್ರಶಾಂತ ತಾಣಗಳಿವೆ. ಇಲ್ಲಿಂದ 50 ಕಿಮೀ ದೂರದಲ್ಲಿ ಬುದ್ಧನ ವಿಗ್ರಹವೊಂದಿದೆ. ಕುತೂಹಲಕಾರಿ ವಿಷಯವೆಂದರೆ ಇಡೀ ರಾಜ್ಯದಲ್ಲಿ ಇರುವುದು ಇದೊಂದೇ ಬುದ್ಧನ ವಿಗ್ರಹ. ಇದು ಇಲ್ಲಿಗೆ ಹೇಗೆ ಬಂತು ಎಂಬುದು ಇಂದಿಗೂ ತಿಳಿಯದ ವಿಷಯ. ಇದು ಈ ಪ್ರದೇಶದ ಪ್ರವಾಸವನ್ನು ಆಸಕ್ತಿದಾಯಕವಾಗಿಸಿದೆ.

ಸುತ್ತಮುತ್ತಲ ಪ್ರವಾಸಿ ತಾಣಗಳು

ಲುಂಗ್ಲೈನಲ್ಲಿ ಹಲವು ಪ್ರವಾಸಿ ತಾಣಗಳಿವೆ. ಕವ್ನಾಂಗ್ಲುಂಗ್ ಅರಣ್ಯಧಾಮ, ಕಾವ್ಮಜಾವಿ ಉದ್ಯಾನವನ, ಸಾಯಿಕುಟಿ ಹಾಲ್ ಮತ್ತು ಟರ್ಫ್ ಫುಟ್ಬಾಲ್ ಮೈದಾನ- ತೌಮ್ಲುಯೈಯ ಮೌಲ್. ಲುಂಗ್ಲೈ ಪ್ರವಾಸೋದ್ಯಮವು ಹಲವು ನದೀ ತೀರದ ಪಿಕ್ನಿಕ್ ತಾಣಗಳಿಗೆ ಪ್ರಸಿದ್ಧವಾಗಿದೆ.

ತಲುಪುವುದು ಹೇಗೆ?

ಲುಂಗ್ಲೈನ ಕೇಂದ್ರಕಛೇರಿಯು ಮಿಜೋರಂನ ರಾಜಧಾನಿ ಐಜ್ವಾಲ್ನಿಂದ 175 ಕಿಮೀ ದೂರದಲ್ಲಿದೆ. ಇದು ರಾಜಧಾನಿ ಮತ್ತು ಮಿಜೋರಂನ ಉಳಿದ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಹವಾಮಾನ

ಲುಂಗ್ಲೈ ಜಿಲ್ಲೆಯು ವರ್ಷ ಪೂರ್ತಿ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತದೆ. ವರ್ಷದ ಮೂರು ಋತುಗಳಲ್ಲೂ ಉಷ್ಣತೆಯು ಎಂದೂ ತಡೆಯಲಾರದಷ್ಟು ಹೆಚ್ಚಾಗುವುದೇ ಇಲ್ಲ. ಆದ್ದರಿಂದ ಪ್ರವಾಸಿಗರು ಯಾವುದೇ ಸಮಯದಲ್ಲಾದರೂ ಇಲ್ಲಿಗೆ ಭೇಟಿ ನೀಡಬಹುದು.

ಲುಂಗ್ಲೈ ಪ್ರಸಿದ್ಧವಾಗಿದೆ

ಲುಂಗ್ಲೈ ಹವಾಮಾನ

ಲುಂಗ್ಲೈ
32oC / 90oF
 • Haze
 • Wind: SSW 15 km/h

ಉತ್ತಮ ಸಮಯ ಲುಂಗ್ಲೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಲುಂಗ್ಲೈ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 54 ಲುಂಗ್ಲೈ ಅನ್ನು ಮಿಜೋರಂನ ಉಳಿದ ಭಾಗಗಳೊಂದಿಗೆ ಬೆಸೆಯುತ್ತದೆ. ರಸ್ತೆಗಳು ಇಲ್ಲಿನ ಮುಖ್ಯ ಸಾರಿಗೆ ವ್ಯವಸ್ಥೆ. ರಾಜ್ಯದ ಎಲ್ಲ ಭಾಗಗಳಿಂದ ಇಲ್ಲಿಗೆ ಬಸ್ ಸೌಲಭ್ಯವಿದೆ. ಖಾಸಗಿ ವಾಹನಗಳು ಬಾಡಿಗೆಗೆ ಕೂಡ ಸಿಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಿಜೋರಂ ರಾಜ್ಯದಲ್ಲಿ ಯಾವುದೇ ರೈಲ್ವೇ ಮಾರ್ಗಗಳಿಲ್ಲ. ಇಲ್ಲಿಗೆ ಸಮೀಪದ ರೈಲ್ವೇ ನಿಲ್ದಾಣ ಸಿಲ್ಚಾರ್ನಲ್ಲಿದೆ. ಸಿಲ್ಚಾರ್ ರೈಲ್ವೇ ನಿಲ್ದಾಣದಲ್ಲಿ ಲುಂಡಿಂಗ್ ಗೆ ನ್ಯಾರೋಗೇಜ್ ಮಾರ್ಗವಿದೆ. ಇಲ್ಲಿಂದ ಪ್ರಯಾಣಿಕರು ಗುವಹಾಟಿಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬೇಕು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಲುಂಗ್ಲೈಗೆ ಸಮೀಪದ ವಿಮಾನ ನಿಲ್ದಾಣ ಲೆಂಗ್ಪೈ ಇಲ್ಲಿಗೆ 193 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಇಲ್ಲಿಗೆ ಮೂರು ಗಂಟೆಗಿಂತ ಕಡಿಮೆ ಪ್ರಯಾಣ. ಈ ವಿಮಾನ ನಿಲ್ದಾಣಕ್ಕೆ ದೇಶದ ಉಳಿದ ಭಾಗಗಳ ವಿಮಾನಗಳ ಸೌಲಭ್ಯವಿದೆ. ಗುವಹಾಟಿ, ಇಂಪಾಲ, ಅಗರತಾಲ ಮತ್ತು ಕೊಲ್ಕತ್ತಾಗಳಿಂದ ಇಲ್ಲಿಗೆ ನೇರ ವಿಮಾನ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  Lunglei
  32 OC
  90 OF
  UV Index: 6
  Haze
 • Tomorrow
  Lunglei
  20 OC
  68 OF
  UV Index: 7
  Partly cloudy
 • Day After
  Lunglei
  21 OC
  70 OF
  UV Index: 7
  Partly cloudy

Near by City