Search
  • Follow NativePlanet
Share
ಮುಖಪುಟ » ಸ್ಥಳಗಳು » ಲುಂಗ್ಲೈ » ಹವಾಮಾನ

ಲುಂಗ್ಲೈ ಹವಾಮಾನ

ಚಳಿಗಾಲ ಲುಂಗ್ಲೈಗೆ ಪ್ರವಾಸ ಹೊರಡಲು ಸೂಕ್ತ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು ಪ್ರವಾಸಕ್ಕೆ ಸೂಕ್ತವಾಗಿರುತ್ತದೆ. ಸಾಹಸಪ್ರಿಯ ಮತ್ತು ಉತ್ಸಾಹಿ ಪ್ರವಾಸಿಗರು ಲುಂಗ್ಲೈನ ಅಜ್ಞಾತ ಪ್ರದೇಶಗಳನ್ನು ನೋಡಬಹುದು. ಚಳಿಗಾಲದಲ್ಲಿ ಉಣ್ಣೆಯ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.

ಬೇಸಿಗೆಗಾಲ

ಲುಂಗ್ಲೈನಲ್ಲಿ ಸಾಧಾರಣ ಬೇಸಿಗೆಯಿದ್ದು ಗರಿಷ್ಠ ಉಷ್ಣಂಶವು 30 ಡಿಗ್ರಿ ಸೆಲ್ಸಿಯಸ್ನಿಂದ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಾರ್ಚ್ನಿಂದ ಮೇವರೆಗೆ ಬೇಸಿಗೆ. ಇದು ಪ್ರವಾಸಕ್ಕೆ ಒಳ್ಳೆಯ ಸಮಯ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ಉಷ್ಣತೆಯು 26 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಸಮಯದಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಜಿಲ್ಲೆಯ ಹಲವು ಭಾಗಗಳನ್ನು ತಲುಪುವುದು ಕಷ್ಟವಾಗುತ್ತದೆ.

ಚಳಿಗಾಲ

ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ನಿಂದ 11 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಸಮಯದಲ್ಲಿ ಪ್ರವಾಸ ಹೊರಡುವಾಗ ಬೆಚ್ಚನೆಯ ಉಡುಪು ಕೊಂಡೊಯ್ಯುವುದು ಉತ್ತಮ.